Hyundai: ಎಕ್ಸ್‌ಟರ್, ಕ್ರೆಟಾ, ವೆನ್ಯೂ, ವೆರ್ನಾ ಸೇರಿದಂತೆ ಹ್ಯುಂಡೈ ಕಾರುಗಳ ಬೆಲೆ ಶೀಘ್ರ ಏರಿಕೆ.. ಸಿಒಒ

ದೇಶದಲ್ಲಿ ಹ್ಯುಂಡೈ ಮೋಟಾರ್ (Hyundai Motor) ಜನಪ್ರಿಯ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ತನ್ನ ಕಾರು ಹಾಗೂ ಎಸ್‌ಯುವಿ ಬೆಲೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದು, ಜನವರಿ ವೇಳೆಗೆ ದರಗಳು ಅಧಿಕಗೊಳ್ಳಬಹುದು ಎಂಬ ಸುಳಿವನ್ನು ನೀಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಗೆ ಜನಪ್ರಿಯ ಕ್ರೆಟಾ, ವೆನ್ಯೂ, ಎಕ್ಸ್‌ಟರ್ ಹಾಗೂ ವೆರ್ನಾ ಸೇರಿದಂತೆ ಕಂಪನಿಯ ಪ್ರಮುಖ ಮಾದರಿಗಳ ಬೆಲೆ ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ. ಆದರೆ, ನೂತನ ದರಗಳು ಎಂದಿನಿಂದ ಜಾರಿಗೆ ಬರಲಿವೆ ಎಂಬುದರ ಬಗ್ಗೆ ವಿವರಗಳು ಲಭ್ಯವಿಲ್ಲ. ಹ್ಯುಂಡೈ, ಆಗಸ್ಟ್‌ನಲ್ಲಿ ಕಡೆಯದಾಗಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿತ್ತು.

Hyundai: ಎಕ್ಸ್‌ಟರ್, ಕ್ರೆಟಾ, ವೆನ್ಯೂ, ವೆರ್ನಾ ಸೇರಿದಂತೆ ಹ್ಯುಂಡೈ ಕಾರುಗಳ ಬೆಲೆ ಶೀಘ್ರ ಏರಿಕೆ.. ಸಿಒಒ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಸಿಒಒ ತರುಣ್ ಗಾರ್ಗ್ (Tarun Garg, COO) ಅವರು, 'ಕಚ್ಚಾ ವಸ್ತುಗಳಾದ ತಾಮ್ರ (copper) ಮತ್ತು ಪ್ಲಾಸ್ಟಿಕ್‌ ಬೆಲೆ ಹೆಚ್ಚಳವಾಗಿದೆ. ಜೊತೆಗೆ ಹಣದುಬ್ಬರ ಸೇರಿದಂತೆ ವಿವಿಧ ಕಾರಣಗಳಿಗೆ ಬೆಲೆ ಏರಿಕೆಗೆ ಮಾಡಲು ಯೋಜಿಸಿದ್ದೇವೆ. ನಾವು ಮುಂದಿನ ಎರಡು ವಾರಗಳಲ್ಲಿ ದರ ಏರಿಕೆ ಪ್ರಮಾಣವನ್ನು ಅಂತಿಮಗೊಳಿಸುತ್ತೇವೆ' ಎಂದು ಹೇಳಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಮಾರಾಟಗೊಳಿಸುವ ಪ್ರಮುಖ ಮಾದರಿಗಳ ಬಗ್ಗೆ ತಿಳಿಯೋಣ. ಅದರಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆಯುವ ಮೂಲಕ ಮುನ್ನುಗ್ಗುತ್ತಿರುವ ಹ್ಯುಂಡೈ ಎಕ್ಸ್‌ಟರ್‌ (Hyundai Exter) ರೂ.6 ಲಕ್ಷದಿಂದ ರೂ.10.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಸಿಗುವ ಈ ಕಾರು, 19.2 kmpl - 27.1 km/kg ಮೈಲೇಜ್ ಕೊಡುತ್ತದೆ.

Hyundai: ಎಕ್ಸ್‌ಟರ್, ಕ್ರೆಟಾ, ವೆನ್ಯೂ, ವೆರ್ನಾ ಸೇರಿದಂತೆ ಹ್ಯುಂಡೈ ಕಾರುಗಳ ಬೆಲೆ ಶೀಘ್ರ ಏರಿಕೆ.. ಸಿಒಒ

ಹ್ಯುಂಡೈ ಎಕ್ಸ್‌ಟರ್‌ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದರೆ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ - ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಹ್ಯುಂಡೈ ಕ್ರೆಟಾ (Hyundai Creta) ಬಗ್ಗೆ ಹೇಳುವುದಾದರೆ, ಈ ಕಾರು ರೂ.10.87 ಲಕ್ಷದಿಂದ ರೂ.19.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಕಾರು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 14.0 - 18.0 kmpl ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Hyundai: ಎಕ್ಸ್‌ಟರ್, ಕ್ರೆಟಾ, ವೆನ್ಯೂ, ವೆರ್ನಾ ಸೇರಿದಂತೆ ಹ್ಯುಂಡೈ ಕಾರುಗಳ ಬೆಲೆ ಶೀಘ್ರ ಏರಿಕೆ.. ಸಿಒಒ

ಹ್ಯುಂಡೈ ವೆನ್ಯೂ (Hyundai Venue) ರೂ.7.89 ಲಕ್ಷದಿಂದ ರೂ.13.48 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 24.2 kmpl ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಮತ್ತು 8-ಇಂಚಿನ ಡಿಜಿಟೈಸ್ಡ್ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮೆಟಿಕ್ ಎಸಿ ಒಳಗೊಂಡಂತೆ ನಾನಾ ಫೀಚರ್ಸ್ ಪಡೆದಿದೆ.

ಹ್ಯುಂಡೈ ವೆರ್ನಾ (Hyundai Verna) ಬಗ್ಗೆ ಹೇಳುವುದಾದರೆ, ಈ ಕಾರು ರೂ.10.96 ಲಕ್ಷದಿಂದ ರೂ.17.38 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 18.6 - 20.6 kmpl ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 4, 2023, 11:20 [IST]
English summary
Exter creta venue and other hyundai cars price hike soon coo says
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+