ಮಾರಾಟದಲ್ಲಿ ಸರಿಸಾಟಿ ಇಲ್ಲದೇ ಮುನ್ನುಗುತ್ತಿರುವ ಟೊಯೊಟಾ ಫಾರ್ಚೂನರ್
ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ವರ್ಷದ ಮೊದಲ ತಿಂಗಳಲ್ಲಿ ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಮತ್ತೊಮ್ಮೆ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಟೊಯೊಟಾ ತನ್ನ ಫಾರ್ಚೂನರ್ ಎಸ್‍ಯುವಿಯನ್ನು ನವೀಕರಿಸಿ ಹೊಸ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿತು. ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ. ಏಳು-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಅನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ.

ಕಳೆದ ತಿಂಗಳು ಟೊಯೊಟಾ ಫಾರ್ಚುನರ್ ಮಾದರಿಯ 3,698 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ 811 ಫಾರ್ಚುನರ್ ಮಾದರಿಯ ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.356 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.ವರ್ಷಗಳಲ್ಲಿ ಬೆಲೆಗಳಲ್ಲಿ ಹೆಚ್ಚಳದ ಹೊರತಾಗಿಯೂ ಫಾರ್ಚುನರ್ ತನ್ನ ವಿಭಾಗದಲ್ಲಿ ಪರುಪಾತ್ಯ ಸಾಧಿಸಿದೆ. ಈ ಟೊಯೊಟಾ ಫಾರ್ಚೂನರ್ ಮಾದರಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ.
2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮುಂದಿನ ಜನರೇಷನ್ ಫಾರ್ಚುನರ್ ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದು iMV ಲ್ಯಾಡರ್ ಫ್ರೇಮ್ ಚಾಸಿಸ್ ಆಧಾರವಾಗಿರಬಹುದು.
ಎಂಜಿ ಗ್ಲೋಸ್ಟರ್
2023ರ ಜನವರಿ ತಿಂಗಳಿನಲ್ಲಿ ಎಂಜಿ ಗ್ಲೋಸ್ಟರ್ ಮಾದರಿಯ 244 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಎಂಜಿ ಗ್ಲೋಸ್ಟರ್ ಮಾದರಿಯ 143 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.71 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಈ ಎಂಜಿ ಗ್ಲೊಸ್ಟರ್ ಎಸ್‌ಯುವಿಯು ಸೂಪರ್, ಶಾರ್ಪ್ ಮತ್ತು ಸ್ಯಾವಿ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಸ್ಯಾವಿ ರೂಪಾಂತರವು 6 ಮತ್ತು 7-ಸೀಟ್ ಲೇಔಟ್‌ಗಳಲ್ಲಿ 4X2 ಮತ್ತು 4×4 ಡ್ರೈವ್‌ಟ್ರೇನ್‌ಗಳೊಂದಿಗೆ ನೀಡಲಾಗುತ್ತದೆ,
ಈ ಎಂಜಿ ಗ್ಲೊಸ್ಟರ್ ಅನ್ನು ಎರಡು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇವುಗಳು 2.0-ಲೀಟರ್, 4-ಸಿಲಿಂಡರ್ ಟರ್ಬೊ ಮತ್ತು 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಗಳಾಗಿವೆ. ಇದರಲ್ಲಿ 2.0-ಲೀಟರ್ ಎಂಜಿನ್ 163 ಬಿಹೆಚ್‍ಪಿ ಪವರ್ ಮತ್ತು 375 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ 218 ಬಿಹೆಚ್‍ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀಪ್ ಮೆರಿಡಿಯನ್
ಜೀಪ್ ಕಂಪಾಸ್ ಎಸ್‌ಯುವಿ ಆಧಾರಿತ 7-ಸೀಟರ್ ಆವೃತ್ತಿಯಾಗಿದೆ. 2023ರ ಜನವರಿ ತಿಂಗಳಿನಲ್ಲಿ ಜೀಪ್ ಮೆರಿಡಿಯನ್ ಮಾದರಿಯ 200 ಯುನಿಟ್‌ಗಳ ಮಾರಾಟವಾಗಿ ಮೂರನೇ ಸ್ಥಾನದಲ್ಲಿದೆ. ಮೆರಿಡಾನ್ ಎಸ್‌ಯುವಿಯನ್ನು ಕಂಪಾಸ್ ಎಸ್‌ಯುವಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡಿದ್ದಾರೆ. ಜೀಪ್ ಮೆರಿಡಿಯನ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.
ಸ್ಕೋಡಾ ಕೊಡಿಯಾಕ್
2023ರ ಜನವರಿ ತಿಂಗಳಿನಲ್ಲಿ ಸ್ಕೋಡಾ ಕೊಡಿಯಾಕ್ ಮಾದರಿಯ 196 ಯುನಿಟ್ ಮಾರಾಟದೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷದ ಜನವರಿ ತಿಂಗಳಿನಲ್ಲಿ 113 ಯುನಿಟ್ ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.73 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಈ 7-ಸೀಟುಗಳ ಈ ಎಸ್‍ಯುವಿಯ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಘಟಕವಾಗಿ ನೀಡಲಾಗುತ್ತದೆ ಮತ್ತು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾದ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗಿದೆ.


Click it and Unblock the Notifications