ಚೀನಾ ಕಾರುಗಳ ಖರೀದಿಸಿ ಪರಿಸರ ಪ್ರೇಮ ಮೆರೆದ ಭಾರತೀಯರು: ಒಂದೇ ದಿನ 200 ಇವಿಗಳ ಡೆಲಿವರಿ

BYD ಇಂಡಿಯಾದ ಪ್ರಮುಖ ಎಸ್‌ಯುವಿಯಾದ ATTO-3 ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಬ್ಯಾಚ್ ಅನ್ನು ಸೆಪ್ಟೆಂಬರ್ 17 ರಂದು ಆರು ಪ್ರಮುಖ ಭಾರತೀಯ ನಗರಗಳಲ್ಲಿ ಕಂಪನಿ ಡೆಲಿವರಿ ನೀಡಿದೆ. ಈ ಆರು ನಗರಗಳಲ್ಲಿ ಒಂದೇ ದಿನ ಕಾರ್ಯಕ್ರಮ ನಡೆಸಿ 200 ಗ್ರಾಹಕರಿಗೆ ಕಾರುಗಳನ್ನು ವಿತರಿಸಲಾಗಿದೆ.

ದೆಹಲಿ NCR , ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಲ್ಲಿ ಕಾರ್ಯಕ್ರಮಗಳ ಮೂಲಕ ವಿತರಿಸಲಾಗಿದೆ. BYD ATTO-3 ಗ್ರಾಹಕರು ಡೆಲಿವರಿ ಪಡೆದ ದಿನವನ್ನು ಸ್ಮರಿಸಲು ಮತ್ತು ಗ್ರಾಹಕರಲ್ಲಿ ಸಂತೋಷವನ್ನು ಹರಡಲು ಈ ನಗರಗಳಲ್ಲಿ ಸಾಂಪ್ರದಾಯಿಕ ನೃತ್ಯಗಳು, ಆಟಗಳು, ಸ್ಪರ್ಧೆಗಳನ್ನು ನಡೆಸಿ ಏಕಕಾಲದಲ್ಲಿ ಡೆಲಿವರಿ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

byd-delivers-200-atto-3-electric-passenger-vehicles

ಹೊಸ BYD ATT0-3 ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಹೇಳುವುದಾದ್ರೆ, ಶೂನ್ಯ ಕಾರ್ಬನ್ ಹೊರಸೂಸುವಿಕೆ ಮತ್ತು ಆಕರ್ಷಕ ವಿನ್ಯಾಸವು ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಈ ಕಾರು ಅಲ್ಟ್ರಾ-ಸೇಫ್ಟಿ ಬ್ಲೇಡ್ ಬ್ಯಾಟರಿ ಮತ್ತು ಬಾರ್ನ್ EV ಪ್ಲಾಟ್‌ಫಾರ್ಮ್ (e-ಪ್ಲಾಟ್‌ಫಾರ್ಮ್ 3.0) ನೊಂದಿಗೆ ಸುಸಜ್ಜಿತವಾಗಿದೆ. BYD-ATTO-3 ಕೇವಲ 50 ನಿಮಿಷಗಳಲ್ಲಿ ಶೇ80 ರಷ್ಟು ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಹೆಚ್ಚಿನ ಬ್ಯಾಟರಿ ಸಾಮರ್ಥ್ಯದೊಂದಿಗೆ ARAI ಪರೀಕ್ಷೆಗಳ ಪ್ರಕಾರ ಸಿಂಗಲ್ ಚಾರ್ಜ್‌ನಲ್ಲಿ 521km ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. 60.48kWh ಬ್ಯಾಟರಿ ಪವರ್‌ನೊಂದಿಗೆ 100 ಕಿ.ಮೀ ವೇಗವನ್ನು ಕೇವಲ 7.3 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೋರ್ಟಿ ಡಿಸೈನ್ ಮತ್ತು ಆಕರ್ಷಕ ಇಂಟೀರಿಯರ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುವುದಾಗಿ ಕಂಪನಿ ಹೇಳಿಕೊಂಡಿದೆ.

byd-delivers-200-atto-3-electric-passenger-vehicles

BYD-ATTO-3 ವೈಶಿಷ್ಟ್ಯಗಳನ್ನು ನೋಡುವುದಾದ್ರೆ, L2 ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) BYD ಡಿಪೈಲಟ್, 7 ಏರ್‌ಬ್ಯಾಗ್‌ಗಳು, ಪನಾರಮಿಕ್ ಸನ್‌ರೂಫ್, 12.8-ಇಂಚಿನ (32.5cm) ಅಡಾಪ್ಟಿವ್ ಎಲೆಕ್ಟ್ರಾನಿಕ್ ಪ್ಯಾಡ್ ಅನ್ನು ಒಳಗೊಂಡಿದೆ. ಹೊಲೊಗ್ರಾಫಿಕ್ ಟ್ರಾನ್ಸ್‌ಪರೆಂಟ್ ಇಮೇಜಿಂಗ್ ಸಿಸ್ಟಮ್, NFC ಕಾರ್ಡ್ ಕೀ, ವೆಹಿಕಲ್ ಟು ಲೋಡ್ (VTOL) ಮೊಬೈಲ್ ಪವರ್ ಸ್ಟೇಷನ್ ಮತ್ತು ಇತರ ಪ್ರಮುಖ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

BYD ATT0-3 ಅಕ್ಟೋಬರ್ 2022 ರಲ್ಲಿ ಬಿಡುಗಡೆಯಾದಾಗಿನಿಂದ ದೇಶಾದ್ಯಂತ ಗ್ರಾಹಕರಲ್ಲಿ ಉತ್ತೇಜಕ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಇದು ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಪ್ರಮುಖ ಸ್ಥಾನವನ್ನು ಧಕ್ಕಿಸಿಕೊಂಡಿದೆ. BYD ತನ್ನ ಗ್ರಾಹಕರಿಗೆ ಸುಲಭ ಮತ್ತು ಅನುಕೂಲಕ್ಕಾಗಿ ಪ್ರವರ್ತಕ ಪ್ರಬಲ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ರಚಿಸಿದೆ ಎಂದು ಕಂಪನಿ ತಿಳಿಸಿದೆ.

byd-delivers-200-atto-3-electric-passenger-vehicles

BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಮಾತನಾಡಿ, "ಭಾರತದಾದ್ಯಂತ 200 ATTO-3 ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಬ್ಯಾಚ್ ಅನ್ನು ತಲುಪಿಸುವ ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ನಮ್ಮ ಬಲವಾದ ಡೀಲರ್‌ಶಿಪ್ ನೆಟ್‌ವರ್ಕ್‌ನ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಈ ಮೈಲಿಗಲ್ಲು ಭಾರತದಲ್ಲಿ BYD ಯ 16 ವರ್ಷಗಳ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ನಾಳೆಗಾಗಿ ಸ್ವಚ್ಛ ಮತ್ತು ಹಸಿರು ದೇಶವನ್ನು ಮತ್ತಷ್ಟು ವೇಗಗೊಳಿಸಲು BYD ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ. ಮಾರುಕಟ್ಟೆಯಲ್ಲಿ ನಮ್ಮ BYD ATTO-3 ರ ಉತ್ತಮ ಪ್ರತಿಕ್ರಿಯೆ ಮತ್ತು ಸ್ವೀಕಾರದಿಂದ ನಾವು ಸಂತೋಷಪಡುತ್ತೇವೆ. ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ನಮ್ಮ ಗ್ರಾಹಕರು ಮತ್ತು ಪಾಲುದಾರರ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ. ನಮ್ಮ ನವೀನ ಎಲೆಕ್ಟ್ರಿಕ್ ವಾಹನಗಳನ್ನು ಭಾರತ ಮತ್ತು ಅದರಾಚೆ ಹೆಚ್ಚಿನ ಜನರಿಗೆ ತಲುಪಿಸಲು ನಾವು ಎದುರು ನೋಡುತ್ತಿದ್ದೇವೆ ಎಂದರು.

byd-delivers-200-atto-3-electric-passenger-vehicles

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, September 19, 2023, 17:31 [IST]
English summary
Byd delivers 200 atto 3 electric passenger vehicles
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+