ರಿವೇಂಜ್ ಸ್ಟೋರಿ: 24ರ ಯುವ ನಟಿಯಿಂದ IPS ಅಧಿಕಾರಿಯ ಕಾರಿಗೆ ಡ್ಯಾಮೇಜ್.. ಮುಂದೇನಾಯ್ತು?
ಟಾಲಿವುಡ್ ಯುವ ನಟಿ ಡಿಂಪಲ್ ಹಯಾತಿ ಹಾಗೂ IPS ಅಧಿಕಾರಿ ರಾಹುಲ್ ಹೆಗ್ಡೆ ಮಧ್ಯ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿದೆ. ರಾಹುಲ್ ಹೆಗ್ಡೆ ಅವರ ಕಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆ, ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ಠಾಣೆ ಪೊಲೀಸರು, ನಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು, ಭಾರೀ ಸುದ್ದಿಯಾಗುತ್ತಿದೆ.
ನಟಿ ಡಿಂಪಲ್ ಹಯಾತಿ, ತನ್ನ ಗೆಳೆಯನೊಂದಿಗೆ ಜುಬಿಲಿ ಹಿಲ್ಸ್ ನ ಜರ್ನಲಿಸ್ಟ್ ಕಾಲೋನಿಯ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಿದ್ದಾರೆ. ಅಲ್ಲಿಯೇ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಹುಲ್ ಹೆಗ್ಡೆ ಅವರು ವಾಸಿಸುತ್ತಿದ್ದಾರೆ. ಪಾರ್ಕಿಂಗ್ ವಿಷಯವಾಗಿ ಇವರಿಬ್ಬರ ನಡುವೆ ಹಲವು ಬಾರಿ ಜಗಳವಾಗಿದ್ದು, ಎಷ್ಟೋ ಬಾರಿ ರಾಹುಲ್ ಹೆಗ್ಡೆ ಅವರಿಗೆ ನಟಿ ತೊಂದರೆ ನೀಡಿದ್ದರಂತೆ.

ಕೆಲವೇ ದಿನಗಳ ಹಿಂದೆ ಅಂದರೆ ಮೇ.14ರಂದು ಹೇಗಾದರೂ ಮಾಡಿ, ಸೇಡು ತೀರಿಸಿಕೊಳ್ಳಬೇಕು ಎಂದು ನಿರ್ಧರಿಸಿದಂತೆ ಕಾಣುವ ನಟಿ ಡಿಂಪಲ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಅವರು ಬಳಸುವ ಟೊಯೊಟಾ ಫಾರ್ಚೂನರ್‌ಗೆ ತನ್ನ ಬಿಎಂಡಬ್ಲ್ಯೂ ಕಾರಿನಿಂದ ಡಿಕ್ಕಿ ಹೊಡೆದು, ಕಾಲಿನಿಂದ ಒದ್ದಿದ್ದಾರೆ ಎಂದು ವರದಿಯಾಗಿದೆ. ಫಾರ್ಚೂನರ್ ಹಿಂಭಾಗ ಕೊಂಚ ಡ್ಯಾಮೇಜ್ ಆಗಿದೆ.
ಈ ಸಂಬಂಧ ಐಪಿಎಸ್ ಅಧಿಕಾರಿಯ ಕಾರು ಚಾಲಕ, ಚೇತನ್ ಕುಮಾರ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದು ಉದ್ದೇಶಪೂರ್ವ ಕೆಲಸವಾಗಿತ್ತು ಎಂಬುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದ್ದು, ನಟಿಯ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಸೋಮವಾರ (ಮೇ 29) ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು.
ಅದರಂತೆ ನಟಿ ಹಾಗೂ ಆಕೆಯ ಸ್ನೇಹಿತ ವಿಚಾರಣೆಗೆ ಹಾಜರಾಗಿ ಪೊಲೀಸ್ ಠಾಣೆಯಿಂದ ಹೊರಬರುತ್ತಿರುವ ದೃಶ್ಯಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದವು. ಘಟನೆ ಕುರಿತಂತೆ ನಟಿ ಡಿಂಪಲ್ ಹಯಾತಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಟ್ವೀಟ್ ಮಾಡಿರುವ ನಟಿ, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ವಿರುದ್ಧ ಕೆಂಡಕಾರಿದ್ದಾರೆ. 'ಅಧಿಕಾರದ ದುರುಪಯೋಗವು ತಪ್ಪುಗಳನ್ನು ಮರೆಮಾಡುವುದಿಲ್ಲ. ಸತ್ಯಮೇವ ಜಯತೆ' ಎಂದು ಬರೆದುಕೊಂಡಿದ್ದಾರೆ.
24ರ ಯುವ ನಟಿ ಡಿಂಪಲ್ ಹಯಾತಿ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, 2017ರಲ್ಲಿ ಗಲ್ಫ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ದೇವಿ 2, ಅಭಿನೇತ್ರಿ 2, ಗದ್ದಲಕೊಂಡ ಗಣೇಶ್, ಯುರೇಕಾ, ಅತ್ರಾಂಗಿ ರೆ, ವೀರಮೇ ವಾಗೈ ಸೂಡುಂ, ಕಿಲಾಡಿ ಹಾಗೂ ರಾಮಬಾಣಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು, ಈ ಹಿಂದೆಯೂ ನಟಿ ಡಿಂಪಲ್ ಹಯಾತಿಯಿಂದ ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಅವರಿಗೆ ತುಂಬಾ ಸಮಸ್ಯೆಯಾಗಿಯಂತೆ. ಇಷ್ಟುದಿನ ಸಹಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಆದರೀಗ ಅವರ ಟೊಯೊಟಾ ಫಾರ್ಚೂನರ್‌ಗೆ ಆಕೆ ಬಿಎಂಡಬ್ಲ್ಯೂ ಕಾರಿನಿಂದ ಡಿಕ್ಕಿ ಹೊಡೆದಿರುವ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇವರಿಬ್ಬರ ನಡುವಿನ ತಿಕ್ಕಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications