ಚೀನಾದ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ: ಭಾರತದ ಈ ನಗರದಲ್ಲಿ ಹೊಸ ಶೋರೂಂ ಓಪನ್

ಚೀನಾದ ಮೂಲಕ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಈ ವರ್ಷ ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದ್ದು, ಇದೀಗ, ಗುಜರಾತ್ ರಾಜ್ಯದ ಸೂರತ್‌ನಲ್ಲಿಯೂ ನೂತನ ಮಳಿಗೆ ಉದ್ಘಾಟನೆಗೊಂಡಿದೆ.

ಬಿವೈಡಿ ಇಂಡಿಯಾ ಪ್ರಾರಂಭಿಸಿರುವ ಈ ಶೋರೂಂ, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು, 1,650 ಚದರ ಅಡಿಯಲ್ಲಿ ವಿಸ್ತರಿಸಿಕೊಂಡಿದೆ. ಇಲ್ಲಿ ತರಬೇತಿ ಪಡೆದ ನುರಿತ ತಂತ್ರಜ್ಞರು ಮತ್ತು ಮಾರಾಟ ಸಲಹೆಗಾರರು ಇದ್ದು, ಕಂಪನಿಯ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಾರೆ. ಶೋರೂಂನಲ್ಲಿ ಇ6 (e6) ಹಾಗೂ ಆಟ್ಟೋ 3 (Atto 3) ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಚೀನಾದ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ: ಭಾರತದ ಈ ನಗರದಲ್ಲಿ ಹೊಸ ಶೋರೂಂ ಓಪನ್

ಈ ವಾರದ ಆರಂಭದಲ್ಲಿ ಬಿವೈಡಿ ಕಂಪನಿ ಗೋವಾದ ಪಣಜಿಯಲ್ಲಿ ಹೊಸ ಶೋರೂಂನ್ನು ಲೋಕಾರ್ಪಣೆ ಮಾಡಿತ್ತು. ನೂತನ ಶೋರೂಂ ಉದ್ಘಾಟನೆ ಬಳಿಕ ಪ್ರತಿಕ್ರಿಯೆ ನೀಡಿದ ಬಿವೈಡಿ ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಅವರು, 'ಕಂಪನಿ ಪರಿಚಯಿಸುವ ಪ್ರತಿಯೊಂದು ಎಲೆಕ್ಟ್ರಿಕ್ ವಾಹನವು ಹಸಿರು ಪರಿಸರ ನಿರ್ಮಾಣಕ್ಕೆ ನೆರವಾಗುತ್ತದೆ' ಎಂದು ಹೇಳಿದ್ದಾರೆ.

ದೇಶದಲ್ಲಿ ಬಿವೈಡಿ ಕಾರುಗಳಿಗೆ ಸಖತ್ ಡಿಮ್ಯಾಂಡ್ ಇದೆ. ಕಳೆದ ಕೆಲವು ದಿನಗಳ ಹಿಂದೆ, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರದಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಮಾಡಿ, ವಿತರಣೆ ಮಾಡಿದ 200 ಕಾರುಗಳೇ ಅದಕ್ಕೆ ಸಾಕ್ಷಿ. ಪ್ರಸ್ತುತ ಭಾರತದಲ್ಲಿ ಖರೀದಿಗೆ ಸಿಗುವ ಬಿವೈಡಿ ಇ6 ಕಾರಿನ ಬಗ್ಗೆ ಮಾತನಾಡುವುದಾದರೆ, ಇದು ರೂ.29.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಚೀನಾದ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ: ಭಾರತದ ಈ ನಗರದಲ್ಲಿ ಹೊಸ ಶೋರೂಂ ಓಪನ್

ನೂತನ ಬಿವೈಡಿ ಇ6 ಕಾರಿನಲ್ಲಿ 71.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 415 - 520 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಮೋಟಾರ್ 93.87 Bhp ಪವರ್ ಉತ್ಪಾದಿಸುತ್ತದೆ. ಈ ಕಾರಿನ ಬ್ಯಾಟರಿ 1.5 ಗಂಟೆಯಲ್ಲಿ ಫುಲ್ ಚಾರ್ಜ್ ಆಗಲಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಬಿವೈಡಿ ಆಟ್ಟೋ 3 (BYD Atto 3), ಐದು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುತ್ತದೆ. 60.48 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿಯಲ್ಲಿ 521 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಮೋಟಾರ್, 201 bhp ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಈ ಕಾರನ್ನು 80kW ಡಿಸಿ, 7.2kW ಎಸಿ ಚಾರ್ಜರ್ ಬಳಸಿ, ಚಾರ್ಜ್ ಮಾಡಬಹುದು. 12.8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಏರ್ ಪ್ಯೂರಿಫೈಯರ್, 31 - ಕಲರ್ ಆಂಬಿಯೆಂಟ್ ಲೈಟಿಂಗ್, 4 - USB ಪೋರ್ಟ್‌, 360 - ಡಿಗ್ರಿ ಕ್ಯಾಮೆರಾ ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಬಿವೈಡಿ ವಿದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ 'ಸೀಗಲ್' ಇವಿ ಹೆಸರನ್ನು ಭಾರತದಲ್ಲಿ ಈಗಾಗಲೇ ಟ್ರೇಡ್ ಮಾರ್ಕ್ ಮಾಡಿದೆ. ಇದು ಅತ್ಯಂತ ಕಡಿಮೆ ದರಕ್ಕೆ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಇದು, 30 kWh ಹಾಗೂ 38 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗುವ ನಿರೀಕ್ಷೆಯಿದ್ದು, ಸಂಪೂರ್ಣ ಚಾರ್ಜಿನಲ್ಲಿ 305 km ರಿಂದ 405 km ರೇಂಜ್ ಕೊಡಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 28, 2023, 10:27 [IST]
English summary
Byd inaugurates new showroom in surat details
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+