BYD: ಚೀನಾ ಮಾಲೀಕತ್ವದ 'ಬಿವೈಡಿ ಸೀಲ್'ಗೆ 5 ಸ್ಟಾರ್ ರೇಟಿಂಗ್, ಅತ್ಯಂತ ಸುರಕ್ಷಿತ ಕಾರಿದು!

ಚೀನಾದ ಬಿವೈಡಿ (BYD) ದೇಶೀಯ ಮಾರುಕಟ್ಟೆಯಲ್ಲಿ ಆಟೋ 3 (Atto 3) ಎಲೆಕ್ಟ್ರಿಕ್ ಕಾರನ್ನು ಮಾರಾಟ ಮಾಡುತ್ತಿದೆ. ಮುಂಬರುವ ತಿಂಗಳಲ್ಲಿ ವಿವಿಧ ಕಾರುಗಳನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದ್ದು, ಹೊಸ 'ಸೀಲ್' ಸೆಡಾನ್ ಬಗ್ಗೆ ಮಾಹಿತಿಯೊಂದು ದೊರೆತಿದೆ.

ಕಳೆದ ಜನವರಿಯಲ್ಲಿ (2023) ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿವೈಡಿ ಕಂಪನಿ ಸೀಲ್ (Seal) ಸೆಡಾನ್ ಅನ್ನು ಪ್ರದರ್ಶನ ಮಾಡಿತ್ತು. ಸದ್ಯ, ಇದೇ ಕಾರು, ಯುರೋ ಎನ್‌ಸಿಎಪಿ (Euro NCAP) ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ ಎಂದು ವರದಿಯಾಗಿದೆ. ವಯಸ್ಕ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಶೇಕಡ 89%ಗೆ 86% ಅಂಕಗಳನ್ನು ಗಳಿಸಿದೆ.

BYD: ಚೀನಾ ಮಾಲೀಕತ್ವದ ಬಿವೈಡಿ ಸೀಲ್ಗೆ 5 ಸ್ಟಾರ್ ರೇಟಿಂಗ್, ಅತ್ಯಂತ ಸುರಕ್ಷಿತ ಕಾರಿದು!

ಬಿವೈಡಿ ಸೀಲ್ ಸೆಡಾನ್ ಸುರಕ್ಷತೆ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಮಲ್ಟಿ ಏರ್‌ಬ್ಯಾಗ್‌ಗಳನ್ನು ಹೊಂದಿದೆ. ವಿಶೇಷವಾಗಿ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ತಂತ್ರಜ್ಞಾನವನ್ನು ಪಡೆದಿದೆ. ಈ ಟೆಕ್ನಲಾಜಿ ಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ - ಕೀಪಿಂಗ್ ಅಸಿಸ್ಟ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ಸೇಫ್ಟಿ ಫೀಚರ್ಸ್ ಹೊಂದಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತದೆ.

ಯುರೋಪ್ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಬಿವೈಡಿ ಸೀಲ್ ಸೆಡಾನ್, 82.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ ಡುಯಲ್ ಮೋಟಾರ್ ಸೆಟಪ್ ಒಳಗೊಂಡಿದೆ. 312 PS ಗರಿಷ್ಠ ಪವರ್ ಹಾಗೂ 360 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್ ನಲ್ಲಿ 700 km ರೇಂಜ್ ನೀಡುತ್ತದೆ. ಮತ್ತೊಂದು, 61.4 kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 550 km ಕ್ರಮಿಸುತ್ತದೆ.

BYD: ಚೀನಾ ಮಾಲೀಕತ್ವದ ಬಿವೈಡಿ ಸೀಲ್ಗೆ 5 ಸ್ಟಾರ್ ರೇಟಿಂಗ್, ಅತ್ಯಂತ ಸುರಕ್ಷಿತ ಕಾರಿದು!

ಈ ಕಾರು, ಕೇವಲ 3.8 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯಲಿದೆ. 15.6 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನದ ಆಯ್ಕೆವನ್ನು ಒಳಗೊಂಡಿದೆ.

ಮುಂಬರಲಿರುವ ಬಿವೈಡಿ ಸೀಲ್ ಸೆಡಾನ್, ಭಾರತದ ಮಾರುಕಟ್ಟೆಯಲ್ಲಿ ರೂ.60 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. 2024ರ ಮಧ್ಯ ಭಾಗದಲ್ಲಿ ಬಿಡುಗಡೆಯಾಗಬಹುದು. ಈ ಕಾರಿಗೆ ಹುಂಡೈ ಐಯೋನಿಕ್ 5 (Hyundai Ioniq 5), ಕಿಯಾ ಇವಿ6 (Kia EV6) ಮತ್ತು ವೋಲ್ವೋ ಸಿ40 ರೀಚಾರ್ಜ್ (Volvo C40 Recharge) ಪ್ರಬಲ ಪ್ರತಿಸ್ಪರ್ಧಿಯಾಗಲಿವೆ.

BYD: ಚೀನಾ ಮಾಲೀಕತ್ವದ ಬಿವೈಡಿ ಸೀಲ್ಗೆ 5 ಸ್ಟಾರ್ ರೇಟಿಂಗ್, ಅತ್ಯಂತ ಸುರಕ್ಷಿತ ಕಾರಿದು!

ಪ್ರಸ್ತುತ, ದೇಶದಲ್ಲಿ ಖರೀದಿಗೆ ಸಿಗುವ ಬಿವೈಡಿ ಆಟೋ 3, ರೂ.33.99 ಲಕ್ಷದಿಂದ ರೂ.34.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಐದು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುತ್ತದೆ. 60.48 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 521 km ರೇಂಜ್ ನೀಡುತ್ತದೆ. 12.8 - ಇಂಚಿನ ರೊಟೇಟಿಂಗ್ ಟಚ್‌ಸ್ಕ್ರೀನ್, 5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 26, 2023, 18:44 [IST]
English summary
Euro ncap crash test byd seal sedan scores 5 star now its safety car
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+