ಕಂದಕಕ್ಕೆ ಬಿದ್ದ ಕಾರು... ಜನರಿದ್ದರೂ ಸಹಾಯವಿಲ್ಲ... ಬೈಕರ್‌ಗಳಿಗೆ ಕೈಮುಗಿದ ಮಹಿಳೆ

ರಸ್ತೆ ಅಪಘಾತಗಳು ಎಂತಹವರಿಗೂ ಕಹಿ ಅನುಭವಗಳನ್ನು ಉಳಿಸಿಬಿಡುತ್ತವೆ. ಅದೆಷ್ಟೋ ಮಂದಿ ತಮ್ಮ ಸ್ನೇಹಿತರೊಂದಿಗೆ ಪ್ರಯಾಣಿಸಿ ಅಪಘಾತದಲ್ಲಿ ಬದುಕುಳಿದಿರೆ ಸಾವನ್ನಪ್ಪಿದ ತಮ್ಮ ಸ್ನೇಹಿತರ ಸಿಹಿ ನೆನಪುಗಳನ್ನು ನೆನೆದು ದುಃಖಿಸುವವರು ಇಂದಿಗೂ ಇದ್ದಾರೆ. ಹಾಗೆಯೇ ಅಪಘಾತ ನಡೆದಾಗ ಪ್ರಾಣಪಾಯದಿಂದ ಕಾಪಾಡುವ ದಾರಿಹೋಕರ ಸಹಾಯವನ್ನು ತಮ್ಮ ಕಡೆಯ ದಿನಗಳವರೆಗೂ ಮರೆಯೋದಿಲ್ಲ.

ಇತ್ತೀಚೆಗೆ ನಡೆದ ಅಪಘಾತವೊಂದು ಇಂತಹದೇ ಉದಾಹರಣೆಯಾಗಿದೆ. ಟಾಟಾ ನೆಕ್ಸಾನ್ ಮಾಲೀಕರೊಬ್ಬರು ಅಪಘಾತಕ್ಕೆ ಒಳಗಾದಾಗ ಬೈಕರ್‌ಗಳ ಗುಂಪಿನಿಂದ ಸಹಾಯವನ್ನು ಪಡೆದಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಿಕ್ಕ ಸಹಾಯಕ್ಕೆ ಋಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯು ಪ್ರತಿಯೊಬ್ಬ ನಾಗರಿಕರು ಎಷ್ಟು ಜವಾಬ್ದಾರರಾಗಿರಬೇಕು ಎಂಬುದಕ್ಕೆ ಸರಿಯಾದ ಉದಾಹರಣೆಯೂ ಆಗಿದೆ. ಒಂದು ವೇಳೆ ಯಾರೂ ಕೂಡ ಸಹಾಯಕ್ಕೆ ಮುಂದಾಗದಿದ್ದರೇ ಪರಿಸ್ಥಿತಿ ಹೇಳತೀರದ್ದು ಎಂದು ನೆಕ್ಸಾನ್ ಮಹಿಳಾ ಮಾಲೀಕರೊಬ್ಬರು ಹೇಳಿಕೊಂಡಿದ್ದಾರೆ.

ಕಂದಕಕ್ಕೆ ಬಿದ್ದ ಕಾರು... ಜನರಿದ್ದರೂ ಸಹಾಯವಿಲ್ಲ... ಬೈಕರ್‌ಗಳಿಗೆ ಕೈಮುಗಿದ ಮಹಿಳೆ

AP Riderm07 ಎಂಬ ಹೆಸರಿನ YouTube ಚಾನಲ್‌ನಲ್ಲಿ ಈ ಕುರಿತ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ದೊಡ್ಡ ತಿರುವು ಇರುವ ಘಾಟ್ ವಿಭಾಗದ ರಸ್ತೆಯಲ್ಲಿ ಚಾಲನೆ ಮಾಡುವಾಗ ಅಪಘಾತಕ್ಕೀಡಾದ ಟಾಟಾ ನೆಕ್ಸನ್ ಚಾಲಕಿಯನ್ನು ರಕ್ಷಿಸಲು ಬಂದ ಮೋಟಾರ್‌ಸೈಕಲ್ ಸವಾರರ ಗುಂಪನ್ನು ಈ ವಿಡಿಯೋದಲ್ಲಿ ನೋಡಬಹುದು. ಮೋಟಾರು ಸೈಕಲ್ ಸವಾರರ ಗುಂಪೊಂದು ಜನನಿಬಿಡ ರಸ್ತೆಯಲ್ಲಿ ಸವಾರಿ ಮಾಡುತ್ತಾ ಮುಂದೆ ಸಾಗುತ್ತಿರುವಾಗ ಅಪಘಾತಕ್ಕೀಡಾದ ಟಾಟಾ ನೆಕ್ಸಾನ್ ಅನ್ನು ನೋಡಿ ವಾಹನಗಳನ್ನು ಕೂಡಲೇ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ.

ನೆಕ್ಸಾನ್ ಕಾರು ರಸ್ತೆಯಿಂದ ಕಂದಕಕ್ಕೆ ಬಿದ್ದಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಮಹಿಳಾ ಚಾಲಕಿಯೊಬ್ಬರು ವಾಹನ ಚಲಾಯಿಸುವಾಗ ನಿಯಂತ್ರಣ ಕಳೆದುಕೊಂಡು ಕಾರು ನಾಲೆಗೆ ಇಳಿದಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಮಾಲೀಕರು ಕಾರನ್ನು ಹೊರ ತೆಗೆಯಲು ಪರದಾಡುತ್ತಿದ್ದಾಗ ಒಬ್ಬ ವ್ಯಕ್ತಿ ಸಹಾಯಕ್ಕೆ ಮುಂದಾಗಿದ್ದಾನೆ. ಆದರೆ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳು ಕ್ಯಾರೆ ಎಂದಿಲ್ಲ. ಇದರಿಂದ ಮಹಿಳೆಯ ಜೊತೆಗೆ ಒಬ್ಬಂಟಿಯಾಗಿ ಕಾರನ್ನು ಮೇಲೆಕ್ಕೆತ್ತಲು ಪ್ರಯತ್ನಿಸುತ್ತಿದ್ದದ್ದಾಗಿ ಮಾಲೀಕರು ಹೇಳಿಕೊಂಡಿದ್ದಾರೆ.

ಬಳಿಕ ಸವಾರರ ಗುಂಪು ಸಹಾಯಕ್ಕೆ ಮುಂದಾದಾಗ, ನೆಕ್ಸಾನ್ ಅನ್ನು ಹಳ್ಳದಿಂದ ಹೊರತೆಗೆಯಲು ಪ್ರಯತ್ನಿಸುತ್ತಿದ್ದ ಆ ವ್ಯಕ್ತಿಯನ್ನು ನೋಡಿದರು. ಆತ SUV ಅನ್ನು ಹೊರತೆಗೆಯಲು ಹಲವಾರು ಬಾರಿ ಪ್ರಯತ್ನಿಸಿದನಾದರೂ ತನ್ನ ಎಲ್ಲಾ ಪ್ರಯತ್ನಗಳಲ್ಲೂ ವಿಫಲನಾಗಿದ್ದ. ಆದರೆ, ಬೈಕ್ ಸವಾರರು ಆತನ ಸಹಾಯಕ್ಕೆ ಮುಂದೆ ಬಂದು ನೆಕ್ಸಾನ್ ಅನ್ನು ಹಿಂಬದಿಯಿಂದ ತಳ್ಳಿದ್ದರಿಂದ ಎಸ್ ಯುವಿ ಸ್ವಲ್ಪಮಟ್ಟಿಗೆ ಕಂದಕದಿಂದ ಹೊರ ಬಂದಿತ್ತು. ಆದರೆ ನೆಕ್ಸಾನ್ ಹಿಂಭಾಗದ ಎಡ ಚಕ್ರವು ಇನ್ನೂ ಕಂದಕದಲ್ಲೇ ಸಿಲುಕಿಕೊಂಡಿತ್ತು.

ಆದರೆ ಮುಂಭಾಗದ ಚಕ್ರಗಳು ರಸ್ತೆಯ ಸಂಪರ್ಕಕ್ಕೆ ಬಂದಿದ್ದವು. ಕೆಲವು ಸೆಕೆಂಡುಗಳ ನಂತರ ಬೈಕರ್‌ಗಳು ಮತ್ತು ಇತರ ಜನರು ಎಡ ಮುಂಭಾಗದ ಚಕ್ರದ ಮುಂದೆ ಕೆಲವು ಕಲ್ಲುಗಳನ್ನು ಹಾಕಿದ್ದರಿಂದ ನೆಕ್ಸಾನ್ ಮುಂದೆ ಚಲಿಸಲು ಸಾಧ್ಯವಾಯಿತು. ಬಳಿಕ ಸಂಪೂರ್ಣವಾಗಿ ಕಂದಕದಿಂದ ಹೊರಬಂದಿತು. ಅಪಘಾತದ ಸ್ಥಳದಲ್ಲಿ ಜನರು ತೋರಿಸಿದ ತ್ವರಿತ ಸಹಾಯವು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜನರ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

ಈ ಘಟನೆಯಿಂದ ಟಾಟಾ ಮೋಟಾರ್ಸ್‌ನ ನೆಕ್ಸಾನ್ ನಿರ್ಮಾಣ ಗುಣಮಟ್ಟ ಎಷ್ಟು ಪ್ರಬಲವಾಗಿದೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ. ಅದು ಕಂದಕಕ್ಕೆ ಬಿದ್ದಿದ್ದರೂ ಸಹ, ಟಾಟಾ ನೆಕ್ಸಾನ್ ಸಣ್ಣ ಹಾನಿಗಳೊಂದಿಗೆ ಹೊರಬಂದಿದೆಯೇ ಹೊರತೂ, ಅಪಘಾತದ ಸಮಯದಲ್ಲಿ ಅದರಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಹಾಗೆಯೇ ಕಾರಿಗೂ ಕೂಡ ಅಷ್ಟೇನು ಹಾನಿಯಾಗದಿರುವುದನ್ನು ಈ ವಿಡಿಯೋದಲ್ಲಿ ನೊಡಬಹುದು. ಈ ಹಿಂದೆಯೂ ಟಾಟಾ ಕಾರುಗಳ ಅಪಘಾತದಲ್ಲಿ ಬದುಕುಳಿದ ಹಲವು ಉದಾಹರಣೆಗಳನ್ನು ನೋಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, February 13, 2023, 11:01 [IST]
English summary
Car fell into a ditch bikers helped to women
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+