ಕಾಲೇಜಿನ ಮುಂದೆ ಟೀ ಮಾರುತ್ತಾ 90 ಲಕ್ಷ ರೂ. ಮೌಲ್ಯದ ಬೆಂಝ್ ಕಾರು ಖರೀದಿಸಿದ ವ್ಯಕ್ತಿ
MBA ಓದುತ್ತಾ ಮಧ್ಯದಲ್ಲೇ ಡ್ರಾಪ್ ಔಟ್ ಆಗಿ ಚಾಯ್ ಅಂಗಡಿ ಇಟ್ಟು ಇಂದು ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿರುವ ವ್ಯಕ್ತಿಯೊಬ್ಬರ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಎಂಬಿಎ ಚಾಯ್ ವಾಲಾ ಸಂಸ್ಥಾಪಕ ಹಾಗೂ ಯುವ ಉದ್ಯಮಿ ಪ್ರಫುಲ್ ಬಿಲ್ಲೂರ್ ತಮ್ಮ ಕಠಿಣ ಪರಿಶ್ರಮದಿಂದ ವೇಗವಾಗಿ ಬೆಳೆದು ಇತ್ತೀಚೆಗೆ ಬರೋಬ್ಬರಿ 90 ಲಕ್ಷ ರೂ. ಕಾರನ್ನು ಖರೀದಿಸಿದ್ದಾರೆ.
2017 ರಲ್ಲಿ ಎಂಬಿಎ ಡ್ರಾಪ್ಔಟ್ ಆದ ನಂತರ IIM ಅಹಮದಾಬಾದ್ ಹೊರಗೆ ಟೀ ಸ್ಟಾಲ್ ಅನ್ನು ಪ್ರಾರಂಭಿಸಿದ್ದ ಪ್ರಫುಲ್ ಬಿಲ್ಲೂರ್. ಟೀ ಸ್ಟಾಲ್ ಅನ್ನು ಶೀಘ್ರವಾಗಿ ಜನಪ್ರಿಯಗೊಳಿಸಲು ತುಂಬಾ ಶ್ರಮಿಸಿದ್ದಾರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲವೆಂಬಂತೆ ತಮ್ಮ ಅಂಗಡಿಗಳು ಶೀಘ್ರದಲ್ಲೇ ಇತರ ಸ್ಥಳಗಳಿಗೂ ವಿಸ್ತರಿಸಿದವು. MBA ಚಾಯ್ ವಾಲಾ ಈಗ ದೇಶಾದ್ಯಂತ ಅನೇಕ ಔಟ್‌ಲೆಟ್‌ಗಳನ್ನು ಹೊಂದಿದ್ದು, ಕೆಲಸವಿಲ್ಲದ ಹಲವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ವಿದ್ಯೆಯಿಂದ ಮಾತ್ರವಲ್ಲ ಶ್ರಮ, ಬುದ್ದಿವಂತಿಕೆ ಇದ್ದರೆ ಎಲ್ಲರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಸದ್ಯ ಪ್ರಫುಲ್ ಬಿಲ್ಲೋರ್ ಇತ್ತೀಚೆಗೆ 90 ಲಕ್ಷ ರೂ. ಮೌಲ್ಯದ ಹೊಚ್ಚಹೊಸ Mercedes-Benz SUV ಅನ್ನು ಖರೀದಿಸಿದ್ದಾರೆ. ಅವರು ತಮ್ಮ ಹೊಸ ಕಾರನ್ನು ಡೆಲಿವರಿ ತೆಗೆದುಕೊಳ್ಳುವ ವೀಡಿಯೊಗಳು ಮತ್ತು ಫೋಟೋಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ಪ್ರಫುಲ್ GLE SUV ಯ 300d ರೂಪಾಂತರವನ್ನು ಖರೀದಿಸಿದ್ದಾರೆ.
ತಮ್ಮ ಕಾರಿನ ಫೋಟೋಗಳನ್ನು ಹಂಚಿಕೊಂಡು "ನಮ್ಮ ಹೊಚ್ಚ ಹೊಸ Mercedes GLE 300d ನಲ್ಲಿ ನಮ್ಮ ಸಾಹಸಮಯ ಮನೋಭಾವವನ್ನು ಹೊರಹಾಕಿ, ರಸ್ತೆಗಳಲ್ಲಿ ನಮ್ಮ ಹೊಚ್ಚ ಹೊಸ Mercedes GLE 300d ಅನ್ನು ಓಡಿಸಬೇಕು. ಇದು ಕಠಿಣ ಪರಿಶ್ರಮ ಮತ್ತು ಸ್ಫೂರ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಜೀವಮಾನವಿಡೀ ಉಳಿಯುವಂತಹ ನೆನಪುಗಳನ್ನು ಮಾಡಲು ಸಿದ್ಧವಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಬರೆದುಕೊಂಡಿದ್ದಾರೆ.

Mercedes-Benz GLE ಒಂದು ದುಬಾರಿ ಐಷಾರಾಮಿ SUV, GLC ಮತ್ತು GLS ನಡುವೆ ಈ ಮಾದರಿಯನ್ನು ಇರಿಸಲಾಗಿದೆ. ಇದರ ವಿಭಾಗದಲ್ಲಿನ ಇತರ ಮರ್ಸಿಡಿಸ್-ಬೆಂಝ್ ಕಾರುಗಳಂತೆ, GLE ತನ್ನ ಗ್ರಾಹಕರಿಗೆ ವಿವಿಧ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ SUV ಏಳು ಏರ್‌ಬ್ಯಾಗ್‌ಗಳು, 4 ಜೋನ್ ಕ್ಲೈಮೆಟ್ ಕಂಟ್ರೋಲ್, 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಅದೇ ಗಾತ್ರದ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
ಜೊತೆಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಪನಾರಮಿಕ್ ಸನ್‌ರೂಫ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ರನ್ನಿಂಗ್ ಟೈಲ್ ಗೇಟ್ ಮತ್ತು ಮುಂತಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಲೆದರ್ ಸೀಟುಗಳು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಕ್ರೂಸ್ ಕಂಟ್ರೋಲ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಎಸ್‌ಯುವಿಯೊಂದಿಗೆ ನೀಡಲಾಗುತ್ತದೆ. Mercedes-Benz ಈ SUV ಅನ್ನು ಮಲ್ಟಿ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಅಲ್ಲದೇ ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿಯೂ ಲಭ್ಯವಿದೆ.
ಪ್ರಫುಲ್ ಖರೀದಿಸಿದ ರೂಪಾಂತರವು GE 300d ಆಗಿದ್ದು, ಇದು ಪ್ರವೇಶ ಮಟ್ಟದ ರೂಪಾಂತರವಾಗಿದೆ. ಇದರ ಬೆಲೆ ಸುಮಾರು 90 ಲಕ್ಷ ರೂ., ಮಾರುಕಟ್ಟೆಯಲ್ಲಿ 400d ಮತ್ತು 450 ರೂಪಾಂತರಗಳು ಲಭ್ಯವಿದೆ. GLE 400d ಬೆಲೆ 1.05 ಕೋಟಿ ರೂ., ಎಕ್ಸ್ ಶೋರೂಂ ಮತ್ತು GLE 450 ಬೆಲೆ 1.04 ಕೋಟಿ ರೂ., ಎಕ್ಸ್ ಶೋ ರೂಂ. ಇದೆ. ಎಂಜಿನ್ ವಿವರಗಳಿಗೆ ಬರುವುದಾದರೆ Mercdes-Benz GLE 300d ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಈ SUV 245 Ps ಮತ್ತು 500 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. SUV 0-100 kmph ಅನ್ನು ಕೇವಲ 7.2 ಸೆಕೆಂಡುಗಳಲ್ಲಿ ತಲುಪಲಿದ್ದು ಗರಿಷ್ಟ ವೇಗ 225 kmph ಇದೆ. ಇನ್ನು 400d 3.0 ಲೀಟರ್ ಆರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, 450 3.0 ಲೀಟರ್ V6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.


Click it and Unblock the Notifications