ಬೈಕ್‌ನಂತೆ ಮೈಲೇಜ್, ಗರಿಷ್ಠ ಸುರಕ್ಷತೆಯ ಹ್ಯುಂಡೈ ಕಾರಿಗೆ ಅಂಬಾಸಿಡರ್ ಟೀಂ ಇಂಡಿಯಾ ಭವಿಷ್ಯದ ನಾಯಕ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದಕ್ಕಾಗಿ ಹ್ಯುಂಡೈ ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲಿದೆ. ಇದೀಗ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.

ಭಾರತದಲ್ಲಿ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಬಿಡುಗಡೆಗೆ ಮುಂಚಿತವಾಗಿ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಕ್ರಿಕೆಟ್ ಐಕಾನ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಎಕ್ಸ್‌ಟರ್ ಎಸ್‌ಯುವಿಯ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಅಂಬಾಸಿಡರ್ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದೆ. ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ಟಾಟಾ ಪಂಚ್ ಮಾದರಿಗೆ ಪೈಪೋಟಿ ನೀಡುತ್ತದೆ.

Hardik Pandya

ಹ್ಯುಂಡೈ ಎಕ್ಸ್‌ಟರ್‌ನ ಈ ಸಾಂಕೇತಿಕ ಚಿತ್ರಣವನ್ನು ಸಾರಲು, ಕ್ರಿಕೆಟ್ ಕ್ರೀಡೆಯ ಇತ್ತೀಚಿನ ಇತಿಹಾಸದಲ್ಲಿ ಭಾರತದ ಪ್ರಕಾಶಮಾನವಾದ ತಾರೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಬೇರೆ ಯಾರನ್ನೂ ನಾವು ಯೋಚಿಸುವುದಿಲ್ಲ ಎಂದು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಹೇಳಿದರು. ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯನ್ನು ಖರೀದಿಸಲು ಬುಕ್ಕಿಂಗ್ ಪ್ರಾರಂಭವಾಗಿದೆ.

ಕಾರು ಖರೀದಿಸಲು ಬಯಸುವ ಗ್ರಾಹಕರು 11,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಹೊಸ ಮಾದರಿಯನ್ನು ಬುಕ್ ಮಾಡಬಹುದು. ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಮೊದಲ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ನೊಂದಿಗೆ ಬರಲಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಸಿಗ್ನೆಚರ್ ಸ್ಟೈಲ್ ಒಳಗೊಂಡಿದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಸಿಗ್ನೆಚರ್ ಸ್ಟೈಲ್ ಒಳಗೊಂಡಿದೆ. ಟಾಪ್ ರೂಪಾಂತರಗಳು ಚೌಕಾಕಾರದ ಹೆಡ್‌ಲೈಟ್ ಹೌಸಿಂಗ್‌ನಲ್ಲಿ ಸುತ್ತುವರಿದ ರೌಂಡ್ ಪ್ರೊಜೆಕ್ಟರ್ ಹೆಡ್‌ಲೈಟ್ ಪಡೆಯುತ್ತವೆ. ಇನ್ನು ಹ್ಯುಂಡೈ ವೆನ್ಯೂ ಕಾರಿನ ರೀತಿಯ, ಹೆಡ್‌ಲೈಟ್‌ಗಳು ಅದರ ಎಲ್‌ಇಡಿ ಡಿಆರ್‌ಎಲ್‌ಗಳ ಕೆಳಗೆ ಇವೆ. ಅದರ ಕ್ಲಾಮ್‌ಶೆಲ್ ಬಾನೆಟ್‌ನ ಕೆಳಗೆ ನಯವಾದ ಬ್ಲ್ಯಾಕ್ ಅಂಶವಿದೆ ಅದು ಚೆನ್ನಾಗಿ ಕಾಣುತ್ತದೆ.

ಇನ್ನು ಈ ಎಸ್‍ಯುವಿಯ ಅಲಾಯ್ ವ್ಹೀಲ್ ಆಕರ್ಷಕವಾಗಿದೆ. ಇದರ ಹಿಂಭಾಗದ H- ಆಕಾರದ LED ಟೈಲ್‌ಲೈಟ್ ಅನ್ನು ಹೊಂದಿದ್ದರೆ, ಮುಂಭಾಗದಂತೆ ಹಿಂಭಾಗದಲ್ಲಿ DRL ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯು ಎಕ್ಸ್‌ಟರ್‌ನ ಎತ್ತರವನ್ನು ಇನ್ನಷ್ಟು ಎದ್ದುಕಾಣುವ ರೀತಿಯ ರೂಫ್ ರೈಲ್ ಗಳಿವೆ. ಇನ್ನು ಹ್ಯುಂಡೈ ಕ್ಯಾಬಿನ್ ಬಗ್ಗೆ ಇನ್ನೂ ಮಾಹಿತಿಗಳು ಬಹಿರಂಗಪಡಿಸದಿದ್ದರೂ, ಕಂಪನಿಯು ಈಗ ಒಂದು ವಿಭಾಗ-ಮೊದಲ ವಾಯ್ಸ್-ಆಕ್ಟಿವ್ ಗೊಳಿಸಿದ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಬರಲಿದೆ ದೃಢಪಡಿಸಿದೆ.

ಇದು ವಾಯ್ಸ್ ಕಾಮೆಂಡ್ ಗಳಿಗೆ ಪ್ರತಿಕ್ರಿಯಿಸುತ್ತದೆ. ಈ ರೀತಿಯ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ. ಹ್ಯುಂಡೈ ತನ್ನ ಮುಂಬರುವ ಎಕ್ಸ್‌ಟರ್ ಎಸ್‌ಯುವಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ 25 ಇತರ ಸುರಕ್ಷತಾ ಪೀಚರ್ಸ್ ಗಳೊಂದಿಗೆ ಬರಲಿದೆ. ಹ್ಯುಂಡೈ ಇಂಡಿಯಾ ಈ ಹೊಸ ಎಕ್ಸ್‌ಟರ್ ಎಸ್‍ಯುವಿಯಲ್ಲಿ ಲೋ-ಸ್ಪೆಕ್ ರೂಪಾಂತರಗಳಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ. ಈ ಕಾರಿನ ಸಿಎನ್‌ಜಿ ಆವೃತ್ತಿಯು 28 ಕಿ.ಮೀ ಮೈಲೇಜ್ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Tuesday, June 13, 2023, 11:14 [IST]
English summary
Hardik pandya signed as brand ambassador for new hyundai exter suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+