BYD: ಚೀನಾ ಕಂಪನಿಗೆ ಭರ್ಜರಿ ಆರ್ಡರ್... 100 e6 ವಾಹನಗಳ ಪೂರೈಕೆಗೆ ಒಪ್ಪಂದ
ದೆಹಲಿ ಮೂಲದ EV ಕ್ಯಾಬ್ ಸೇವೆಯಾದ Evera ನೊಂದಿಗೆ BYD ಪಾಲುದಾರಿಕೆಗೆ ಸಹಿ ಮಾಡಿದೆ. ಈ ಒಪ್ಪಂದದ ಭಾಗವಾಗಿ 100 ಹೊಸ e6 ವಾಹನಗಳನ್ನು Evera ಕಂಪನಿಗೆ ತಲುಪಿಸಲಿದೆ. ಎವೆರಾ ದೆಹಲಿಯಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ, BYD ಇಂಡಿಯಾದೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಫ್ಲೀಟ್ ಕಾರ್ಯಾಚರಣೆಗಾಗಿ ಈಗ ಒಪ್ಪಂದಕ್ಕೆ ಸಹಿ ಮಾಡಿದೆ.
ದೈನಂದಿನ ಪ್ರಯಾಣದಲ್ಲಿ ಇಂಧನ ಚಾಲಿತ ವಾಹನಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಎವೆರಾ ಮುಂದಾಗಿದೆ. ಇದರ ಸೇವೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಮೂಹ ಮತ್ತು ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆ ಜೊತೆಗೆ ಪ್ರಯಾಣಕ್ಕೆ ಪೂರಕವಾಗಿ ದಕ್ಷ ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ಹೊಂದಿರುವುದಾಗಿ ಎವೆರಾ ಹೇಳಿಕೊಂಡಿದೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರವ ವಾಯು ಮಾಲಿನ್ಯಕ್ಕೆ ಎವೆರಾ ಕೊಡುಗೆ ಶ್ಲಾಘನೀಯ ಎಂದೇ ಹೇಳಬಹುದು.

ಅಲ್ಟ್ರಾ-ಸೇಫ್ ಬ್ಲೇಡ್ ಬ್ಯಾಟರಿ ಹೊಂದಿದೆ BYD e6:
BYD ಯ ಹೊಸ e6 ಭಾರತದ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ MPV ಮತ್ತು ಭಾರತದಲ್ಲಿ ಅಲ್ಟ್ರಾ-ಸೇಫ್ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಿಕೊಂಡ ಮೊದಲ ಮಾದರಿಯಾಗಿದೆ. ಇದು 71.7 kWh ಬ್ಲೇಡ್ ಬ್ಯಾಟರಿಯೊಂದಿಗೆ 520km WLTC (ನಗರ) ರೇಂಜ್ ಹಾಗೂ WLTC (ಸಂಯೋಜಿತ) 415 ಕಿ.ಮೀ ರೇಂಜ್ ಅನ್ನು ಕೇವಲ ಸಿಂಗಲ್ ಚಾರ್ಜ್‌ನೊಂದಿಗೆ ಹಿಂದಿರುಗಿಸುತ್ತದೆ. ಜೊತೆಗೆ ಇದು DC ವೇಗದ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ.
ಈ ವೇಗದ ಚಾರ್ಜಿಂಗ್ ಮೂಲಕ ಕೇವಲ 35 ನಿಮಿಷಗಳಲ್ಲಿ ಶೇ 30 ರಿಂದ ಶೇ 80ರ ವರೆಗೆ ಚಾರ್ಜ್ ಮಾಡಲು ಅನುಮತಿಸುತ್ತದೆ. ಸುಗಮ ಮತ್ತು ಆರಾಮದಾಯಕ ಸವಾರಿಗಾಗಿ ವಿನ್ಯಾಸಗೊಳಿಸಲಾದ ಹೊಸ ಇ6, 580 ಲೀ.ನಷ್ಟು ದೊಡ್ಡ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ. BYD ಇಂಡಿಯಾ 21 ನಗರಗಳಲ್ಲಿ 24 ಔಟ್‌ಲೆಟ್‌ಗಳೊಂದಿಗೆ PAN ಇಂಡಿಯಾ ಶೋರೂಮ್‌ಗಳನ್ನು ಹೊಂದಿದ್ದು, 2023 ರ ಅಂತ್ಯದ ವೇಳೆಗೆ 53 ಔಟ್‌ಲೆಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದೆ.

ಎವೆರಾದ ಸಿಇಒ ಮತ್ತು ಸಹ-ಸಂಸ್ಥಾಪಕ ನಿಮಿಷ್ ತ್ರಿವೇದಿ ಮಾತನಾಡಿ, "BYD ಹೊಸ e6 ನೊಂದಿಗೆ, ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸುಸ್ಥಿರ ಶಕ್ತಿ ಪರಿಹಾರಗಳ ನಮ್ಮ ಹಂಚಿಕೆಯ ಮೌಲ್ಯದೊಂದಿಗೆ ಎಲೆಕ್ಟ್ರಿಕ್ ವಾಹನ ಫ್ಲೀಟ್ ಕಾರ್ಯಾಚರಣೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ. ಇದು ರಾಷ್ಟ್ರದಾದ್ಯಂತ ಇ-ಮೊಬಿಲಿಟಿ ಗ್ರಿಡ್ ಅನ್ನು ವಿಸ್ತರಿಸುವ ಮತ್ತು ಅಂತಿಮವಾಗಿ ಜಾಗತಿಕ ಹಂತಕ್ಕೆ ವಿಸ್ತರಿಸುವ ನಮ್ಮ ಗುರಿಯನ್ನು ಪೂರೈಸುತ್ತದೆ ಎಂದರು.
ಇ-ಮೊಬಿಲಿಟಿಯ ಭವಿಷ್ಯವನ್ನು ಶಕ್ತಿಯುತಗೊಳಿಸುವ ಬ್ಲೇಡ್ ಬ್ಯಾಟರಿ ತಂತ್ರಜ್ಞಾನದ ಭಾಗವಾಗಿರಲು ನಮಗೆ ಹೆಮ್ಮೆಯಾಗಿದೆ. "ನಾವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲು ಬದ್ಧರಾಗಿದ್ದೇವೆ, ನಮ್ಮ ಈ ಕ್ರಮವು 2070 ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಇದು ನಾವು ಕೊಡುಗೆ ನೀಡಲು ಉತ್ಸುಕತೆಯಿಂದ ಎದುರು ನೋಡುತ್ತಿರುವ ಪ್ರಯಾಣವಾಗಿದೆ" ಎಂದು ಅವರು ಹೇಳಿದರು.

BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಮಾತನಾಡಿ, "ಎವೆರಾದಿಂದ ಅತಿದೊಡ್ಡ e6 ಆರ್ಡರ್ ಅನ್ನು ಸ್ವೀಕರಿಸಲು ನಾವು ಸಂತೋಷಪಡುತ್ತೇವೆ. ಅವರ ಎಲೆಕ್ಟ್ರಿಕ್ ವಾಹನಗಳ ಸಮೂಹಕ್ಕೆ ಮುಂದಿನ ಕೆಲವು ತಿಂಗಳುಗಳಲ್ಲಿ ನಮ್ಮ 100 BYD e6 ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸುತ್ತೇವೆ. ಹೊಸ e6 ನ ಪರ್ಫಾಮೆನ್ಸ್ ತುಂಬಾ ಉತ್ತೇಜನಕಾರಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ ಸುಸ್ಥಿರ ಬೆಳವಣಿಗೆಯನ್ನು ವೀಕ್ಷಿಸಲು ನಾವು ನಿರೀಕ್ಷಿಸುತ್ತೇವೆ ಎಂದರು.
"BYD ಇಂಡಿಯಾ ದೇಶಾದ್ಯಂತ ಫ್ಲೀಟ್ ವಿದ್ಯುದೀಕರಣದ ಮೇಲೆ ಕೇಂದ್ರೀಕರಿಸುವ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಸಂಯೋಜಿಸುವ ಗುರಿ ಹೊಂದಿದೆ. ನಾವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು EV ಅಳವಡಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಅರಿವನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ. ನಾವು ಭಾರತಕ್ಕಾಗಿ ಹೆಚ್ಚಿನ ಇ-ಮೊಬಿಲಿಟಿ ಪರಿಹಾರಗಳನ್ನು ತರುತ್ತೇವೆ" ಎಂದು ಅವರು ಹೇಳಿದರು. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








