ರೈತನ ಮಗ ಕೋಟಿ, ಕೋಟಿ ಬೆಲೆಯ ಕಾರುಗಳ ಒಡೆಯ
ಭಾರತ ಕೃಷಿ ಪ್ರಧಾನ ದೇಶವೆಂದು ಖ್ಯಾತಿಗಳಿಸಿದೆ. ಇಲ್ಲೊಬ್ಬ ರೈತನ ಮಗ ಭಾರೀ ಉದ್ಯಮಿಯಾಗಿ ಬೆಳೆದು ಸಾವಿರಾರು ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿ, ಅನೇಕ ದುಬಾರಿ ಹಾಗೂ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ನಿಂದ ಹಿಡಿದು ಲ್ಯಾಂಡ್ ರೋವರ್ ರೇಂಜ್ ರೋವರ್ ವರೆಗೆ ದೊಡ್ಡ ಕಾರುಗಳ ಸಂಗ್ರಹವಿದೆ.
ನಾವಿಂದು ದುಬೈ ಮೂಲದ ಭಾರತೀಯ ಉದ್ಯಮಿ, ಆರ್‌ಪಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ರವಿ ಪಿಳ್ಳೈ ಬಗ್ಗೆ ತಿಳಿಸಲಿದ್ದೇವೆ. ಕೇರಳದ ಕೊಲ್ಲಂ ಜಿಲ್ಲೆಯ ಚವರದಲ್ಲಿ ಜನಿಸಿದ ಅವರು, ತಮ್ಮ ಕಾಲೇಜು ದಿನಗಳಲ್ಲಿಯೇ ವ್ಯವಹಾರ ಪ್ರಾರಂಭಿಸಿ, ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟು ಕೋಟಿ, ಕೋಟಿ ಹಣ ಗಳಿಸುತ್ತಾರೆ. ಸದ್ಯ, 3.5 ಬಿಲಿಯನ್ ಡಾಲರ್ ಸಂಪತ್ತಿನ ಮಾಲೀಕರಾಗಿದ್ದು, ಭಾರತ, ಕತಾರ್, ಬಹ್ರೇನ್ ಹಾಗೂ ಯುಎಇಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿದ್ದಾರೆ.

ರವಿ ಪಿಳ್ಳೈ ಕೂಡ ಇತರೆ ಪ್ರಖ್ಯಾತ ಉದ್ಯಮಿಗಳಂತೆ ಹಲವು ಐಷಾರಾಮಿ ಕಾರುಗಳ ಒಡೆಯರಾಗಿದ್ದು, ಅವುಗಳಲ್ಲಿ ಒಂದಷ್ಟು ಕಾರುಗಳು ಅವರ ಭಾರತದ ನಿವಾಸದಲ್ಲಿವೆ. ಅವರು, ದುಬಾರಿ ಬೆಲೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯ ಪಡೆದಿರುವ 'ರೋಲ್ಸ್ ರಾಯ್ಸ್ ಘೋಸ್ಟ್' ಕಾರನ್ನು 2011ರಲ್ಲಿ ಖರೀದಿಸಿದ್ದರು. ವಿಶೇಷವೆಂದರೆ, ಇದನ್ನು ಈಗಲೂ ಬಳಕೆ ಮಾಡುತ್ತಿದ್ದು, ಕೇರಳದ ಕೊಲ್ಲಂ ಪಟ್ಟಣದಲ್ಲಿ ಆಗಾಗ ಈ ಕಾರಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಸ್ತುತ, ರೋಲ್ಸ್ ರಾಯ್ಸ್ ಘೋಸ್ಟ್ ಬೆಲೆ ರೂ.6.95-7.95 ಕೋಟಿ ಇದೆ.
ದಕ್ಷಿಣ ಭಾರತದಲ್ಲಿಯೇ ಐಷಾರಾಮಿ 'ಮರ್ಸಿಡಿಸ್ ಮೇಬ್ಯಾಕ್ S600' ಕಾರನ್ನು ಮೊದಲು ವಿತರಣೆ ಪಡೆದ ಗ್ರಾಹಕನೆಂಬ ಖ್ಯಾತಿಗೆ ರವಿ ಪಿಳ್ಳೈ ಪಾತ್ರರಾಗಿದ್ದಾರೆ. ರೋಲ್ಸ್ ರಾಯ್ಸ್ ಘೋಸ್ಟ್ ಜೊತೆಗೆ ಈ ಮರ್ಸಿಡಿಸ್ ಕಾರನ್ನು ತಮ್ಮ ಸಂಚಾರಕ್ಕೆ ಉಪಯೋಗಿಸುತ್ತಿರುತ್ತಾರೆ. ಸದ್ಯ, ಮರ್ಸಿಡಿಸ್ ಕಂಪನಿ ಎಸ್ ಕ್ಲಾಸ್ ಮೇಬ್ಯಾಕ್ ಕಾರು ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಎಸ್580 ಹಾಗೂ ಎಸ್680. ಇವು ರೂ.2.57-3.32 ಕೋಟಿ ಆರಂಭಿಕ ಬೆಲೆಯನ್ನು ಹೊಂದಿವೆ.

ರವಿ ಪಿಳ್ಳೈ ಅವರ ಬಳಿಯಿರುವ ಮರ್ಸಿಡಿಸ್ ಮೇಬ್ಯಾಕ್ S600 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 6.0 ಲೀಟರ್ V12 ಪೆಟ್ರೋಲ್ ಎಂಜಿನ್ ಹೊಂದಿದ್ದು, 530 Bhp ಪವರ್ ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದ್ದು, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಇಂಟಿಗ್ರೇಟೆಡ್ ಪರ್ಫ್ಯೂಮ್ ಸಿಸ್ಟಮ್, ಆಕರ್ಷಕ ಸನ್‌ರೂಫ್ ಹೊಂದಿದೆ.
ಪ್ರತಿಯೊಬ್ಬ ಉದ್ಯಮಿಯೂ ಬಿಎಂಡಬ್ಲ್ಯೂ ಕಾರನ್ನು ಹೊಂದಿರುತ್ತಾರೆ. ಅದಕ್ಕೆ ರವಿ ಪಿಳ್ಳೈ ಅವರೇನೂ ಹೊರತಲ್ಲ. ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುವ ಬಿಎಂಡಬ್ಲ್ಯೂ 5 ಸೀರಿಯಸ್ ನ 520d ಕಾರಿನ ಮಾಲೀಕರಾಗಿದ್ದಾರೆ. ಇದು ಆಕರ್ಷಕ ಹೊರ ಹಾಗೂ ಒಳಭಾಗದ ವೈಶಿಷ್ಟ್ಯಗಳನ್ನು ಪಡೆದಿದ್ದು, ಪ್ರಸ್ತುತ, ರೂ.64.49 ಲಕ್ಷ ಆರಂಭಿಕ ಬೆಲೆ ಹೊಂದಿದೆ. 2015ರಲ್ಲಿ ರವಿ ಪಿಳ್ಳೈ, ತಮ್ಮ ಪುತ್ರಿಯ ವಿವಾಹದಲ್ಲಿ ಆಡಿ ಎ6 ಮ್ಯಾಟ್ರಿಕ್ ಕಾರನ್ನು ಬಳಕೆ ಮಾಡಿದ್ದರು.

ಇನ್ನು, ಮರ್ಸಿಡಿಸ್ ಮೇಬ್ಯಾಕ್ S500, ಲ್ಯಾಂಡ್ ರೋವರ್ ರೇಂಜ್ ರೋವರ್ ಸೇರಿದಂತೆ ದುಬಾರಿ ಬೆಲೆ ಹಾಗೂ ಐಷಾರಾಮಿ ಕಾರುಗಳು, ರವಿ ಪಿಳ್ಳೈ ಅವರ ಗ್ಯಾರೇಜ್‌ನಲ್ಲಿವೆ. ಅದೇನೇ ಆಗಲಿ ಸಾಮಾನ್ಯ ರೈತನ ಮಗ, ಓರ್ವ ಉದ್ಯಮಿಯಾಗಿ ಈ ಎತ್ತರಕ್ಕೆ ಬೆಳೆದಿರುವುದು ದೊಡ್ಡ ಸಾಧನೆಯೇ ಸರಿ. ಇಂತಹ ವಿಶೇಷತೆಗಳನ್ನು ಭಾರತ ಹೊರತುಪಡಿಸಿ, ಬೇರೆ ಯಾವ ದೇಶದಲ್ಲೂ ನೋಡಲು ಸಾದ್ಯವಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications