Tesla: ಭಾರತದಲ್ಲಿ ಬರೀ ಟೆಸ್ಲಾಗೆ ಯಾವುದೇ ಸ್ಪೆಷಲ್ ಟ್ರೀಟ್‌ಮೆಂಟ್ ಇಲ್ಲ: ಭಾರತ ಸರ್ಕಾರ ಹೀಗೆ ಹೇಳಿದ್ದು ಯಾಕೆ?
ಕಳೆದ ಕೆಲ ವಾರಗಳ ಹಿಂದಷ್ಟೇ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಪ್ರವಾಸದಲ್ಲಿದ್ದಾಗ ದೈತ್ಯ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪ್ರಧಾನಿಯನ್ನು ಭೇಟಿಯಾಗಿದ್ದರು. ನಂತರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಸ್ಕ್ ಭಾರತದಲ್ಲಿ ಟೆಸ್ಲಾ ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಎಲಾನ್ ಮಸ್ಕ್ ಅವರ ಹೇಳಿಕೆಯಲ್ಲಿ ಟೆಸ್ಲಾ ಭಾರತಕ್ಕೆ ಅತಿ ಶೀಘ್ರದಲ್ಲಿ ಕಾಲಿಡಲಿರುವ ಸುಳಿವನ್ನು ಅವರು ನೀಡಿದ್ದರು. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಬಹುದೊಡ್ಡ ಕ್ರಾಂತಿ ನಡೆಯಿದೆ ಎಂದು ಹಲವು ಆಟೋ ಮೊಬೈಲ್ ಪಂಡಿತರು ಭವಿಷ್ಯವನ್ನು ನಿಡಿದಿದ್ದು, ಇದಕ್ಕಾಗಿ ಇತರ ಎಲ್ಲಾ ಕಾರು ತಯಾರಿಕಾ ಕಂಪನಿಗಳು ಸಹ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದರು.

ಇದೀಗ ಭಾರತ ಸರ್ಕಾರ ಸಹ ಈ ಟೆಸ್ಲಾದ (Tesla) ಭಾರತದ ಆಗಮನದ ಕುರಿತಾಗ ವಿಷಯಕ್ಕೆ ನೀಡಿರುವ ಪ್ರತಿಕ್ರಿಯೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೌದು, ಈ ಬಗ್ಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆಯಲ್ಲಿ ಟೆಸ್ಲಾ ಭಾರತಕ್ಕೆ ಆಗಮಿಸಿದರೆ ಅದಕ್ಕೆ ಭಾರತದಲ್ಲಿ ಯಾವುದೇ ರೀತಿಯ ಸ್ಪೆಷಲ್ ಪರಿಗಣನೆ ಸಿಗದು ಎಂದು ಹೇಳಿದೆ.
ಈ ಮೂಲಕ ಎಲ್ಲರ ಗಮನವೂ ಟೆಸ್ಲಾ ಮೇಲಿದ್ದು ಈ ಕುರಿತಾಗಿ ಅದು ಏನಾದರೂ ಪ್ರತಿಕ್ರಿಯೆ ನೀಡುತ್ತದೆಯೋ ಏನೋ ಎಂದು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಭಾರತದ ಸರ್ಕಾರವು ಕಳೆದ ತಿಂಗಳು ಟೆಸ್ಲಾದ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದ್ದು ತಮ್ಮ ಕಂಪನಿಯನ್ನು ಇಲ್ಲಿ ಸ್ಥಾಪಿಸುವ ಕುರಿತು ಚರ್ಚೆಗಳನ್ನು ನಡೆಸಿದ್ದಾರೆ.

ಅಮೇರಿಕಾದ ಈ ಬೃಹತ್ ಇವಿ ಕಂಪನಿಯು ಅಲ್ಲಿಂದ ಭಾರತಕ್ಕೆ ಕಡಿಮೆ ಟ್ಯಾಕ್ಸ್‌ನಲ್ಲಿ ಕಾರುಗಳನ್ನು ಆಮದು ಮಾಡಿಕೊಳ್ಳಲು ಸ್ಪೆಷಲ್ ಪಾಲಿಸಿಗಳನ್ನು ಭಾರತ ಸರ್ಕಾರ ಕಡೆಯಿಂದ ಎದುರು ನೋಡುತ್ತಿದ್ದು, ಇದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಮಾತ್ರವಲ್ಲದೆ ಎಲ್ಲಾ ಕಂಪನಿಗಳು ಪಾವತ್ತಿಸುವಷ್ಟೇ ಟ್ಯಾಕ್ಸ್ ಅನ್ನು ಟೆಸ್ಲಾಗೂ ವಿಧಿಸಿಲಿದೆ.
ಆಮದು ಟ್ಯಾಕ್ಸ್ ಅನ್ನು ಕಡಿಮೆ ಮಾಡುವ ಬದಲು ಟೆಸ್ಲಾಗೆ ಭಾರತದಲ್ಲೇ ಕಾರುಗಳ ಉತ್ಪಾದನೆ ಮಾಡಲು ಅವಕಾಶ ಮಾಡಿಕೊಡುವ ಎಲ್ಲಾ ಭರವಸೆಗಳನ್ನು ಭಾರತದ ಸರ್ಕಾರ ನೀಡಿದೆ. ಇದರಿಂದ ಟೆಸ್ಲಾವು ಕಡಿಮೆ ಟ್ಯಾಕ್ಸ್‌ನ ಎಲ್ಲಾ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಾವು ಟೆಸ್ಲಾ ಬಳಿ ನಮ್ಮ ಪಾಲಿಸಿಗಳನ್ನು ತಿಳಿಸಿದ್ದು, ಇಲ್ಲಿ ಕಾರು ತಯಾರಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಭರವಸೆಗಳನ್ನು ನಾವು ನೀಡಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ಪಾಲಿಸಿಗಳು ಸಮವಾಗಿರುತ್ತವೆ. ಟೆಸ್ಲಾ ಆದಷ್ಟು ಬೇಗ ಭಾರತಕ್ಕೆ ಕಾಲಿಡಲಿದೆ ಎಂದು ನಾವು ಸಹ ಎದುರು ನೋಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








