ಭಾರತದಲ್ಲಿ ಚೀನಾ ಕಾರಿಗೆ ಹೆಚ್ಚಾಯ್ತು ಬೇಡಿಕೆ: ದೇಶದಲ್ಲಿ BYD ATTO-3 ಮೊದಲ ವಾರ್ಷಿಕೋತ್ಸವ

BYD ATTO-3 ಕಾರು ಸದ್ಯ ಎಲೆಕ್ಟ್ರಿಕ್ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇಂದು ಈ ಕಾರು ಬಿಡುಗಡೆಯಾಗಿ ಸರಿಯಾಗಿ ಒಂದು ವರ್ಷವಾಗಿದೆ. ಈ ವಾರ್ಷಿಕೋತ್ಸವವನ್ನು ಕಂಪನಿಯು ಅದ್ದೂರಿಯಾಗಿ ಆಚರಿಸಿದೆ.

2022 ಅಕ್ಟೋಬರ್ 11 ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ಬಳಿಕ ಕೇವಲ ಭಾರತ ಮಾತ್ರವಲ್ಲದೇ ಸಿಂಗಾಪುರ್, ನ್ಯೂಜಿಲೆಂಡ್, ಬ್ರೆಜಿಲ್, ಥೈಲ್ಯಾಂಡ್, ಇಸ್ರೇಲ್ ಮತ್ತು ಸ್ವೀಡನ್ ಸೇರಿದಂತೆ ಅನೇಕ ದೇಶಗಳಲ್ಲಿ BYD ಯ ಅತ್ಯುತ್ತಮ ಪ್ರಯಾಣಿಕ ವಾಹನಗಳಲ್ಲಿ ಒಂದಾಗಿ BYD ATTO 3 ಗುರ್ತಿಸಿಕೊಂಡಿದೆ. ಉತ್ತಮ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

byd-atto-3-first-anniversary-in-india

ಪ್ರಸ್ತುತ ಈ SUV 50 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೇವಲ 19 ತಿಂಗಳಲ್ಲಿ ಬರೋಬ್ಬರಿ 5,00,000 ನೇ BYD ATTO 3 ಉತ್ಪಾದನೆಯೊಂದಿಗೆ ಗಮನಾರ್ಹ ಮೈಲಿಗಲ್ಲನ್ನು ತಲುಪಿದೆ. ಇನ್ನು ಭಾರತದ ವಿಷಯಕ್ಕೆ ಬಂದರೆ ಭಾರತೀಯರು ಈ ಕಾರಿಗೆ ಉತ್ತಮ ಸ್ವಾಗತ ನೀಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಮ್ಮ ಡೀಲರ್‌ಶಿಪ್‌ಗಳನ್ನು ಬೆಳೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

BYD ATTO 3 ರ ಮೊದಲ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ "ಪ್ರಕೃತಿಯ ಪರಿಕ್ರಮ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ಅತ್ಯಾಧುನಿಕ ಆಟೋಮೋಟಿವ್ ತಂತ್ರಜ್ಞಾನದೊಂದಿಗೆ ಪ್ರಕೃತಿಯ ಸಾರವನ್ನು ವಿಲೀನಗೊಳಿಸುವ ಒಂದು ವಿಶಿಷ್ಟವಾದ ಡ್ರೈವ್ ಎಂದು ಕಂಪನಿ ಹೇಳಿದೆ. ಈ ಡ್ರೈವ್ BYD ATTO 3 ರ ಸುಸ್ಥಿರ ಭವಿಷ್ಯಕ್ಕಾಗಿ ಅಚಲವಾದ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ತಿಳಿಸಿದೆ.

byd-atto-3-first-anniversary-in-india

BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಮಾತನಾಡಿ, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಇನ್ನೂ ಹೆಚ್ಚಿನ ಜನರಿಗೆ ನಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಲಭ್ಯವಾಗಿಸಲು ಸಜ್ಜಾಗಿದ್ದೇವೆ. ಭಾರತದಲ್ಲಿ BYD ATTO 3 ರ ಯಶಸ್ಸಿಗೆ ಕೊಡುಗೆ ನೀಡಿದ ನಮ್ಮ ಮೌಲ್ಯಯುತ ಗ್ರಾಹಕರು, ಪಾಲುದಾರರು ಮತ್ತು ಮಧ್ಯಸ್ಥಗಾರರಿಗೆ ನಾವು ನಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ ಎಂದರು.

ಒಂದೇ ದಿನ 200 ಇವಿಗಳ ಡೆಲಿವರಿ: BYD ಇಂಡಿಯಾ ಕಳೆದ ಸೆಪ್ಟೆಂಬರ್ 17 ರಂದು ATTO-3 ಎಲೆಕ್ಟ್ರಿಕ್ ಕಾರುಗಳನ್ನು ಆರು ಪ್ರಮುಖ ಭಾರತೀಯ ನಗರಗಳಲ್ಲಿ 200 ಗ್ರಾಹಕರಿಗೆ ವಿತರಿಸಿತ್ತು. ದೆಹಲಿ NCR , ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಲ್ಲಿ ಕಾರ್ಯಕ್ರಮಗಳ ಮೂಲಕ ವಿತರಿಸಲಾಗಿದೆ. ಭಾರತದಲ್ಲಿ ಈ ಚೀನಾ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಕ್ಕೆ ಇದೆ ಉತ್ತಮ ಉದಾಹರಣೆಯಾಗಿದೆ.

byd-atto-3-first-anniversary-in-india

ಹೊಸ BYD ATT0-3 ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಹೇಳುವುದಾದ್ರೆ, ಶೂನ್ಯ ಕಾರ್ಬನ್ ಹೊರಸೂಸುವಿಕೆ ಮತ್ತು ಆಕರ್ಷಕ ವಿನ್ಯಾಸವು ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಈ ಕಾರು ಅಲ್ಟ್ರಾ-ಸೇಫ್ಟಿ ಬ್ಲೇಡ್ ಬ್ಯಾಟರಿ ಮತ್ತು ಬಾರ್ನ್ EV ಪ್ಲಾಟ್‌ಫಾರ್ಮ್ (e-ಪ್ಲಾಟ್‌ಫಾರ್ಮ್ 3.0) ನೊಂದಿಗೆ ಸುಸಜ್ಜಿತವಾಗಿದೆ. BYD-ATTO-3 ಕೇವಲ 50 ನಿಮಿಷಗಳಲ್ಲಿ ಶೇ80 ರಷ್ಟು ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಹೆಚ್ಚಿನ ಬ್ಯಾಟರಿ ಸಾಮರ್ಥ್ಯದೊಂದಿಗೆ ARAI ಪರೀಕ್ಷೆಗಳ ಪ್ರಕಾರ ಸಿಂಗಲ್ ಚಾರ್ಜ್‌ನಲ್ಲಿ 521km ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. 60.48kWh ಬ್ಯಾಟರಿ ಪವರ್‌ನೊಂದಿಗೆ 100 ಕಿ.ಮೀ ವೇಗವನ್ನು ಕೇವಲ 7.3 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೋರ್ಟಿ ಡಿಸೈನ್ ಮತ್ತು ಆಕರ್ಷಕ ಇಂಟೀರಿಯರ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುವುದಾಗಿ ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Wednesday, October 11, 2023, 16:20 [IST]
English summary
Byd atto 3 first anniversary in india
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+