Tata: ಹೊಸ ಟಾಟಾ ಕಾರಿನ ಹೆಸರು ಬಹಿರಂಗ, ತೀವ್ರ ಸಂಚಲನ.. ಪ್ರತಿಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳ ಆಕರ್ಷಕ ವೈಶಿಷ್ಟ್ಯ ವಿನ್ಯಾಸ ಹಾಗೂ ಕೈಗೆಟುಕುವ ಬೆಲೆ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಕಂಪನಿಯು ಮುಂಬರುವ ವರ್ಷಗಳಲ್ಲಿ ವಿವಿಧ ಕಾರು ಮಾದರಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ.
ದೇಶದಲ್ಲಿ ಟಾಟಾ ಮೋಟಾರ್ಸ್ 'ಫ್ರೆಸ್ಟ್' (Frest) ಎಂಬ ಹೊಸ ಕಾರಿನ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. 2022ರಲ್ಲಿಯೇ ಈ ಹೆಸರಿಗಾಗಿ ಕಂಪನಿ ಅರ್ಜಿ ಸಲ್ಲಿಸಿತ್ತು. ಈ ವಾರದ ಆರಂಭದಲ್ಲಿ ಅದನ್ನು ಸರ್ಕಾರ ಅಂಗೀಕರಿಸಿದೆ. ನೂತನ ಹೆಸರನ್ನು ಯಾವ ಕಾರಿಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಉತ್ಪಾದನೆಗೆ ಸಿದ್ದವಾಗಿರುವ Curvv (ಕಾನ್ಸೆಪ್ಟ್) ಎಸ್‌ಯುವಿಗೆ ಉಪಯೋಗಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕಂಪನಿಯು Curvv ಕಾರನ್ನು ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಪವರ್ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಿದೆ. ಮುಂದಿನ ವರ್ಷ (2024) Curvv ಎಲೆಕ್ಟ್ರಿಕ್ ರೂಪದಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ. ಆ ನಂತರ ಅಂದರೆ, 2025ರಲ್ಲಿ Curvv ಎಸ್‌ಯುವಿ ಹೊಸದಾದ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.
ಮೊದಲಿಗೆ ಎಲೆಕ್ಟ್ರಿಕ್ ರೂಪದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ Curvv ಎಸ್‌ಯುವಿ ಬಗ್ಗೆ ಮಾತನಾಡೋಣ. ಇದು, ಟಾಟಾದ ಜನರೇಷನ್2 ಪ್ಲಾಟ್‌ಫಾರ್ಮ್ ಆಧರಿಸಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 500 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಹೇಳಲಾಗಿದ್ದು, ಸರಿ ಸುಮಾರು 20 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು. ಎಲ್ಲದ್ದಕ್ಕೂ ಶೀಘ್ರದಲ್ಲೇ ತೆರೆ ಬೀಳಲಿದೆ.
ಈ ಎಲೆಕ್ಟ್ರಿಕ್ ಕಾರು, ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ. ಪ್ರಮುಖವಾಗಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟಚ್ ಎನೇಬಲ್ ಕ್ಲೇಮೇಟ್ ಕಂಟ್ರೋಲ್, ಆಕರ್ಷಕ ಸನ್ ರೂಫ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿರಲಿದೆ. Curvv ಎಲೆಕ್ಟ್ರಿಲ್ ಕಾರಿಗೆ ಭಾರತದ ಮಾರುಕಟ್ಟೆಯಲ್ಲಿ ಎಂಜಿ ZS ಇವಿ ಹಾಗೂ ಹುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳು ಪ್ರತಿಸ್ಪರ್ಧಿಯಾಗಿವೆ.
ಮುಂಬರುವ ಇಂಧನ ಚಾಲಿತ Curvv ಎಸ್‌ಯುವಿ ಬಗ್ಗೆ ತಿಳಿಯುವುದಾದರೆ, ಈ ಕಾರು ಭಾರತದ ಮಾರುಕಟ್ಟೆಯಲ್ಲಿ ರೂ.10.50 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು. 125 PS ಗರಿಷ್ಠ ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವಿರುವ ಹೊಸದಾದ 1.2 ಲೀಟರ್ ಪೆಟ್ರೋಲ್ ಅಥವಾ 1.5 ಲೀಟರ್ ಟರ್ಬೊ ಪೆಟೋಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಬಹುದು.
ಈ ಕಾರು, ನೂತನ ವೀಲ್ಸ್, ಹೊಸದಾದ ಬಂಪರ್, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್ ಹಾಗೂ ಸೆಕೆಂಡ್ ರೋನಲ್ಲಿ ಬೆಂಚ್ ಸೀಟ್ ಆಯ್ಕೆಯನ್ನು ಹೊಂದಿರಲಿದೆ. ಜೊತೆಗೆ ಏರ್ ಬ್ಯಾಗ್ ಸೇರಿದಂತೆ ವಿವಿಧ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಅಲ್ಲದೆ, ಇದು CNG ರೂಪಾಂತರದಲ್ಲೂ ಮಾರುಕಟ್ಟೆಗೆ ಬರುವ ನೀರಿಕ್ಷೆಯಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಪೋಕ್ಸ್‌ವ್ಯಾಗನ್ ಟೈಗುನ್ ಪ್ರತಿಸ್ಪರ್ಧಿಯಾಗಿವೆ.
ಒಟ್ಟಾರೆ, ಟಾಟಾ ಕಂಪನಿ ತನ್ನ ಹೊಸ ಕಾರಿಗೆ 'ಫ್ರೆಸ್ಟ್' ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಬಹುತೇಕರು, ಇದು Curvv ಎಸ್‌ಯುವಿಯಾಗಿದೆ ಎಂದು ಹೇಳುತ್ತಿದ್ದಾರೆ. ಮುಂಬರುವ ವರ್ಷವೇ ಎಲೆಕ್ಟ್ರಿಕ್ ಅವತಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ Curvv ಎಂಟ್ರಿ ಕೊಡಲಿದೆ. ಸದ್ಯಕ್ಕೆ ಈ ಹೆಸರು ತೀವ್ರ ಸಂಚಲನ ಮೂಡಿಸಿದ್ದು, ಪ್ರತಿಸ್ಪರ್ಧಿ ಕಂಪನಿಗಳು ಹಾಕಿಕೊಂಡಿದ್ದ ಕೆಲವು ಲೆಕ್ಕಚಾರಗಳು ಉಲ್ಟಾಪಲ್ಟಾ ಆಗಿವೆಯಂತೆ.


Click it and Unblock the Notifications