Tata: ಹೊಸ ಟಾಟಾ ಹ್ಯಾರಿಯರ್, ಸಫಾರಿ ಬಿಡುಗಡೆಗೆ ದಿನಾಂಕ ನಿಗದಿ, ನಿರೀಕ್ಷೆಗೂ ಮೀರಿ ವಿಶೇಷತೆಗಳಿರಲಿವೆ?

ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಜನಪ್ರಿಯತೆ ಗಳಿಸಿದೆ. ಇದೀಗ, ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ನವೀಕರಿಸಿದ (facelift) ಹ್ಯಾರಿಯರ್ (Harrier) ಹಾಗೂ ಸಫಾರಿ (Safari) ಎಸ್‌ಯುವಿ ಬಿಡುಗಡೆಗೊಳಿಸಲು ದಿನಾಂಕ ನಿಗದಿಪಡಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು, ಇದೇ ಅಕ್ಟೋಬರ್ 17 (October 17) ರಂದು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿವೆ. ಇವು, ಹೊಸ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು, ಆಸಕ್ತ ಗ್ರಾಹಕರು ರೂ.25,000 ಪಾವತಿಸುವ ಮೂಲಕ ಆರ್ಡರ್ ಮಾಡಬಹುದು. ಈ ಕಾರುಗಳ ಬಿಡುಗಡೆ ದಿನವೇ ಬೆಲೆಯೂ ಘೋಷಣೆಯಾಗಲಿದೆ.

Tata: ಹೊಸ ಟಾಟಾ ಹ್ಯಾರಿಯರ್, ಸಫಾರಿ ಬಿಡುಗಡೆಗೆ ದಿನಾಂಕ ನಿಗದಿ, ನೀರಿಕ್ಷೆಗೂ ಮೀರಿ ವಿಶೇಷತೆಗಳಿರಲಿವೆ?

ಹೊಸ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು ಹೊರಭಾಗದ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದಿರಲಿವೆ. ಇವುಗಳ ಮುಂಭಾಗ ಆಕರ್ಷಕ ನೋಟಕ್ಕಾಗಿ ಮರುವಿನ್ಯಾಸಗೊಳಿಸಲಾದ ಸ್ಪ್ಲಿಟ್ ಹೆಡ್ ಲ್ಯಾಂಪ್ಸ್, ಅತ್ಯಾಧುನಿಕ ಎಲ್ಐಡಿ ಡಿಆರ್‌ಎಲ್‌ ಅನ್ನು ಹೊಂದಿರಲಿವೆ. ಹಿಂಭಾಗ, ಎಲ್ಇಡಿ ಟೈಲ್ ಲೈಟ್ ಇದ್ದು, ಹೊಸದಾದ ಬಂಪರ್ ಕೂಡ ಒಳಗೊಂಡಿರಲಿವೆ. ಸಫಾರಿ 19 ಇಂಚಿನ ಹಾಗೂ ಹ್ಯಾರಿಯರ್ 18 ಇಂಚಿನ ನೂತನ ಅಲಾಯ್ ವೀಲ್ಸ್ ಪಡೆದಿರಲಿದೆ.

ಇವೆರೆಡು ಕಾರುಗಳು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿರುವ ನಿರೀಕ್ಷೆಯಿದೆ. ಟಾಟಾದ ಆಕರ್ಷಕ ಲೋಗೋದೊಂದಿಗೆ ಹೊಸದಾದ 4 - ಸ್ಪೋಕ್ ಸ್ಟೀರಿಂಗ್ ವೀಲ್, ದೊಡ್ಡದಾದ 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್ - ಆಪರೇಟೆಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಮತ್ತು ಆಂಬಿಯೆಂಟ್ ಲೈಟಿಂಗ್ ಒಳಗೊಂಡಿರಲಿವೆ.

Tata: ಹೊಸ ಟಾಟಾ ಹ್ಯಾರಿಯರ್, ಸಫಾರಿ ಬಿಡುಗಡೆಗೆ ದಿನಾಂಕ ನಿಗದಿ, ನೀರಿಕ್ಷೆಗೂ ಮೀರಿ ವಿಶೇಷತೆಗಳಿರಲಿವೆ?

ಇದರೊಟ್ಟಿಗೆ ನೂತನ ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು, ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ಗೆಸ್ಚರ್ - ಕಂಟ್ರೋಲ್ಡ್ ಪವರ್ಡ್ ಟೈಲ್‌ಗೇಟ್, ವೈರ್‌ಲೆಸ್ ಫೋನ್ ಚಾರ್ಜರ್, ಅಡ್ಜಸ್ಟ್ಏಬಲ್ & ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಕ್ರೂಸ್ ಕಂಟ್ರೋಲ್, ಸನ್‌ರೂಫ್, ಸುರಕ್ಷತೆಯ ದೃಷ್ಟಿಯಿಂದ ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) 7 ಏರ್‌ಬ್ಯಾಗ್ಸ್, 360 - ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಲಿವೆ.

ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು, ಬಹುತೇಕ ಒಂದೇ ವಿಧವಾದ ಎಂಜಿನ್ ಒಳಗೊಂಡಿರುವ ನೀರಿಕ್ಷೆಯಿದೆ. ಇವೆರೆಡು 2.0-ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್ ಪಡೆದಿರಲಿದ್ದು, 168 hp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿರಲಿವೆ. ಜೊತೆಗೆ 6 - ಸ್ವೀಡ್ ಮ್ಯಾನುವಲ್ ಅಥವಾ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಅಲ್ಲದೆ, 1.5 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನೊಂದಿಗೆ ಗ್ರಾಹಕರಿಗೆ ದೊರೆಯುವ ಸಾಧ್ಯತೆಯಿದೆ. ಈ ಹ್ಯಾರಿಯರ್, ಸಫಾರಿ ಎಸ್‌ಯುವಿಗಳ ಬೆಲೆಯನ್ನು ಕಂಪನಿಯು ಎಲ್ಲಿಯೂ ಬಹಿರಂಗಪಡಿಸಲ್ಲ. ಆದರೂ, ಹೊಸ ನವೀಕರಿಸಿದ ಹ್ಯಾರಿಯರ್ ರೂ.15 ಲಕ್ಷ ಹಾಗೂ ಸಫಾರಿ ರೂ.16 ಲಕ್ಷ ಆಸುಪಾಸಿನಲ್ಲಿ (ಎಕ್ಸ್ ಶೋರೂಂ) ದರದಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನು, ನವೀಕರಿಸಿದ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು ಬಿಡುಗಡೆಯಾಗಿರುವುದು ಟಾಟಾ ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ. ಇವು ನವೀನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಬರುತ್ತಿರುವುದರಿಂದ ದಸರಾ ಹಬ್ಬದ ವೇಳೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಬಹುದು. ಈಗಾಗಲೇ, ಬುಕ್ಕಿಂಗ್ ಆರಂಭವಾಗಿದ್ದು, ನಿಗದಿತ ಮುಂಗಡ ಹಣ ಪಾವತಿಸಿ, ನೀವು ಆರ್ಡರ್ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 12, 2023, 15:01 [IST]
English summary
Facelift tata harrier safari suv launch date fix
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+