ಭಾರತದಲ್ಲಿ 521 ಕಿ.ಮೀ ರೇಂಜ್ ನೀಡುವ ಚೀನಾ ಕಂಪನಿಯ ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ

ಬಿವೈಡಿ ತನ್ನ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತು. ಈ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.99 ಲಕ್ಷವಾಗಿದೆ.ಈ ಎಲೆಕ್ಟ್ರಿಕ್ ಎಸ್‍ಯುವಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಈ ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಗೆ ಮೊದಲ ತಿಂಗಳಲ್ಲೇ 2,000 ಸಾವಿರ ಬುಕ್ಕಿಂಗ್‌ಗಳನ್ನು ಮಾಡಿದೆ. . ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಚೀನಾದ ತಯಾರಕರು ಹೇಳಿಕೊಂಡಿದ್ದಾರೆ. ಈ ಹಿಂದೆ, ಬಿವೈಡಿ ಕಂಪನಿಯು ಈ ವರ್ಷದ ಜನವರಿಯಲ್ಲಿ 340 ಯೂನಿಟ್ ಅಟೊ 3 ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿತರಿಸಿದೆ ಎಂದು ಹೇಳಿತ್ತು.

ಚೀನಾ ಕಂಪನಿಯ ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ

ಬಿವೈಡಿ ಕಂಪನಿಯು ಕೇವಲ ಎರಡು ತಿಂಗಳಲ್ಲಿ ಭಾರತದ ವಿವಿಧ ನಗರಗಳಿಗೆ ಬಿವೈಡಿ ಆಟೋ 3 ಎಲೆಕ್ಟ್ರಿಕ್ ಎಸ್‍ಯುವಿಯ 700 ಯೂನಿಟ್‌ಗಳನ್ನು ವಿತರಿಸಿದ್ದಾರೆ. BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಮಾತನಾಡಿ, ಭಾರತದಲ್ಲಿ ಈ ಮೈಲಿಗಲ್ಲನ್ನು ಆಚರಿಸಲು ನಾವು ಸಂತೋಷಪಡುತ್ತೇವೆ. ಫೆಬ್ರವರಿಯ ಹೊತ್ತಿಗೆ, ನಾವು ಕೇವಲ ಎರಡು ತಿಂಗಳಲ್ಲಿ ಭಾರತದ ವಿವಿಧ ನಗರಗಳಲ್ಲಿ 700 ಯೂನಿಟ್‌ಗಳನ್ನು ವಿತರಿಸಿದ್ದೇವೆ.

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಹೆಚ್ಚು ಹೆಚ್ಚು ಗ್ರಾಹಕರು ನಮ್ಮ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಬಿವೈಡಿ ಕಂಪನಿಯು ತನ್ನ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯ 340 ಯುನಿಟ್‌ಗಳನ್ನು ದೇಶಾದ್ಯಂತ ತಮ್ಮ ಡೀಲರ್ ಮೂಲಕ ಗ್ರಾಹಕರಿಗೆ ವಿತರಿಸಲಾಗುತ್ತದೆ. ಈ ಬಿವೈಡಿ ಕಂಪನಿಯು ಈ ಹೊಸ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಚೀನಾ ಕಂಪನಿಯ ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ

ಆಸಕ್ತ ಖರೀದಿದಾರರು ಈಗ 50,000 ರೂಪಾಯಿಗಳನ್ನು ಪಾವತಿಸಿ ಬುಕ್ ಮಾಡಬಹುದು. ಬಿವೈಡಿ ಕಂಪನಿಯು ಈ ಹೊಸ ಎಸ್‍ಯುವಿಗಾಗಿ 2,000 ಕ್ಕಿಂತ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಚೀನಾದ ತಯಾರಕರು ಹೇಳಿಕೊಂಡಿದ್ದಾರೆ. ಈ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಇ6 ಎಂಪಿವಿಯ ನಂತರ ಬ್ರ್ಯಾಂಡ್‌ನ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ. ಇದು SKD (ಸೆಮಿ-ನಾಕ್ಡ್ ಡೌನ್) ಮಾರ್ಗದ ಮೂಲಕ ಬರುತ್ತದೆ ಮತ್ತು ಚೆನ್ನೈ ಬಳಿಯ ಬ್ರ್ಯಾಂಡ್‌ನ ಶ್ರೀಪೆರಂಬದೂರ್ ಮೂಲದ ಸ್ಥಾವರದಲ್ಲಿ ಜೋಡಿಸಲಾಗಿದೆ. ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 60kWh ಬಿವೈಡಿ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಚೀನಾ ಕಂಪನಿಯ ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ

ಇದು ಪೂರ್ಣ ಚಾರ್ಜ್‌ನಲ್ಲಿ ARAI- ಪ್ರಮಾಣೀಕರಿಸಿದ ಪ್ರಕಾರ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಸ್‍ಯುವಿ 201 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಅನ್ನು 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಈ ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ತನ್ನ ದೊಡ್ಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ. ಇದರ ಜೊತೆಗೆ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಸೇರಿದಂತೆ ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Article Published On: Monday, March 20, 2023, 19:00 [IST]
English summary
Byd atto 3 electric suv 700 units delivery in india more details in kannada
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+