ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮೊದಲ ಸ್ಕೋಡಾ ಎಲೆಕ್ಟ್ರಿಕ್ SUV: 2024 ರಲ್ಲಿ ಬಿಡುಗಡೆಗೆ
ಜನಪ್ರಿಯ ಕಾರು ತಯಾರಕರಾದ ಸ್ಕೋಡಾ ಕಂಪನಿ ಭಾರತದಲ್ಲಿ ಕಳೆದ ಕೆಲ ತಿಂಗಳುಗಳಿಂದ ಎನ್ಯಾಕ್ ಎಲೆಕ್ಟ್ರಿಕ್ SUV ಅನ್ನು ಪರೀಕ್ಷಿಸುತ್ತಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2024 ರ ಮಧ್ಯದಲ್ಲಿ ಬಿಡುಗಡೆ ಮಾಡಲು ನೋಡುತ್ತಿದ್ದಾರೆ. ಇದೀಗ ಭಾರತದ ರಸ್ತೆಗಳಲ್ಲಿ ಈ ಕಾರನ್ನು ಟೆಸ್ಟಿಂಗ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಮೊದಲಿಗೆ ಸ್ಕೋಡಾ ಎನ್ಯಾಕ್ ಸಂಪೂರ್ಣವಾಗಿ ನಿರ್ಮಿಸಲಾದ ಘಟಕವಾಗಿ ಭಾರತಕ್ಕೆ ಬರಲಿದೆ, ಅಂದರೆ ಇದರ ಬೆಲೆ ಹೆಚ್ಚು. ಆದರೂ ಬೇಡಿಕೆ ಹೆಚ್ಚಿದ್ದರೆ ಸಂಪೂರ್ಣವಾಗಿ ನಾಕ್ಡ್ ಡೌನ್ ಅಸೆಂಬ್ಲಿಯಾಗಿ ಪರಿಗಣಿಸಬಹುದು ಎಂದು ಸ್ಕೋಡಾ ದೃಢಪಡಿಸಿದೆ. ಇದರರ್ಥ ಬ್ರ್ಯಾಂಡ್ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಎನ್ಯಾಕ್‌ನೊಂದಿಗೆ ಪರೀಕ್ಷಿಸಲಿದೆ, ನಂತರವಷ್ಟೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಅದರ ಭವಿಷ್ಯದ ಯೋಜನೆಗಳಲ್ಲಿ ಕೆಲಸ ಮಾಡಲಿದೆ.

ಸ್ಕೋಡಾ ಎನ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐಯೊನಿಕ್ 5 ಮತ್ತು ಕಿಯಾ ಇವಿ6 ವಿರುದ್ಧ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಎನ್ಯಾಕ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ MEB ಪ್ಲಾಟ್‌ಫಾರ್ಮ್‌ನಿಂದ ನಿರ್ಮಾಣವಾಗಲಿದೆ. ಇದು ಮೀಸಲಾದ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಆಗಿದೆ. ಅನೇಕ ತಯಾರಕರು ಈಗ ಇದೇ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ.
ಏಕೆಂದರೆ ಬ್ಯಾಟರಿ ಪ್ಯಾಕ್ ನೆಲದ ಹಲಗೆಯಾಗಿ ಕಾರ್ಯನಿರ್ವಹಿಸುತ್ತದೆ, ಈ ಮೂಲಕ ಚಕ್ರಗಳನ್ನು ಮೂಲೆಗಳಲ್ಲಿ ಇರಿಸುವ ಮೂಲಕ ಆಂತರಿಕ ಜಾಗವನ್ನು ಗರಿಷ್ಠಗೊಳಿಸಬಹುದು. ಇನ್ನು ಸ್ಕೋಡಾದ ಪ್ರಸ್ತುತ ಪ್ರಮುಖವಾದ ಕಾರದ ಕೊಡಿಯಾಕ್‌ಗಿಂತ ಎನ್ಯಾಕ್ ಸ್ವಲ್ಪ ಚಿಕ್ಕದಾಗಿರುತ್ತದೆ. ಕೊಡಿಯಾಕ್ ಮೂರು ಸಾಲುಗಳೊಂದಿಗೆ ಬಂದರೆ, ಎನ್ಯಾಕ್ ಕಟ್ಟುನಿಟ್ಟಾಗಿ ಎರಡು ಸಾಲುಗಳ ವಾಹನವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಎನ್ಯಾಕ್ ಅನ್ನು ಐದು ಆವೃತ್ತಿಗಳಲ್ಲಿ ನೀಡಲಾಗುತ್ತದೆ, ಭಾರತವು ಎನ್ಯಾಕ್ 80 ಅನ್ನು ಪಡೆಯುವ ನಿರೀಕ್ಷೆಯಿದೆ. ಇದು 77 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಹಾಗೆಯೇ WLTP ಕ್ಲೈಮ್ ಮಾಡಿದ 500 ಕಿ.ಮೀ ರೇಂಜ್ ನೀಡುತ್ತದೆ. ಇದು ಹಿಂದಿನ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸುತ್ತದೆ.
ಆದ್ದರಿಂದ ಇದು ರಿಯರ್-ವೀಲ್ ಡ್ರೈವ್ ವಾಹನವಾಗಿದೆ. ಗರಿಷ್ಠ ಪವರ್ ಔಟ್‌ಪುಟ್ ಅನ್ನು 200 bhp ನಲ್ಲಿ ರೇಟ್ ಮಾಡಲಾಗಿದೆ. ಗರಿಷ್ಠ ಟಾರ್ಕ್ ಉತ್ಪಾದನೆಯನ್ನು 310 Nm ನಲ್ಲಿ ರೇಟ್ ಮಾಡಲಾಗಿದೆ. ಎನ್ಯಾಕ್ 80, 8.5 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಎಂದು ಮೂಲಗಳು ಹೇಳುತ್ತಿವೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಬಹುತೇಕ ಎಲ್ಲಾ ವಾಹನ ತಯಾರಕರು ತಮ್ಮ ಎಲೆಕ್ಟ್ರಿಕ್ ಮಾದರಿಗಳನ್ನು ಈಗಾಗಲೇ ಭಾರತೀಯರಿಗೆ ಪರಿಚಯಿಸಿದ್ದಾರೆ. ದೇಶೀಯ ಕಂಪನಿಗಳಾದ ಟಾಟಾ ಹಾಗೂ ಮಹೀಂದ್ರಾ ಕೂಡ ಇವಿ ಕಾರುಗಳನ್ನು ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಮಾರುತಿ ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2024 ದ್ವಿತಿಯಾರ್ಧದಲ್ಲಿ ಬಿಡುಗಡೆ ಮಾಡಲಿದೆ.
ಇನ್ನು ಸ್ಕೋಡಾ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದೆ. ಇದನ್ನು ಕೂಡ ಮೇಲೆ ತಿಳಿಸಿದಂತೆ ಮುಂದಿನ ವರ್ಷ ದ್ವಿತಿಯಾರ್ಧದಲ್ಲಿ ಪರಿಚಯಿಸಲಿದೆ. ಈಗಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಎಸ್‌ಯುವಿಯನ್ನು ಬಿಡುಗಡೆ ಮಾಡಲು ನೋಡುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








