427 ಕಿ.ಮೀ ರೇಂಜ್ ನೀಡುವ BYD Dolphin ಹ್ಯಾಚ್‌ಬ್ಯಾಕ್ ಬಹಿರಂಗಪಡಿಸಿದ ಬಿವೈಡಿ
ಪ್ರಸ್ತುತ ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಚೀನಾ ಮೂಲದ BYD ಕಂಪನಿಯು ತನ್ನ ಹೊಸ ಹ್ಯಾಚ್‌ಬ್ಯಾಕ್ BYD Dolphin ಅನ್ನು ಬಹಿರಂಗಪಡಿಸಿದೆ. ಇದು ಮುಂದಿನ ವರ್ಷ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ ಎಂದು ಮೂಲಗಳು ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
BYD ಪ್ರಸ್ತುತ ಭಾರತದಲ್ಲಿ ತನ್ನ ಎರಡು ಮಾದರಿಗಳಾದ e6 MPV ಮತ್ತು Atto 3 ಪ್ರೀಮಿಯಂ ಕ್ರಾಸ್ಒವರ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಜಾಗತಿಕವಾಗಿ, ಬ್ರ್ಯಾಂಡ್ ವ್ಯಾಪಕ ಶ್ರೇಣಿಯ ಮಾದರಿಗಳನ್ನು ಹೊಂದಿದೆ. ಈಗ ಡಾಲ್ಫಿನ್ ಎಂದು ಕರೆಯಲ್ಪಡುವ ಹೊಸ ಹ್ಯಾಚ್‌ಬ್ಯಾಕ್ ಅನ್ನು ಎಂಟ್ರಿ ಲೆವಲ್ ಕೊಡುಗೆಯಾಗಿ ಹೊರತರಲು ಸಜ್ಜಾಗಿದೆ.

ಇದು ಹೊಸ ಸಿ-ಸೆಗ್ಮೆಂಟ್ ಹ್ಯಾಚ್‌ಬ್ಯಾಕ್ ಆಗಿದ್ದು, ಈ ಹೊಸ EV 44.9kWh ಮತ್ತು 60.4kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ BYD ಗೆ ಹೆಸರುವಾಸಿಯಾದ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಲೇಡ್ ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ. ಕಂಪನಿ ನೀಡುವ ಆಫರ್‌ನಲ್ಲಿ ಆಕ್ಟಿವ್, ಬೂಸ್ಟ್, ಕಂಮ್ಫರ್ಟ್ ಹಾಗೂ ಡಿಸೈನ್ ಎಂಬ ನಾಲ್ಕು ವಿಭಿನ್ನ ಮಾದರಿಗಳನ್ನು ಪರಿಚಯಿಸಲಿದೆ.
ಇವುಗಳಲ್ಲಿ ಮೊದಲನೆಯದಾದ ಡಾಲ್ಫಿನ್ ಆಕ್ಟಿವ್ 95bhp ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 44.9 kWh ಬ್ಯಾಟರಿಯನ್ನು ಪಡೆಯಲಿದೆ. ಈ ಆವೃತ್ತಿಯನ್ನು 7 kW ವರೆಗೆ AC ಪವರ್ ಮತ್ತು 60 kW ವರೆಗೆ DC ಪವರ್ ಮೂಲಕ ಚಾರ್ಜ್ ಮಾಡಬಹುದು. ಇದಾದ ನಂತರ ಡಾಲ್ಫಿನ್ ಬೂಸ್ಟ್ ಇದ್ದು, ಇದು 44.9 kWh ಬ್ಯಾಟರಿ ಮತ್ತು 176bhp ಪವರ್ ಹೊಂದಿರುವ ಮೋಟಾರ್ ಅನ್ನು ಪಡೆಯುತ್ತದೆ.

ನಂತರ, 60.4 kWh ಬ್ಯಾಟರಿಯೊಂದಿಗೆ ಡಾಲ್ಫಿನ್ ಕಂಫರ್ಟ್ ಇದ್ದು, ಇದು 205bhp ಪವರ್‌ನ ಮೋಟಾರ್ ಮತ್ತು 426km ರೇಂಜ್ ಹೊಂದಿರಲಿದೆ. ಕೊನೆಯದಾಗಿ 'ಡಾಲ್ಫಿನ್ ಡಿಸೈನ್' ಇದ್ದು, ಇದು ಕಂಫರ್ಟ್‌ನಂತೆಯೇ ಅದೇ ವಿಶೇಷತೆಗಳೊಂದಿಗೆ ಬರುತ್ತದೆ. ಆದರೆ ಫನಾರಮಿಕ್ ರೂಫ್, ಡ್ಯುಯಲ್-ಟೋನ್ ಪೇಂಟ್‌ವರ್ಕ್, ಟ್ರೈ-ಕಲರ್ ಆಲಯ್ ವೀಲ್‌ಗಳು ಮತ್ತು ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ ಬರುತ್ತದೆ.
60.4 kWh ಬ್ಲೇಡ್ ಬ್ಯಾಟರಿ ಮತ್ತು ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್‌ನೊಂದಿಗೆ, ಡಾಲ್ಫಿನ್ 7 ಸೆಕೆಂಡುಗಳಲ್ಲಿ 100kmph ವೇಗವನ್ನು ತಲುಪಬಲ್ಲದು ಎಂದು ಕಂಪನಿ ತಿಳಿಸಿದೆ. 310Nm ಟಾರ್ಕ್ ಮತ್ತು 205bhp ನ ಟಾಪ್ ಮಾಡಲ್ ಗರಿಷ್ಠ 160kmph ಟಾಪ್ ಸ್ಪೀಡ್ ಕೂಡ ತಲುಪಬಲ್ಲದು. ಇದು ಸ್ಪೋರ್ಟ್, ನಾರ್ಮಲ್, ಎಕಾನಮಿ ಮತ್ತು ಸ್ನೋ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವುದಾಗಿ ತಿಳಿಸಿದೆ.

ಇದರ ದುಬಾರಿ ಆವೃತ್ತಿಯು 426 ಕಿ.ಮೀಗಳ ರೇಂಜ್ ಹೊಂದಿದೆ. ಚಾರ್ಜಿಂಗ್ ಶಕ್ತಿಯು 11kW AC 3 ಹಂತವಾಗಿದ್ದರೂ ವೇಗವಾದ ಚಾರ್ಜಿಂಗ್ ಆಯ್ಕೆಗಳನ್ನು ಕೂಡ ಹೊಂದಿದೆ. ಉದಾಹರಣೆಗೆ, 88kW DC ಚಾರ್ಜರ್ 29 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಆಗಲಿದೆ. ಡಾಲ್ಫಿನ್ VtoL (ವಾಹನವನ್ನು ಲೋಡ್ ಮಾಡಲು) ಸಹ ಹೊಂದಿದ್ದು, ಕಾರ್ ಬ್ಯಾಟರಿಯು ಬಾಹ್ಯ ಸಾಧನಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








