ಮೂಕವಿಸ್ಮಿತರಾದ ತಂದೆ: ಮಗಳ ಕನಸಿಗಾಗಿ ಸರ್ವಸ್ವ ತ್ಯಜಿಸಿದ ಅಪ್ಪನಿಗೆ ಕನಸಿನ ಕಾರು ಉಡುಗೊರೆ

ತಂದೆ-ತಾಯಿ ಮಕ್ಕಳ ಕನಸುಗಳನ್ನು ನನಸಾಗಿಸಲು ತಮ್ಮ ಕನಸುಗಳನ್ನು ತ್ಯಾಗ ಮಾಡುತ್ತಾರೆ. ನಂತರ ಮಕ್ಕಳು ತಮ್ಮ ಗುರಿಯನ್ನು ಮುಟ್ಟಿದ ಬಳಿಕ ಹೆತ್ತವರ ತ್ಯಾಗವನ್ನು ನೆನಪಿಸಿಕೊಂಡು ಅವರ ಕನಸುಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಕೆಲವೇ ದಿನಗಳ ಹಿಂದೆ, ಇಬ್ಬರು ಮುದ್ದು ಸಹೋದರಿಯರು ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ. ಯುವತಿಯರು ತಮ್ಮ ತಂದೆಗೆ ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಉಡುಗೊರೆಯಾಗಿ ನೀಡಿದ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಂದೆಯ ಮುಗ್ದ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

daughter-gifted-nissan-magnite-car-to-her-father

ವಿಡಿಯೋದಲ್ಲಿ ಸಹೋದರಿಯರು ಮತ್ತು ಅವರ ತಂದೆ-ತಾಯಿ ಕಾರಿನಲ್ಲಿ ನಿಸ್ಸಾನ್ ಡೀಲರ್‌ಶಿಪ್ ಅನ್ನು ತಲುಪುವುದರೊಂದಿಗೆ ಪ್ರಾರಂಭವಾಗುತ್ತದೆ. ಯುವತಿಯರು ಡೀಲರ್‌ಶಿಪ್‌ನಲ್ಲಿ ತಿರುಗಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಶೀಲಿಸುತ್ತಿದ್ದರು. ಇದೇ ವೇಳೆ ಅಚ್ಚರಿಯ ಘಟನೆ ಸಂಭವಿಸುತ್ತದೆ, ಡೀಲರ್‌ಶಿಪ್ ಸಿಬ್ಬಂದಿಯೊಬ್ಬರು ಅಭಿನಂದಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್ ಕೀಯನ್ನು ತಂದೆಗೆ ಹಸ್ತಾಂತರಿಸುತ್ತಾರೆ.

ಕೀ ತೆಗೆದುಕೊಳ್ಳುವಾಗ, ತಂದೆ ಅತ್ಯಂತ ಗೊಂದಲ್ಲಕ್ಕೊಳಗಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಲ್ಲರೂ ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ. ತಂದೆಯ ಅನುಮಾನ ಮತ್ತು ಸಂದೇಹವು ಸಂತೋಷವಾಗಿ ಬದಲಾಗುತ್ತದೆ. ತಂದೆ-ತಾಯಿ ಇಬ್ಬರೂ ತಮ್ಮ ಹೊಚ್ಚಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಕೆಂಪು ಕವರ್ ಅನ್ನು ತೆಗೆದು ತಂದೆ ಡ್ರೈವ್‌ ಮಾಡಿದ್ರೆ ಉಳಿದವರು ಹಿಂದೆ ಕುಳಿತು ಡೀಲರ್‌ಶಿಪ್‌ನಿಂದ ನಿರ್ಗಮಿಸುತ್ತಾರೆ.

daughter-gifted-nissan-magnite-car-to-her-father

ಹೃದಯಸ್ಪರ್ಶಿ ವಿಡಿಯೋ: ಈ ವೀಡಿಯೊ ಹೆಮ್ಮೆಯ ತಂದೆಯ ನಿಜವಾದ ಭಾವನೆಗಳನ್ನು ಹಂಚಿಕೊಂಡಿದೆ. ತಂದೆಯ ಸಂದೇಹ, ಸಾಕ್ಷಾತ್ಕಾರ, ಸಂತೋಷ ಮತ್ತು ಆಶ್ಚರ್ಯದಂತಹ ವಿವಿಧ ಭಾವನೆಗಳನ್ನು ವಿಡಿಯೋದಲ್ಲಿ ಕಾಣಬಹುದು. ಸಹೋದರಿಯರು ಹಂಚಿಕೊಂಡ ವೀಡಿಯೊದ ಶೀರ್ಷಿಕೆ ಕೂಡ ಅಷ್ಟೇ ಹೃದಯಸ್ಪರ್ಶಿಯಾಗಿತ್ತು.

ಶೀರ್ಷಿಕೆಯಲ್ಲಿ "ನನ್ನ ತಾಯಿ ನನನ್ನು ಮುನ್ನಡೆಸಿದರು, ಆದರೆ ನನ್ನ ತಂದೆ ನನಗೆ ನನ್ನ ಕನಸುಗಳನ್ನು ನನಸಾಗಿಸಿದ್ದಾರೆ. ಅವರಿಗೆ ಧನ್ಯವಾದಗಳು, ನಾನು ಭವಿಷ್ಯವನ್ನು ನೋಡಬಲ್ಲೆ ಮತ್ತು ನನ್ನ ಜೀವನದಲ್ಲಿ ನಾನು ಅಂದುಕೊಂಡ ಸ್ಥಳವನ್ನು ತಲುಪಿದ್ದೇನೆ. ಇಲ್ಲಿಯವರೆಗಿನ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಒಂದು ಸಣ್ಣ ರಿಟರ್ನ್ ಗಿಫ್ಟ್." ಎಂದು ಬರೆದುಕೊಂಡಿದ್ದಾರೆ.

daughter-gifted-nissan-magnite-car-to-her-father

ನಿಸ್ಸಾನ್ ಮ್ಯಾಗ್ನೈಟ್ ಉಡುಗೊರೆ: ಮೇಲೆ ಹೇಳಿದಂತೆ, ಸಹೋದರಿಯರು ತಮ್ಮ ತಂದೆಗೆ ಹೊಚ್ಚಹೊಸ ನಿಸ್ಸಾನ್ ಮ್ಯಾಗ್ನೈಟ್ ಸಬ್-ಕಾಂಪ್ಯಾಕ್ಟ್ SUV ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ SUV ಗಳಲ್ಲಿ ಒಂದಾಗಿದೆ. ಸಹೋದರಿಯರು ತಮ್ಮ ತಂದೆಗೆ ಆಯ್ಕೆ ಮಾಡಿದ ಕಾರಿನ ನಿಖರವಾದ ರೂಪಾಂತರದ ಬಗ್ಗೆ ತಿಳಿದುಬಂದಿಲ್ಲ.

ಪ್ರಸ್ತುತ, ನಿಸ್ಸಾನ್ ಮ್ಯಾಗ್ನೈಟ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಮೊದಲನೆಯದು 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 72 PS ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇನ್ನೊಂದು 1.0-ಲೀಟರ್ ಟರ್ಬೊ ಎಂಜಿನ್ ಆಗಿದ್ದು, ಇದು 100 PS ಪವರ್ ಮತ್ತು 16 Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Tuesday, December 5, 2023, 16:07 [IST]
English summary
Daughter gifted nissan magnite car to her father
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+