22 ಲಕ್ಷ ರೂ. ಬಿಲ್‌ ಪಾವತಿಸದೇ ಪರಾರಿಗೆ ಯತ್ನ: ಉದ್ಯಮಿಗಳ ಐಷಾರಾಮಿ ಕಾರು ಹರಾಜಿಗಿಟ್ಟ ಹೋಟೆಲ್‌

ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಚಂಡೀಗಢ ಇಂಡಸ್ಟ್ರಿಯಲ್ ಅಂಡ್ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಸಿಐಟಿಸಿಒ) ನಡೆಸುತ್ತಿರುವ ಹೋಟೆಲ್ ನಲ್ಲಿ 22 ಲಕ್ಷ ರೂಪಾಯಿ ಬಿಲ್‌ಗಳನ್ನು ಪಾವತಿಸಲಾಗದೇ ಪಂಜಾಬ್ ಮೂಲದ ಇಬ್ಬರು ಉದ್ಯಮಿಗಳು ತಮ್ಮ ಕಾರುಗಳನ್ನು ಅಡ ಇಟ್ಟು ಹೋದ ಘಟನಯು ಸುದ್ದಿಯಾಗಿತ್ತು.

ಪಂಜಾಬ್ ಮೂಲದ ಅಶ್ವನಿ ಕುಮಾರ್ ಚೋಪ್ರಾ ಮತ್ತು ರಾಮ್ನಿಕ್ ಬನ್ಸಾಲ್ ಎಂಬ ಉದ್ಯಮಿಗಳು ಚಂಡೀಗಢ ಇಂಡಸ್ಟ್ರಿಯಲ್ ಅಂಡ್ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ನಡೆಸುತ್ತಿರುವ ಹೋಟೆಲ್ ಶಿವಲಿಕ್‌ವ್ಯೂನಲ್ಲಿ ಉಳಿದುಕೊಂಡಿದ್ದರು. ಆದರೆ ಇವರು ಬಿಲ್ ಪಾವತಿಸಲು ಹಣ ವಿಲ್ಲದೇ ಗ್ಯಾರಂಟಿಗೆ ಹೋಟೆಲ್ ಆವರಣದಲ್ಲಿ ತಮ್ಮ ಐಷಾರಾಮಿ ಕಾರುಗಳನ್ನು ಇಟ್ಟು ಹೋದರು. ಆದರೆ ಅವರು ಮತ್ತೆ ಹಿಂತಿರುಗಲಿಲ್ಲ ಅಲ್ಲದೇ ಹೋಟೆಲ್ ಬಿಲ್ ಅನ್ನು ಕೂಡ ಪಾವತಿಸಿಲ್ಲ.

ಉದ್ಯಮಿಗಳ ಐಷಾರಾಮಿ ಕಾರು ಹರಾಜಿಗಿಟ್ಟ ಹೋಟೆಲ್‌

ನಷ್ಟವನ್ನು ಸರಿದೂಗಿಸಲು, ಹೋಟೆಲ್ ಶಿವಾಲಿಕ್ ಅಧಿಕಾರಿಗಳು ಜಪ್ತಿ ಮಾಡಿದ್ದ ಎರಡೂ ಐಷಾರಾಮಿ ಕಾರುಗಳನ್ನು ಹರಾಜು ಮಾಡಲು ನಿರ್ಧರಿಸಿದರು. ಈ ಇಬ್ಬರೂ ಉದ್ಯಮಿಗಳು ಒಬ್ಬರಿಗೊಬ್ಬರು ತಿಳಿದಿದ್ದರು. ಈ ಎರಡೂ ಉದ್ಯಮಿಗಳು ಹೋಟೆಲ್ ಶಿವಾಲಿಕ್ನ ವಿಭಿನ್ನ ಸೂಟ್‌ಗಳಲ್ಲಿ ಹಲವಾರು ತಿಂಗಳುಗಳ ಕಾಲ ಇದ್ದರು. ಈ ಇಬ್ಬರೂ ಅತಿಥಿಗಳು ಪ್ರತ್ಯೇಕ ಕಾರುಗಳನ್ನು ಹೊಂದಿದ್ದರು. ಅವುಗಳಲ್ಲಿ ಒಂದು ಷೆವರ್ಲೆ ಕ್ರೂಜ್ ಮತ್ತು ಇನ್ನೊಂದು ಆಡಿ ಕ್ಯೂ3 ಐಷಾರಾಮಿ ಎಸ್‌ಯುವಿಯನ್ನು ಹೊಂದಿದ್ದರು.

ಇದೀಗ ಷೆವರ್ಲೆ ಕ್ರೂಜ್ ಮತ್ತು ಆಡಿ ಕ್ಯೂ3 ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಹೋಟೆಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇಬ್ಬರೂ ಅತಿಥಿಗಳು ತಲಾ 11 ಲಕ್ಷ ರೂ.ಗಳನ್ನು ಬಿಲ್ ಆಗಿ ಪಾವತಿಸಬೇಕು. ಹೋಟೆಲ್ ಶಿವಾಲಿಕ್ ಐಷಾರಾಮಿ ಆಡಿ Q3 ಎಸ್‍ಯುವಿಗೆ ಮೂಲ ಬೆಲೆಯನ್ನು ರೂ. 10 ಲಕ್ಷ ನಿಗದಿಪಡಿಸಿದ್ದರೆ, ಷೆವರ್ಲೆ ಕ್ರೂಜ್ ಕಾರಿಗೆ ಮೂಲ ಬೆಲೆ 1.5 ಲಕ್ಷ ನಿಗಧಿ ಪಡಿಸಿದೆ. ಫೆಬ್ರವರಿ 14 ರಂದು ಹರಾಜು ನಡೆಯಲಿದೆ.

ಉದ್ಯಮಿಗಳ ಐಷಾರಾಮಿ ಕಾರು ಹರಾಜಿಗಿಟ್ಟ ಹೋಟೆಲ್‌

2018 ರ ಮೇ ತಿಂಗಳಲ್ಲಿ, ಇಬ್ಬರು ಉದ್ಯಮಿ ಅಶ್ವನಿ ಕುಮಾರ್ ಚೋಪ್ರಾ ಮತ್ತು ರಾಮ್ನಿಕ್ ಬನ್ಸಾಲ್ ಅವರು ಶಿವಾಲಿಕ್ ಹೋಟೆಲ್ ನಲ್ಲಿ ವಿಭಿನ್ನ ಸೂಟ್ ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರು ಬಿಲ್‌ಗಳನ್ನು ಪಾವತಿಸಲಿಲ್ಲ. ಅವರು ಹೋಟೆಲ್ ಒದಗಿಸಿದ ಆಹಾರ, ಪಾನೀಯಗಳು ಮತ್ತು ಇತರ ಸೌಲಭ್ಯಗಳೊಂದಿಗೆ ಆನಂದಿಸುತ್ತಿದ್ದರು. ಬಾಕಿ ಪಾವತಿಸುವಂತೆ ಹೋಟೆಲ್‌ನವರು ಒತ್ತಾಯಿಸಿದಾಗ ರಾಮ್ನಿಕ್ ಬನ್ಸಾಲ್ ಅವರುಮೂರು ಚೆಕ್‌ಗಳನ್ನು ನೀಡಿದರು. ಆದರೆ ಅದು ತಲಾ 6 ಲಕ್ಷ ರೂ. ಚೆಕ್‌ಗಳಾಗಿದೆ.

ಅತಿಥಿಗಳ ವರ್ತನೆಯನ್ನು ನೋಡಿದ ಹೋಟೆಲ್ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ದೂರು ನೀಡಿದರು. ದೂರು ಸ್ವೀಕರಿಸಿ ತನಿಖೆಗೆ ಬರುವ ಮೊದಲು ಬಾಕಿ ಹಣವನ್ನು ಪಾವತಿಸದೆ ಹೋಟೆಲ್‌ನಿಂದ ಪರಾರಿಯಾಗಲು ಪ್ರಯತ್ನಿಸಿದರು. ಆದರೆ ಹೋಟೆಲ್ ಸೆಕ್ಯುರಿಟಿ ಗೇಟ್‌ ಗಳನ್ನು ಮುಚ್ಚಿ ಅವರನ್ನು ಹೊರಗಡೆ ಹೋಗದಂತೆ ತಡೆದರು. ನಂತರ ಬನ್ಸಾಲ್ ಅವರು ಪಾವತಿಸಲು ಈಗ ಹಣವಿಲ್ಲ ಎಂದು ಹೇಳಿ ಗ್ಯಾರಂಟಿಗಾಗಿ ತಮ್ಮ ಐಷಾರಾಮಿ ಆಡಿ ಕ್ಯೂ3 ಎಸ್‌ಯುವಿಯನ್ನು ಇಡುವುದಾಗಿ ಹೇಳಿದರು.

ಬಳಿಕ ಅಶ್ವನಿ ಕುಮಾರ್ ಚೋಪ್ರಾ ಅವರು ತಮ್ಮ ಷೆವರ್ಲೆ ಕ್ರೂಜ್ ಕಾರನ್ನು ಗ್ಯಾರಂಟಿಗಾಗಿ ಇಡುವುದಾಗಿ ಹೇಳಿ ಹೋಟೆಲ್ ಸಿಬ್ಬಂದಿಗಳಿಗೆ ಕಾರ್ ಕೀ ಅನ್ನು ಹಸ್ತಾಂತರಿಸಿದರು. 2018ರಲ್ಲಿ ಈ ಘಟನೆ ನಡೆದಿದ್ದು, ಇಷ್ಟು ವರ್ಷ ಕಳೆದರೂ ಇಬ್ಬರೂ ಬಾಕಿ ಪಾವತಿಸಿಲ್ಲ. ಘಟನೆಯ ನಂತರ, ಹೋಟೆಲ್ ಅಧಿಕಾರಿಗಳ ಲೋಪವನ್ನು ಪರಿಶೀಲಿಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದರು. ಚಂಡೀಗಢ ಇಂಡಸ್ಟ್ರಿಯಲ್ ಅಂಡ್ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳಾದ ರಜನೀಶ್ ದಿವಾನ್ ಮತ್ತು ಮಣಿಂದರ್ ಸಿಂಗ್ ಅವರ ವರದಿಯು ಆರು ಸಿಬ್ಬಂದಿಗಲ ಲೋಪವಾಗಿದೆ ಎಂದು ವರದಿ ನೀಡಿದ್ದರು.

ಈ ವರದಿಯನ್ನು ಆಧರಿಸಿ, ಆ ಸಿಬ್ಬಂದಿಗಳ ಶೇಕಡಾ 50 ರಷ್ಟು ಸಂಬಳ ಕಡಿತ ಮಾಡಿದ್ದಾರೆ. ಇನ್ನು ಫ್ರಂಟ್ ಆಫೀಸ್ ಮ್ಯಾನೇಜರ್ ಜೊತೆಗೆ ಗೆಸ್ಟ್ ರಿಲೇಶನ್ಸ್ ಎಕ್ಸಿಕ್ಯೂಟಿವ್ ಮತ್ತು ರಿಲೇಶನ್ಸ್ ಎಕ್ಸಿಕ್ಯೂಟಿವ್ ಮತ್ತು ಮೂವರು ರಿಸೆಪ್ಷನಿಸ್ಟ್‌ಗಳು 25 ಪ್ರತಿಶತ ಪಾವತಿಸಲು ಕೂಡ ಹೋಟೆಲ್ ಆಡಳಿತ ಮಂಡಳಿ ಆದೇಶಿಸಿದೆ. ಹೋಟೆಲ್ ಅಧಿಕಾರಿಗಳು ಅತಿಥಿಗಳನ್ನು ಭೇಟಿ ಮಾಡಿಎಲ್ಲಾ ಬಾಕಿ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಈ ಕಾರಣಕ್ಕಾಗಿಯೇ ನ್ಯಾಯಾಲಯದ ಮೊರೆ ಹೋಗಿದ್ದು, ಎರಡೂ ಕಾರುಗಳನ್ನು ಶೀಘ್ರ ಹರಾಜು ಮಾಡಬೇಕು ಎಂದು ಒತ್ತಾಯಿಸಿದ್ದರು.

Article Published On: Wednesday, February 8, 2023, 18:15 [IST]
English summary
Failed to pay rs 22 lakh hotel bill citco to auction cars of 2 businessmen details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+