BYD Seagull: 405 ಕಿಮೀ ರೇಂಜ್‌ನ ತೀರಾ ಕಡಿಮೆ ಬೆಲೆಯ ಬಿವೈಡಿ 'ಸೀಗಲ್' ಇವಿ ಲಾಂಚ್, ಬುಕ್ಕಿಂಗ್‌ನಲ್ಲಿ ಸುನಾಮಿ!
ಚೀನಾದ ಪ್ರಮುಖ ವಾಹನ ತಯಾರಕ ಕಂಪನಿಗಳು ಸಣ್ಣ ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ತೊಡಗಿವೆ. ಅದರಲ್ಲಿಯು 5 ಡೋರ್ ಎಲೆಕ್ಟ್ರಿಕ್ ಕಾರುಗಳು ಭಾರೀ ಜನಪ್ರಿಯೆತೆಯನ್ನು ಗಳಿಸುತ್ತಿವೆ. ಇದೀಗ, ಬಿವೈಡಿ (BYD) ಕಂಪನಿ, ಸೀಗಲ್ ಎಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡಿದೆ. ಕೆಲವೇ ಗಂಟೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದ್ದು, ಇಲ್ಲಿದೆ ವಿವರ.
ಶಾಂಘೈ ಆಟೋ ಶೋನಲ್ಲಿ ಬಿವೈಡಿ ಕಂಪನಿ 'ಸೀಗಲ್' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ, ಬುಕ್ಕಿಂಗ್ ಕೂಡ ಶುರು ಮಾಡಿದೆ. ಕೇವಲ 24 ಗಂಟೆಗಳಲ್ಲಿ 10,000 ಆರ್ಡರ್‌ಗಳನ್ನು ಪಡೆದುಕೊಂಡಿದೆ. ಮೊದಲಿಗೆ ಬೆಲೆ ಬಗ್ಗೆ ಹೇಳುವುದಾದರೆ, ಬೇಸ್ ವೇರಿಯೆಂಟ್ CNY 78,800 (ಅಂದಾಜು ಭಾರತದ ರೂಪಾಯಿ 9.4 ಲಕ್ಷ), ಮಿಡ್ ವೇರಿಯೆಂಟ್ CNY 83,800 (ರೂ.10 ಲಕ್ಷ) ಹಾಗೂ ಟಾಪ್ ಎಂಡ್ ವೇರಿಯೆಂಟ್ CNY 95,800 (ರೂ.11.43 ಲಕ್ಷ) ದರವನ್ನು ಹೊಂದಿದೆ.

ಸೀಗಲ್ ಕಾರು, ಬಿವೈಡಿಯ ಇ ಪ್ಲಾಟ್‌ಫಾರ್ಮ್ 3.0 ಸ್ಕೇಟ್‌ಬೋರ್ಡ್ ಆಧರಿಸಿದ್ದು, 30kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 305 km ರೇಂಜ್ ನೀಡಿದರೆ, 38kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿರುವ ಕಾರು, ಬರೋಬ್ಬರಿ 405 km ರೇಂಜ್ ಕೊಡಲಿದೆ. ಕಡಿಮೆ ಸಾಮರ್ಥ್ಯದ ಮೋಟಾರ್ 55kW (73 bhp) ಪವರ್, ಹೆಚ್ಚಿನ ಸಾಮರ್ಥ್ಯದ ಮೋಟಾರ್ 70kW (94 bhp) ಪವರ್ ಉತ್ಪಾದಿಸುತ್ತದೆ. ಜೊತೆಗೆ 130 km/h ಟಾಪ್ ಸ್ವೀಡ್ ಹೊಂದಿದೆ.
ಸೀಗಲ್, ಬಿವೈಡಿಯ 'ಓಷನ್' ಸರಣಿಯ ಕಾರಾಗಿದ್ದು, ಈಗಾಗಲೇ ಆ ಸೀರಿಯಸ್‌ನಲ್ಲಿ ಸೀ ಲಯನ್ ಎಸ್‌ಯುವಿ, ಡಾಲ್ಫಿನ್ ಹಾಗೂ ಸೀಲ್ ಸೆಡಾನ್ ಗಳಿವೆ. ಸೀಗಲ್, ಡಾಲ್ಫಿನ್ (4070 ಎಂಎಂ ಉದ್ದ) ಕಾರಿಗಿಂತ ಕೊಂಚ ಚಿಕ್ಕದಾಗಿದ್ದು, 3780 ಎಂಎಂ ಉದ್ದ, 1715 ಎಂಎಂ ಅಗಲ, 1540 ಎಂಎಂ ಎತ್ತರ ಹಾಗೂ 2500 ಎಂಎಂ ವೀಲ್‌ಬೇಸ್ ಹೊಂದಿದೆ.

ಬಿವೈಡಿ ಸೀಗಲ್ ಕ್ಯೂಟ್ ಲುಕ್ ಹೊಂದಿರುವ ಹ್ಯಾಚ್‌ಬ್ಯಾಕ್ ಆಗಿದ್ದು, ಅತ್ಯಾಧುನಿಕ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಎಲ್ಇಡಿ ಟೈಲ್ ಲೈಟ್ಸ್ ಕನೆಕ್ಟ್ದ್ ಆಕರ್ಷಕ ಸೈಡ್ ಹಾಗೂ ರೇರ್ ಪ್ರೊಫೈಲ್ ಅನ್ನು ಒಳಗೊಂಡಿದೆ. ಜೊತೆಗೆ ಈ ಕಾರು, ಕೆಲ ವರ್ಷಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿದ್ದ ಟಾಟಾ ನ್ಯಾನೋದಲ್ಲಿರುವಂತೆ ಸಿಂಗಲ್ ವಿಂಡ್‌ಶೀಲ್ಡ್ ವೈಪರ್ ಹೊಂದಿದ್ದು, ಬಜೆಟ್ ಬೆಲೆಯ ಕಾರುಗಳಲ್ಲಿರುವಂತೆ ಪುಲ್ ಅಪ್ ಸ್ಟೈಲ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿದೆ.
ಬಿವೈಡಿ ಸೀಗಲ್ ಒಳಭಾಗ ಹೆಚ್ಚು ಪ್ರೀಮಿಯಂ ಆಗಿದ್ದು, 5 ಇಂಚಿನ ಇನ್‌ಸ್ಟ್ರುಮೆಂಟ್ ಕನ್ಸೋಲ್, 12.8 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್, ಪವರ್ಡ್ ಡ್ರೈವರ್ ಸೀಟ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಕಪ್ ಹೋಲ್ಡರ್‌ಗಳನ್ನು ಪಡೆದಿದೆ. ಸದ್ಯ, ಸೀಗಲ್ ಕಾರಿಗೆ ಚೀನಾ ಮಾರುಕಟ್ಟೆಯಲ್ಲಿ 'ವುಲಿಂಗ್ ಬಿಂಗೊ' ಪ್ರತಿಸ್ಪರ್ಧಿಯಾಗಿದ್ದು, ಇದು ದೊಡ್ಡ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರುವುದರಿಂದ ಸೀಗಲ್‌ಗಿಂತ ಕೊಂಚ ಹೆಚ್ಚಿನ ರೇಂಜ್ ನೀಡುತ್ತದೆ.

ಬಿವೈಡಿ ಕಂಪನಿ ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ e6 ಮತ್ತು Atto 3 ಕಾರನ್ನು ಬಿಡುಗಡೆ ಮಾಡಿದೆ. ಇದರೊಟ್ಟಿಗೆ ಸೀಲ್ ಸೆಡಾನ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಅವುಗಳ ಬೆಲೆ ಕೊಂಚ ದುಬಾರಿಯೇ ಇದೆ. ಇದೀಗ, ಚೀನಾ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೀಗಲ್' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ನಮ್ಮಲಿಯೂ ಲಾಂಚ್ ಮಾಡಬಹುದು. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಇನ್ನು, ಬಿವೈಡಿ ಕಂಪನಿಯ 'ಸೀಗಲ್' ಎಲೆಕ್ಟ್ರಿಕ್ ಕಾರು ಪಡೆದುಕೊಂಡಿರುವ ಬುಕಿಂಗ್ ಸಂಖ್ಯೆಯನ್ನು ಗಮನಿಸಿದರೆ, ಅದರ ಜನಪ್ರಿಯತೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಜೊತೆಗೆ ಅತ್ಯಂತ ಕಡಿಮೆ ಬೆಲೆಗೆ ಉತ್ತಮ ರೇಂಜ್ ನೀಡುವಂತೆ ಬಿಡುಗಡೆ ಮಾಡಿರುವುದರಿಂದ ಅಲ್ಲಿನ ಗ್ರಾಹಕರಿಗೆ ಹೆಚ್ಚಿಗೆ ಇಷ್ಟವಾಗುತ್ತಿದೆ. ಒಂದೊಮ್ಮೆ ಈ ಕಾರು, ಭಾರತದಲ್ಲಿ ಬಿಡುಗಡೆಯಾದರೆ, ಟಾಟಾ ಟಿಯಾಗೊ ಇವಿ, ಸಿಟ್ರಸ್ ಇಸಿ 3 ಕಾರುಗಳಿಗೆ ದೊಡ್ಡಮಟ್ಟದಲ್ಲಿ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








