ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್‌‌ಟ್ರೊಜ್ iCNG ಕಾರಿನ ವಿಶೇಷತೆಗಳು...

ಭಾರತದಲ್ಲಿ ಸಿಎನ್‌ಜಿ ಪ್ರಯಾಣಿಕ ವಾಹನ ಜಾಗವನ್ನು ಪ್ರವೇಶಿಸಿದ ಜನಪ್ರಿಯ ಸ್ವದೇಶೀ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಈಗ ತನ್ನ ಬಂಡವಾಳವನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು 2021 ರಲ್ಲಿ Tiago ಮತ್ತು Tigor iCNG ಮಾದರಿಗಳ ಪರಿಚಯಿಸಿದ್ದರು. ಇದೀಗ ಸಿಎನ್‌ಜಿ ಸರಣಿಯಲ್ಲಿ ಆಲ್‌‌ಟ್ರೊಜ್ ಕಾರು ಕೂಡ ಸೇರಿಕೊಳ್ಳಲಿದೆ.

ಟಾಟಾದ ಇತರ ಸಿಎನ್‌ಜಿ ಮಾದರಿಗಳಂತೆ, ಸಿಎನ್‌ಜಿ ಆಲ್‌‌ಟ್ರೊಜ್ ಅದರ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಕೆಲವು ಸಣ್ಣ ನವೀಕರಣಗಳನ್ನು ಪಡೆಯುತ್ತದೆ. ಈ ಹೊಸ ಟಾಟಾ ಆಲ್‌‌ಟ್ರೊಜ್ ಸಿಎನ್‌ಜಿ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ, ಟಾಟಾ ಪಂಚ್ iCNG ಯಂತೆಯೇ, ಆಲ್‌‌ಟ್ರೊಜ್ iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ, ಎರಡು ಚಿಕ್ಕ ಸಿಎನ್‌ಜಿ ಹೆಚ್ಚಿನ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ.

ಟಾಟಾ ಆಲ್‌‌ಟ್ರೊಜ್ iCNG ಕಾರಿನ ವಿಶೇಷತೆಗಳು...

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಆಲ್‌‌ಟ್ರೊಜ್ ಸಿಎನ್‌ಜಿ ಕಾರನ್ನು ಅನಾವರಣಗೊಳಿಸಿದೆ. ಎಸ್‌ಯುವಿ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಸಿಎನ್‌ಜಿಗೆ ಬೇಡಿಕೆ ಕಂಡುಬರುತ್ತಿರುವುದರಿಂದ, ಟಾಟಾ ನೆಕ್ಸಾನ್ ಮತ್ತು ಆಲ್ಟ್ರೊಜ್‌ಗೆ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳಿಂದ ಟಾಟಾ ಕಾರುಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ದೇಶಿಯ ಮಾರುಕಟ್ಟೆಯಲ್ಲಿ ಕಾರು ತಯಾರಕರು ಹೊಸ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರೆಸಿದ್ದಾರೆ.

ಉದಾಹರಣೆಗೆ, ಮಾರುತಿ ಇತ್ತೀಚೆಗೆ ಸ್ವಿಫ್ಟ್ ಸಿಎನ್‌ಜಿಯನ್ನು ಬಿಡುಗಡೆಗೊಳಿಸಿತ್ತು. ಜುಲೈನಲ್ಲಿ, ಹ್ಯುಂಡೈ ಐ10 ನಿಯೋಸ್ ಅಸ್ಟಾ ರೂಪಾಂತರಕ್ಕಾಗಿ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿತು. ಟಾಟಾ ಮೋಟಾರ್ಸ್‌ನ ಮಾದರಿಗಳನ್ನು ಆಯ್ಕೆಯು ಪ್ರಸ್ತುತ ಟಿಯಾಗೋ ಮತ್ತು ಟಿಗೊರ್ ನೊಂದಿಗೆ ಲಭ್ಯವಿದೆ. ಇವುಗಳನ್ನು ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಟಾಟಾ ಆಲ್‌‌ಟ್ರೊಜ್ ಸಿಎನ್‌ಜಿ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಸ್ಟ್ಯಾಂಡರ್ಡ್ Altroz ಕಾರಿಗೆ ಹೋಲಿಸಿದಾಗ ಕ್ಯಾಬಿನ್ ನಲ್ಲಿ ಕೆಲವು ನವೀಕರಣಗಳನ್ನು ಪಡೆಯುತ್ತದೆ.

ಹೊಸ ತಂತ್ರಜ್ಞಾನ
ಟಾಟಾ ಆಲ್‌‌ಟ್ರೊಜ್ ವಾಯ್ಸ್-ಕಂಟ್ರೋಲ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ ಎಂದು ಟಾಟಾ ಹೇಳುತ್ತದೆ. ಚೊಚ್ಚಲ ಪಂಚ್ iCNG ಯಂತೆಯೇ, Altroz iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ, ಎರಡು ಚಿಕ್ಕ CNG ಸಿಲಿಂಡರ್‌ಗಳು ಬೂಟ್ ಫ್ಲೋರ್‌ನ ಕೆಳಗೆ ಇದೆ. ಈ ಮುಂಬರುವ ಹೊಸ ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯು ಟಾಟಾ ಟಿಯಾಗೊ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮತ್ತು ಟಾಟಾ ಟಿಗೊರ್ ಸಿಎನ್‌ಜಿ ಕಾಂಪ್ಯಾಕ್ಟ್ ಸೆಡಾನ್‌ಗೆ ಪವರ್ ನೀಡುವ ಅದೇ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ.

ಎಂಜಿನ್ ಆಯ್ಕೆ
ಇನ್ನು ಎರಡೂ ಕಾರುಗಳು ಒಂದೇ ರೀತಿಯ ಎಂಜಿನ್ ಆಯ್ಕೆಗಳನ್ನು ಹಂಚಿಕೊಳ್ಳುತ್ತವೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಮೋಟಾರ್ ಆಗಿರುತ್ತದೆ. ಎರಡೂ ಕಾರುಗಳಲ್ಲಿ ಪವರ್ ಮತ್ತು ಟಾರ್ಕ್ ಉತ್ಪಾದನೆಯು ವಿಭಿನ್ನವಾಗಿದೆ. ಸಿಎನ್‌ಜಿ ಚಾಲನೆಯಲ್ಲಿರುವಾಗ, ಆಲ್ಟ್ರೊಜ್‌ನ ಪವರ್ ಮತ್ತು ಟಾರ್ಕ್ ಉತ್ಪಾದನೆಯು ಸುಮಾರು 10-15 ಬಿಹೆಚ್‍ಪಿಗಳಷ್ಟು ಇಳಿಯುವ ಸಾಧ್ಯತೆಯಿದೆ. ಗೇರ್ ಬಾಕ್ಸ್ ಆಯ್ಕೆಯು ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಸೇರಿವೆ. ಸಿಎನ್‌ಜಿ ರೂಪಾಂತರಗಳನ್ನು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುವುದು.

ಇನ್ನು ಟಾಟಾ ಟಿಯಾಗೊ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿಯಲ್ಲಿನ ಈ ಎಂಜಿನ್ ಸ್ಟ್ಯಾಂಡರ್ಡ್ ರೂಪದಲ್ಲಿ 84.82 ಬಿಹೆಚ್‌ಪಿ ಪವರ್ ಶಕ್ತಿ ಮತ್ತು 113 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸಿಎನ್‌ಜಿ ಇಂಧನದೊಂದಿಗೆ, ಈ ಎಂಜಿನ್ 73 ಬಿಹೆಚ್‍ಪಿ ಪವರ್ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಲ್ಲದೆ, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಈ ಟಾಟಾ ಆಲ್‌‌ಟ್ರೊಜ್ ಸಿಎನ್‌ಜಿ ಮಾದರಿಗಾಗಿ ಫೀಚರ್ಸ್ ಆಯಾ ಪೆಟ್ರೋಲ್ ರೂಪಾಂತರಗಳಂತೆಯೇ ಇರುತ್ತದೆ. ಟಾಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇನ್ನು ಟಾಟಾ ಆಲ್‌‌ಟ್ರೊಜ್ 'ಐ-ಟರ್ಬೊ' ರೂಪಾಂತರವನ್ನು ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಮತ್ತಷ್ಟು ಬೂಸ್ಟ್ ಮಾಡಿತು. ಅದೇ ರೀತಿ ಸಿಎನ್‌ಜಿ ಮಾದರಿಯು ಉತ್ತಮವಾಗಿ ಮಾರಾಟವಾಗಬಹುದು. ವಿಶೇಷವೆಂದರೆ ಭಾರತದಲ್ಲಿ ವಾಹನ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಅರಿವಿನೊಂದಿಗೆ ಟಾಟಾ ಕಾರುಗಳು ಖರೀದಿದಾರರಲ್ಲಿ ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ ಎಂದು ಹೇಳಬಹುದು.

Most Read Articles

Kannada
English summary
Find here some top highlights of new tata altroz icng in kannada
Story first published: Sunday, February 5, 2023, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X