ಸಣ್ಣ ಹ್ಯಾಚ್‌ಬ್ಯಾಕ್‌ನಲ್ಲಿ ದುಬಾರಿ BMW ಕಾರನ್ನು ಬೆನ್ನಟ್ಟಿದ ಚಾಲಕನಿಗೆ ಒಂದು ಕ್ಷಣ ಯಮನ ದರ್ಶನ

ರಸ್ತೆಗಳಲ್ಲಿ ದುಬಾರಿ ಕಾರುಗಳನ್ನು ನೊಡಿದಾಗ ಎಂಥವರಿಗೂ ಅವುಗಳ ಮೇಲೆ ಕಣ್ಣುಗಳು ತಾನಾಗಿಯೇ ಹೋಗುತ್ತವೆ. ಹಾಗೆಂದು ನಾವು ಓಡಿಸುವ ವಾಹನದ ಬಗ್ಗೆ ಅರಿವಿಲ್ಲದೇ ಡ್ರೈವಿಂಗ್ ಅನ್ನು ನಿರ್ಲಕ್ಷಿಸುವುದರಿಂದ ಯಾವೆಲ್ಲಾ ಅನಾಹುತಗಳು ಆಗುತ್ತವೆ ಎಂಬುದಕ್ಕೆ ಇಲ್ಲಿನ ಘಟನೆಯೇ ಉದಾಹರಣೆಯಾಗಿದ್ದು, ಈ ಕುರಿತ ವಿಡಿಯೋ ಕೂಡ ಸುದ್ದಿಯ ಕೊನೆಯಲ್ಲಿದೆ.

ಮಳೆ ಬಿದ್ದ ರಸ್ತೆಯಲ್ಲಿ ಹ್ಯಾಚ್‌ಬ್ಯಾಕ್‌ ಚಾಲಕನೊಬ್ಬ BMW X6 ಅನ್ನು ನೋಡಿ ಅದನ್ನು ಹಿಂಬಾಲಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದ್ರೆ ಆ ಕಾರನ್ನು ಓವರ್‌ ಟೇಕ್ ಮಾಡುವ ರೀತಿಯಲ್ಲಿ ಬೆಂಬಿದ್ದು, ತನ್ನ ಕಾರನ್ನು ಅಪಘಾತಕ್ಕೆ ಸಿಲುಕಿಸಿದ್ದಾನೆ. ತನ್ನ ಕಾರಿನೊಳಗಿಂದ ವೀಡಿಯೊ ಮಾಡಲಾಗಿದ್ದು ಅಪಘಾತದ ವಿಡಿಯೋ ಕೂಡ ಸೆರೆಯಾಗಿದೆ. ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿಯಿಲ್ಲ.

hatchback-chased-bmw-x6-accident-video-viral

ವಿಡಿಯೋದಲ್ಲಿ ಸೆರೆಯಾದ ದೃಷ್ಯಗಳ ಪ್ರಕಾರ, BMW X6 ವೇಗದ ತಿರುವುಗಳನ್ನು ತೆಗೆದುಕೊಂಡು ಮುನ್ನುಗ್ಗುವಾಗ ಹ್ಯಾಚ್‌ಬ್ಯಾಕ್ ಚಾಲಕ ಕೂಡ ಅದೇ ರೀತಿ BMW X6 ಅನ್ನು ಬೆನ್ನಟ್ಟಿದ್ದಾನೆ. ಈ ವೇಳೆ ಅಡ್ಡಾದಿಡ್ಡಿಯಾಗಿ ಓಡಿಸಲು ಪ್ರಾರಂಭಿಸಿದ್ದಾನೆ. BMW X6 ವೇಗವಾಗಿ ಮುಂದೆ ಸಾಗುತ್ತಾ ಟ್ರಾಫಿಕ್ ಸಿಗ್ನಲ್ ಅನ್ನು ದಾಟುತ್ತದೆ.

ಆದ್ರೆ ಹ್ಯಾಚ್‌ಬ್ಯಾಕ್‌ ಚಾಲಕ BMW X6 ಅನ್ನು ನೋಡುತ್ತಾ ಬಂದು ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಹಾಗೆಯೇ ಹ್ಯಾಚ್‌ಬ್ಯಾಕ್ ಚಾಲಕನಿಗೆ ಸಮಯಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೆ ಡಿಕ್ಕಿ ಹೊಡೆದಿದ್ದಾನೆ. ಇದು ನಿಧಾನ ವೇಗದ ಅಪಘಾತವಾದ್ದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದ್ರೆ ವಿಡಿಯೋ ಮಾತ್ರ ಸದ್ಯ ವೈರಲ್ ಆಗಿದ್ದು, ಸಖತ್ ಟ್ರೋಲ್ ಮಾಡುತ್ತಿದ್ದಾರೆ.

hatchback-chased-bmw-x6-accident-video-viral

ಸಣ್ಣ ಹ್ಯಾಚ್ ಬ್ಯಾಕ್‌ಗೆ ಹೋಲಿಸಿದರೆ ರಸ್ತೆಗಳಲ್ಲಿ BMW X6 ESP ನಂತಹ ದುಬಾರಿ ಕಾರುಗಳ ಟ್ರಾಕ್ಷನ್ ಕಂಟ್ರೋಲ್‌ನೊಂದಿಗೆ ಕಾರನ್ನು ಹೆಚ್ಚು ಸ್ಥಿರವಾಗಿಸುವಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಅಲ್ಲದೆ, ಉನ್ನತ-ಮಟ್ಟದ ಕಾರುಗಳು ವಿಶಾಲವಾದ ಟೈರ್‌ಗಳನ್ನು ಹೊಂದಿರುವುದರಿಂದ ರಸ್ತೆಯಲ್ಲಿ ಅವುಗಳ ಗ್ರಿಪ್ ಹೆಚ್ಚಾಗಿರುತ್ತದೆ.

ಹಾಗಾಗಿ ಸಣ್ಣ ಹ್ಯಾಚ್‌ಬ್ಯಾಕ್‌ಗಳೊಂದಿಗೆ ದುಬಾರಿ ಕಾರುಗಳನ್ನು ಬೆನ್ನಟ್ಟುವುದು ಮೂರ್ಖತನ ಎಂದೇ ಹೇಳಬಹುದು. ಅಲ್ಲದೇ ಮಳೆಯು ವಾಹನಗಳಲ್ಲಿನ ಬಹಳಷ್ಟು ಆಯಿಲ್‌ಗಳನ್ನು ರಸ್ತೆಗೆ ತಳ್ಳುವುದರಿಂದ, ವಾಹನಗಳನ್ನು ಮತ್ತಷ್ಟು ಜಾರುವಂತೆ ಮಾಡುತ್ತದೆ. ಹಾಗಾಗಿ ಬ್ರೇಕಿಂಗ್ ಅಂತರವನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕ ಕೂಡ ತಿಳಿದಿರಬೇಕು.

ನೀರಿನಲ್ಲಿ ಟೈರ್ ಮುಳುಗಿದಾಗ ರಸ್ತೆ ಮತ್ತು ಟೈರ್ ನಡುವಿನ ಸಂಪರ್ಕಕ್ಕೆ ಅಡ್ಡಿಪಡಿಸುತ್ತದೆ. ಇದು ಅನಿಯಂತ್ರಿತ ಸ್ಲೈಡಿಂಗ್‌ಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಕಾರು ಚಾಲಕರು ವಾಹನವನ್ನು ನಿಯಂತ್ರಿಸಲು ಹೆಣಗಾಡುತ್ತಾರೆ. ರಸ್ತೆಯ ಮೇಲ್ಮೈಯೊಂದಿಗೆ ಸಂಪರ್ಕ ಸಿಗದೆ ನೀರಿನ ಮೇಲೆ ಕಾರು ಸ್ಥಗಿತಗೊಂಡಿರುವುದರಿಂದ ಬ್ರೇಕ್‌ಗಳು ಸಹ ನಿಷ್ಪರಿಣಾಮಕಾರಿಯಾಗುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Thursday, July 6, 2023, 19:36 [IST]
English summary
Hatchback chased bmw x6 accident video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+