ಆಟೋ ಎಕ್ಸ್‌ಪೋಗೆ ದಿನಗಣನೆ...ಚೀನಾ ಹೊರತುಪಡಿಸಿ ಭಾಗವಹಿಸಲಿವೆ 800 ವಿದೇಶಿ ಕಂಪನಿಗಳು

ಏಷ್ಯಾದಲ್ಲೇ ಅತಿ ದೊಡ್ಡ ಆಟೋಮೊಬೈಲ್ ಈವೆಂಟ್ ಎಂದು ಖ್ಯಾತಿ ಗಳಿಸಿರುವ ಆಟೋ ಎಕ್ಸ್‌ಪೋ ಭಾರತದಲ್ಲಿ ಜನವರಿ 12 ರಂದು ಆರಂಭವಾಗಲಿದ್ದು, ಈ ಆಟೋ ಎಕ್ಸ್ ಪೋದಲ್ಲಿ ವಿಶ್ವದ 15 ದೇಶಗಳ 800 ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿದುಬಂದಿದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸುಮಾರು 3 ವರ್ಷಗಳ ನಂತರ ಭಾರತದಲ್ಲಿ ಆಟೋಮೊಬೈಲ್ ಉದ್ಯಮದ ಅತಿದೊಡ್ಡ ಕಾರ್ಯಕ್ರಮವಾದ ಆಟೋ ಎಕ್ಸ್‌ಪೋ 2023, ಜನವರಿ 12 ರಂದು ನೋಯ್ಡಾ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಈ ಸಮಾರಂಭದಲ್ಲಿ ಅನೇಕ ಆಟೋಮೊಬೈಲ್ ತಯಾರಕರು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರೇ, ಇನ್ನೂ ಹಲವು ಕಂಪನಿಗಳು ತಮ್ಮ ಮಾದರಿಗಳ ಅನಾವರಣಕ್ಕೆ ಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಬಹಳಷ್ಟು ಕಾರುಗಳು ಮತ್ತು ಬೈಕ್‌ಗಳು ಅಖಾಡಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ.

ಆಟೋ ಎಕ್ಸ್‌ಪೋಗೆ ದಿನಗಣನೆ...ಚೀನಾ ಹೊರತುಪಡಿಸಿ 800 ವಿದೇಶಿ ಕಂಪನಿಗಳು ಭಾಗಿ

ಈ ಸಮಾರಂಭದಲ್ಲಿ ವಾಹನ ತಯಾರಕರು ಮಾತ್ರವಲ್ಲದೆ ಘಟಕಗಳ ತಯಾರಕರು ಸಹ ಭಾಗವಹಿಸುತ್ತಾರೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ, ಭಾರತೀಯ ಆಟೋಮೊಬೈಲ್ ತಯಾರಕರ ಸಂಘ, ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಮತ್ತು ಇತರರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದಕರ ವಿವರಗಳನ್ನು ಕೂಡ ಬಿಡುಗಡೆ ಮಾಡಲಾಗಿದ್ದು, 15 ದೇಶಗಳ ಸುಮಾರು 800 ಬಿಡಿಭಾಗಗಳ ತಯಾರಿಕಾ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಸ್ರೇಲ್, ಇಟಲಿ, ಜಪಾನ್, ಪೋಲೆಂಡ್, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್, ತೈವಾನ್, ಥೈಲ್ಯಾಂಡ್, ಲಂಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಕಂಪನಿಗಳು ಬರಲಿವೆ. ಇವೆಲ್ಲವು ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ತಮ್ಮ ಹೊಸ ಮಾದರಿಗಳನ್ನು ಬಿಡುಗಡೆ ಹಾಗೂ ಅನಾವರಣ ಗೊಳಿಸಲಿವೆ. ಈ ದೇಶಗಳ ಪ್ರಮುಖ ಉತ್ಪನ್ನಗಳು ಎಕ್ಸಪೋದಲ್ಲಿ ಮಿಂಚಲಿದ್ದು, ಚೀನಾ ದೇಶಕ್ಕೆ ಮಾತ್ರ ಇಲ್ಲಿ ನಿರಾಸಯೆಂದೇ ಹೇಳಬಹುದು.

ಚೀನಾಕ್ಕೆ ಸ್ಥಾನವಿಲ್ಲ
ಈ ಆಟೋ ಎಕ್ಸ್‌ಪೋವನ್ನು ಕಳೆದ ವರ್ಷ 2020 ರಲ್ಲಿ ಆಯೋಜಿಸಲಾಗಿತ್ತು. ಆದರೆ ಆ ವೇಳೆ ಕರೋನಾದಿಂದಾಗಿ ಅದನ್ನು ನಿಲ್ಲಿಸಲಾಯಿತು. ಇದಕ್ಕಾಗಿ ನೋಂದಣಿ ಮಾಡಿಕೊಂಡಿರುವ ಬಿಡಿಭಾಗಗಳ ಉತ್ಪಾದಕರಿಗಿಂತ ಈ ವರ್ಷ 200 ಮಂದಿ ಹೆಚ್ಚು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಚೀನಾದಿಂದ ಮಾತ್ರ ಭಾಗವಹಿಸುವ ಯಾವುದೇ ಕಂಪನಿಗಳಿಲ್ಲ. ವೀಸಾ ಸಮಸ್ಯೆಯಿಂದಾಗಿ ಚೀನಾದಿಂದ ಯಾರೂ ಬರಲು ಸಾಧ್ಯವಾಗದ ಕಾರಣ ಈ ಎಕ್ಸ್‌ಪೋಗೆ ಹಾಜರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

2020 ರಲ್ಲಿ ಆಟೋ ಎಕ್ಸ್‌ಪೋವನ್ನು ಆಯೋಜಿಸಿದಾಗಲೂ, ಚೀನಾದಲ್ಲಿ ಕರೋನವೈರಸ್ ಹರಡುವಿಕೆ ತೀವ್ರಗೊಳ್ಳಲು ಪ್ರಾರಂಭಿಸಿದ್ದರಿಂದ ಚೀನಾದಿಂದ ಯಾರೂ ಭಾಗವಹಿಸಲು ಯೋಜಿಸಿರಲಿಲ್ಲ. ಈಗಲು ಆ ದೇಶದಲ್ಲಿ ಹೊಸ ವೈರಸ್‌ನಿಂದಾಗಿ ಅಲ್ಲಿನ ಆಟೋ ಉದ್ಯಮಿಗಳಿಗೆ ನಿರಾಸೆ ಎದುರಾಗಿದೆ. ಇನ್ನು ಇದನ್ನು ಹೊರತುಪಡಿಸಿ ಆಟೋ ಎಕ್ಸ್‌ಪೋದಲ್ಲಿ ಈ ಬಾರಿಯ ಪ್ರಮುಖ ಹೈಲೆಟ್ ಎಂದರೆ ಇವಿಗಳು ಎನ್ನಲಾಗುತ್ತಿದೆ. ಆಂತರಿಕ ದಹನಕಾರಿ ಎಂಜಿನ್‌ಗಳಿಗಿಂತ ಎಲೆಕ್ಟ್ರಿಕ್ ಇಂಜಿನ್‌ಗಳು ಈ ಬಾರಿ ಉತ್ತಮವಾಗಿ ಸ್ವೀಕರಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚು ಸ್ಥಳಾವಕಾಶ
2018 ರಲ್ಲಿ, ಈ ಆಟೋ ಎಕ್ಸ್ಪೋ 52 ಸಾವಿರ ಚದರ ಮೀಟರ್ ಜಾಗದಲ್ಲಿ ನಡೆಯಿತು. 2020 ರಲ್ಲಿ 56 ಸಾವಿರ ಚದರ ಮೀಟರ್ ಸ್ಥಳವನ್ನು ಆಯ್ಕೆ ಮಾಡಲಾಯಿತು. ಪ್ರಸ್ತುತ, ಈ ಎಕ್ಸ್‌ಪೋ ಸುಮಾರು 60,000 ಚದರ ಮೀಟರ್ ಜಾಗದಲ್ಲಿ ನಡೆಯಲಿದೆ. ಅಂದರೆ ಪ್ರತಿ ವರ್ಷ ಎಕ್ಸ್‌ಪೋ ವಿಸ್ತರಣೆಯಾಗುತ್ತಿದೆ. ಈ ಆಟೋ ಎಕ್ಸ್‌ಪೋದಲ್ಲಿ ನೀವು ಯಾವುದನ್ನು ಹೆಚ್ಚು ಎದುರುನೋಡುತ್ತಿರುವಿರಿ ಎಂಬುದನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಿ.

More from DriveSpark

Article Published On: Sunday, January 8, 2023, 10:00 [IST]
English summary
Countdown to Auto Expo 800 foreign companies participating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+