ಗ್ರಾಹಕರು ಕಾತರದಿಂದ ಕಾಯುತ್ತಿರುವ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತೀಯ ಮಾರುಕಟ್ಟೆಯಲ್ಲಿ 2023ರ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

ಈ ಹೊಸ ಎಂಪಿವಿಯನ್ನು ಖರೀದಿಸಲು ಬಯಸುವ ಆಸಕ್ತ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇತ್ತೀಚೆಗೆ ಬಿಡುಗಡೆಗೊಂಡ ಇನೋವಾ ಹೈಕ್ರಾಸ್ ಜೊತೆಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮಾರಾಟ ಮಾಡುವುದನ್ನು ಮುಂದುವರಿಸುತ್ತಾರೆ. ನವೀಕರಿಸಿದ ಇನೋವಾ ಕ್ರಿಸ್ಟಾ ಬೆಲೆಯನ್ನು ಇದೇ ತಿಂಗಳಿನಲ್ಲಿ ಬಹಿರಂಗಪಡಿಸುವ ಸಾಧ್ಯತೆಗಳಿದೆ. ಇನ್ನು ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿತರಣೆಯು ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆಯಲಿದೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು.

ಕಾಯುತ್ತಿರುವ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿಶೇಷತೆಗಳು

ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದೇ ಕಾರಣದಿಂದ ಟೊಯೊಟಾ ಕಂಪನಿಯು ಡೀಸೆಲ್ ಎಂಜಿನ್ ನೊಂದಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮರಳಿ ತಂದಿದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಲುಕ್ ಹೆಚ್ಚಾಗಿ ಬದಲಾಗದೆ ಉಳಿದಿದೆ, ಈ ಹೊಸ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಎಂಜಿನ್: 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ. ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಹೊಸ 2023 ಟೊಯೊಟಾ ಇನೋವಾ ಕ್ರಿಸ್ಟಾ ಕಾರು 7 ಮತ್ತು 8 ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ. ಇನ್ನು ಈ ಕ್ರಿಸ್ಟಾ ಕಾರು G, GX, VX ಮತ್ತು ZX ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಎಲ್ಲಾ ರೂಪಾಂತರಗಳ ಅನುಗುಣವಾಗಿ ವಿಭಿನ್ನ ವೈಶಿಷ್ಟ್ಯದ ವಿವರಗಳನ್ನು ಬಹಿರಂಗವಾಗಿದೆ.

ರೂಪಾಂತರಗಳು ಮತ್ತು ಫೀಚರ್ಸ್: ಈ ಎಂಪಿವಿಯ G ಎಂಬ ಮೂಲ ರೂಪಾಂತರವು 7 ಮತ್ತು 8-ಸೀಟುಗಳ ವಿನ್ಯಾಸದಲ್ಲಿ ಮುಂಭಾಗದ ಪ್ರತ್ಯೇಕ ಸೀಟುಗಳು ಮತ್ತು ಸ್ಲೈಡ್ ಮತ್ತು ರಿಕ್ಲೈನ್ ​​ಕಾರ್ಯದೊಂದಿಗೆ ಬರುತ್ತದೆ. ಇದು ಬ್ಲ್ಯಾಕ್ ಲೈನ್ ನೊಂದಿಗೆ ಇನ್‌ಸ್ಟ್ರುಮೆಂಟ್ ಪೇನ್, ಡ್ರೈವರ್ ಮಾಹಿತಿಯೊಂದಿಗೆ ಡಾಟ್ ಟೈಪ್ MID, ಜ್ಯಾಕ್-ನೈಫ್ ಕೀಯೊಂದಿಗೆ ವೈರ್‌ಲೆಸ್ ಡೋರ್ ಲಾಕ್, 4 ಸ್ಪೀಕರ್‌ಗಳು, Apple CarPlay ಜೊತೆಗೆ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಡಿಯೋ ಡಿಸ್ಪ್ಲೇ, ಫ್ಲಿಕ್ & ಡ್ರ್ಯಾಗ್ ಫಂಕ್ಷನ್ ಮತ್ತು ಬ್ಲೂಟೂತ್ ಅನ್ನು ಹೊಂದಿದೆ.

ಇನ್ನು ಕ್ರಿಸ್ಟಾ ಕಾರಿನ VX ರೂಪಾಂತರದಲ್ಲಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್, MID ಮುಂಭಾಗದ ಕ್ಲಿಯರೆನ್ಸ್ ಸೋನಾರ್, Isofix X2 ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಟೆಥರ್ ಆಂಕರ್, ಸೈರನ್‌ನೊಂದಿಗೆ ಆಂಟಿ-ಥೆಫ್ಟ್ ಸಿಸ್ಟಮ್ ಇಮೊಬಿಲೈಸರ್, ಅಲ್ಟ್ರಾಸಾನಿಕ್ ಮತ್ತು ಗ್ಲಾಸ್ ಬ್ರೇಕ್ ಸೆನ್ಸಾರ್, ಡ್ರೈವರ್;ಗೆ ಮಾಹಿತಿ ನೀಡುವ TFT MID ಯುನಿಟ್ ಅನ್ನು ಹೊಂದಿದೆ.

ಇದರೊಂದಿಗೆ ಸಿಲ್ವರ್ ಮತ್ತು ವುಡ್ ಫಿನಿಶ್‌ನೊಂದಿಗೆ ಯುರೆಥೇನ್‌ನೊಂದಿಗೆ ಸ್ಟೀರಿಂಗ್, ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಎಲ್ಇಡಿ ಕ್ಲಿಯರೆನ್ಸ್ ಲ್ಯಾಂಪ್ ಮತ್ತು ಬ್ಲ್ಯಾಕ್ ಮತ್ತು ಕ್ರೋಮ್ ಗ್ರಿಲ್ನೊಂದಿಗೆ ಬರುತ್ತದೆ. ಈ ಹೊಸ ಇನೋವಾ ಕ್ರಿಸ್ಟಾ ಕಾರಿನ ZX ರೂಪಾಂತರದಲ್ಲಿ 7-ಸೀಟುಗಳ ಲೇಔಟ್‌ನಲ್ಲಿ 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹೀಟ್ ರಿಜೆಕ್ಟಿಂಗ್ ಫ್ರಂಟ್ ಮತ್ತು ಸೈಡ್ ಗ್ಲಾಸ್, 2 ಎನ್‌ಡಿ ರೋ ಆರ್ಮ್‌ರೆಸ್ಟ್, 'ಕ್ರಿಸ್ಟಾ' ಚಿಹ್ನೆಯೊಂದಿಗೆ ಸಜ್ಜುಗೊಳಿಸಲಾದ ಬ್ಲ್ಯಾಕ್ ಅಥವಾ ಕ್ಯಾಮೆಲ್ ಟ್ಯಾನ್ ಲೆದರ್ ಸೀಟ್‌ಗಳಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ.

Article Published On: Wednesday, February 22, 2023, 19:22 [IST]
English summary
Find here some top new toyota innova crysta details in kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+