ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ 2023ರ ಟಾಟಾ ಹ್ಯಾರಿಯರ್
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಭಾರತದಲ್ಲಿ ತನ್ನ 2023ರ ಹ್ಯಾರಿಯರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ 2023ರ ಟಾಟಾ ಹ್ಯಾರಿಯರ್ (Tata harrier) ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೂಸ ಎಸ್‍ಯುವಿಯು ಹೊಸ ವೈಶಿಷ್ಟ್ಯಗಳು, ADAS ಮತ್ತು ನವೀಕರಿಸಿದ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ.
ADAS ತಂತ್ರಜ್ಞಾನ
ನವೀಕರಿಸಿದ 2023ರ ಟಾಟಾ ಹ್ಯಾರಿಯರ್ ಎಸ್‍ಯುವಿ ADAS ತಂತ್ರಜ್ಞಾನದೊಂದಿಗೆ ಬರುತ್ತದೆ, ಇದರಲ್ಲಿ ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಟ್ರಾಫಿಕ್ ಸೈನ್ ಗುರುತಿಸುವಿಕೆ, ಹೈ ಭೀಮ್ ಅಸಿಸ್ಟ್, ಲೇನ್ ಡಿಪರ್ಚರ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಮುಂದಕ್ಕೆ ಮತ್ತು ಹಿಂಭಾಗದ ಕೊಲಿಶಃಅನ್ ಅಲರ್ಟ್ ಅನ್ನು ಕೂಡ ಹೊಂದಿದೆ. ಈ ಸುರಕ್ಷತಾ ವೈಶಿಷ್ಟ್ಯಗಳ ಜೊತೆಗೆ ಕೆಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ಕೂಡ ಟಾಟಾ ಹ್ಯಾರಿಯರ್ ಎಸ್‍ಯುವಿಯಲ್ಲಿ ನೀಡಲಾಗಿದೆ.

ಫೀಚರ್ಸ್
2023ರ ಟಾಟಾ ಹ್ಯಾರಿಯರ್ ಎಸ್‌ಯುವಿಯಲ್ಲಿ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಸಿಸ್ಟಮ್, ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಹೊಸ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 200 ವಾಯ್ಸ್ ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯಲ್ಲಿ ಕಾಮೆಂಡ್ಸ್ (6 ಭಾಷೆಗಳು), ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕ, ಮೆಮೊರಿ ಕಾರ್ಯದೊಂದಿಗೆ 6-ವೇ ಪವರ್ ಹೊಂದಾಣಿಕೆ ಡ್ರೈವರ್ ಸೀಟ್‌ಗಳು ಮತ್ತು ಇನ್ನಷ್ಟು.ಫೀಚರ್ಸ್ ಗಳನ್ನು ನೀಡಿದೆ.
ಎಂಜಿನ್
ಈ ಹೊಸ 2023ರ ಟಾಟಾ ಹ್ಯಾರಿಯರ್ ಎಸ್‌ಯುವಿಯಲ್ಲಿ ಕಂಡುಬರುವ ಮತ್ತೊಂದು ದೊಡ್ಡ ಅಪ್‌ಗ್ರೇಡ್ ಹೊಸ ಡೀಸೆಲ್ ರೂಪದಲ್ಲಿ ಬರುತ್ತದೆ. ಈ ಹೊಸ ಪವರ್‌ಟ್ರೇನ್ ಅಸ್ತಿತ್ವದಲ್ಲಿರುವ 2.0-ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್‌ನ ನವೀಕರಿಸಿದ ಆವೃತ್ತಿಯಾಗಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ನವೀಕರಿಸಿದ ಎಂಜಿನ್ ಈಗ ಹೊಸ RDE ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.
ಗೇರ್‌ಬಾಕ್ಸ್
ಅಲ್ಲದೆ, ಗೇರ್‌ಬಾಕ್ಸ್ ಆಯ್ಕೆಗಳ ವಿಷಯದಲ್ಲಿ, 2023ರ ಟಾಟಾ ಹ್ಯಾರಿಯರ್ ಎಸ್‌ಯುವಿ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ. ಈ 2023ರ ಟಾಟಾ ಹ್ಯಾರಿಯರ್ ಎಸ್‌ಯುವಿ ಗ್ರಾಹಕರು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಡುವೆ ಆಯ್ಕೆ ಮಾಡಬಹುದು. ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಈ ಹೊಸಹ್ಯಾರಿಯರ್ ಎಸ್‌ಯುವಿಯಲ್ಲಿ ಆಲ್-ವೀಲ್-ಡ್ರೈವ್ ಅನ್ನು ನೀಡುವುದಿಲ್ಲ. 2023ರ ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು ಹತ್ತಿರದ ಯಾವುದೇ ಟಾಟಾ ಪ್ಯಾಸೆಂಜರ್ ಕಾರುಗಳ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು.
ಇದಲ್ಲದೆ, ಟಾಟಾ ಮೋಟಾರ್ಸ್ ಪ್ರಕಾರ, ಮುಂಬರುವ 2023ರ ಟಾಟಾ ಹ್ಯಾರಿಯರ್ 6 ಬಾಹ್ಯ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ, ಈ ಟಾಟಾ ಹ್ಯಾರಿಯರ್ ಎಸ್‍ಯುವಿಯು ಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಆರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಕ್ಯಾಲಿಪ್ಸೊ ರೆಡ್ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ, ಇದರಲ್ಲಿ ನಿಮ್ಮ ಮೆಚ್ಚಿನ ಆಯ್ಕೆಯ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಟಾಟಾ ಹ್ಯಾರಿಯರ್ ಮತ್ತಷ್ಟು ಕಲರ್ ಫುಲ್ ಆಗಿದೆ.
2023ರ ಟಾಟಾ ಹ್ಯಾರಿಯರ್ ಎಸ್‌ಯುವಿ ಬಿಡುಗಡೆಯೊಂದಿಗೆ, ಟಾಟಾ ಮೋಟಾರ್ಸ್ ಟೆಕ್-ಲೋಡೆಡ್ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತದೆ, ಇದಲ್ಲದೆ, ADAS ವೈಶಿಷ್ಟ್ಯದ ಪರಿಚಯವು ಎಸ್‍ಯುವಿಯ ಸುರಕ್ಷತೆಯನ್ನು ಸುಧಾರಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಕಾರುಗಳೊಂದಿಗೆ ಸ್ಪರ್ಧಿಸುವ ಪ್ರಮುಖ ವಾಹನ ತಯಾರಕರಲ್ಲಿ ಟಾಟಾ ಮೋಟಾರ್ಸ್ ಒಂದಾಗಿದೆ. ಸ್ವದೇಶಿ ಟಾಟಾ ಮೋಟಾರ್ಸ್ ಇತ್ತೀಚೆಗೆ 2023ರ ಜನವರಿ ತಿಂಗಳ ವಾಹನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ, ಟಾಟಾ ಮೋಟಾರ್ಸ್ ದೇಶದಲ್ಲಿ ಎರಡನೇ ಶ್ರೇಯಾಂಕಕ್ಕಾಗಿ ಅಗ್ರೇಸಿವ್ ಆಗಿ ಸ್ಪರ್ಧಿಸುತ್ತಿದೆ. 2023ರ ಜನವರಿ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 47,990 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು40,780 ಯುನಿಟ್‌ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಆದರೆ ಟಾಟಾ ಮೋಟಾರ್ಸ್ ಕಳೆದ ತಿಂಗಳ ಮಾರಾಟದಲ್ಲಿ ಎರಡನೇ ಸ್ಥಾನದಿಂದ ಕುಸಿದು ಮೂರನೇ ಸ್ಥಾನಕ್ಕೆ ಇಳಿದಿದೆ. ಕಳೆದ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ.


Click it and Unblock the Notifications