Honda ದಿಂದ 4 ಹೊಸ SUVಗಳ ಬಿಡುಗಡೆ ಖಚಿತ! ಇವಿ ಅವತಾರದಲ್ಲಿ ಹೋಂಡಾ ಎಲಿವೇಟ್!

ಹೋಂಡಾ ಕಾರ್ಸ್ ಇಂಡಿಯಾ ಇತ್ತೀಚೆಗೆ ಎಲಿವೇಟ್ ಅನ್ನು ಬಿಡುಗಡೆ ಮಾಡಿತು, ಆ ಮೂಲಕ ಮಧ್ಯಮ ಗಾತ್ರದ SUV ಜಾಗಕ್ಕೆ ಅದರ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಅಲ್ಲದೇ ಎಲಿವೇಟ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಕಂಪನಿಯು 2030 ರ ವೇಳೆಗೆ ಇನ್ನೂ 4 SUV ಗಳನ್ನು ಪರಿಚಯಿಸಲು ಸಜ್ಜಾಗಿದೆ.

ಎಲಿವೇಟ್ ಹೊರತಾಗಿ, ಹೋಂಡಾ ಪ್ರಸ್ತುತ ದೇಶದಲ್ಲಿ ಅಮೇಜ್ ಮತ್ತು ಸಿಟಿಯನ್ನು ಮಾರಾಟ ಮಾಡುತ್ತಿದೆ. ಈ ಸೆಡಾನ್‌ಗಳು ಕಂಪನಿಗೆ ಉತ್ತಮ ಮಾರಾಟ ತಂದುಕೊಟ್ಟಿವೆಯಾದರೂ, 2030 ರ ಅಂತ್ಯದ ವೇಳೆಗೆ ಹಂತ ಹಂತವಾಗಿ ನಾಲ್ಕು SUV ಗಳನ್ನು ಪರಿಚಯಿಸುವ ಯೋಜನೆಯಿದೆ. ಹೋಂಡಾದ ಉನ್ನತ ಅಧಿಕಾರಿಗಳ ಪ್ರಕಾರ, ಎಲಿವೇಟ್‌ನ ಎಲೆಕ್ಟ್ರಿಕ್ ಮಾದರಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಎರಡನೇ ಎಸ್‌ಯುವಿ ಆಗಿ ಇಳಿಸಲಿದ್ದಾರೆ.

honda-launch-4-new-suvs-elevate-in-ev-avatar

ಇಂಧನ ಚಾಲಿತ ಹೋಂಡಾ ಎಲಿವೇಟ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 10.99 ಲಕ್ಷ ರೂ. (ಎಕ್ಸ್ ಶೋ ರೂಂ)ಗೆ ಖರೀದಿಗೆ ಲಭ್ಯವಿದೆ. ಇದು ಹೆಚ್ಚು ಸ್ಪರ್ಧಾತ್ಮಕ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸದ್ದು ಮಾಡಲು ಜಪಾನಿನ ಕಾರು ತಯಾರಕರು ಪಕ್ಕಾ ಪ್ಲಾನ್‌ನೊಂದಿಗೆ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಎಲೆಕ್ಟ್ರಿಕ್ ಆವೃತ್ತಿಯನ್ನು ಕೂಡ ಸ್ಪರ್ಧಾತ್ಮಕವಾಗಿ ಅಗ್ಗದ ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹೊಸ ಎಸ್‌ಯುವಿಗಳ ಬಿಡುಗಡೆಗೆ ಸಂಬಂಧಿಸಿದಂತೆ, ಮುಂದಿನ 3 ವರ್ಷಗಳಲ್ಲಿ ಕಂಪನಿಯು ನಿಗದಿಪಡಿಸಿದ ಗುರಿಯಾಗಿದೆ. ಎಲಿವೇಟ್ ಬ್ರ್ಯಾಂಡ್‌ಗೆ ಉತ್ತಮ ಮಾರಾಟವನ್ನು ತಂದುಕೊಡಲು ಸಹಾಯ ಮಾಡುತ್ತಿದೆ, ಆ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮರುಸ್ಥಾಪಿಸಿಕೊಂಡು, ದೇಶದಲ್ಲಿ ಹೋಂಡಾದ ಮೊದಲ EV ಬಿಡುಗಡೆಗೆ ವೇಗ ಹೆಚ್ಚಾಗಲಿದೆ.

honda-launch-4-new-suvs-elevate-in-ev-avatar

ಉಳಿದ ಮೂರು SUV ಗಳ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡದೇ ರಹಸ್ಯವಾಗಿಟ್ಟಿದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಹೊಸ ಸಬ್-4-ಮೀಟರ್ SUV ಸಹ ಬಿಡುಗಡೆಯಾಗಲಿದೆ ಎಂಬ ಊಹಾಪೋಹಗಳಿವೆ, ಇದು ಈಗ ಸ್ಥಗಿತಗೊಂಡಿರುವ W-RV ಗೆ ಬದಲಿಯಾಗಲಿದೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ, SUV ಗಳು ಹೋಂಡಾಗೆ ಪ್ರಮುಖವಾದ ಕೇಂದ್ರಬಿಂದುವಾಗಿದೆ ಎಂದು ಹೇಳಬಹುದು. ಏಕೆಂದರೆ ಇವು ಗಮನಾರ್ಹವಾದ ಮಾರುಕಟ್ಟೆ ಪಾಲನ್ನು ತಂದುಕೊಡುತ್ತಿದ್ದು, ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಹೊಸ ಎಲಿವೇಟ್ ಬಗ್ಗೆ ಹೇಳುವುದಾದರೆ, 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಮೇಲೆ ತಿಳಿಸಿದಂತೆ ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲೂ ಲಭ್ಯವಿದೆ. ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

honda-launch-4-new-suvs-elevate-in-ev-avatar

ಈ ಎಸ್‌ಯುವಿಯು ರೂಪಾಂತರಗಳ ಅನುಗುಣವಾಗಿ ಫಿಚರ್ಸ್ ಗಳನ್ನು ಒಳಗೊಂಡಿದೆ. SV ರೂಪಾಂತರದಲ್ಲಿ, ಬೀಜ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು 60:40 ಸ್ಪ್ಲಿಟ್ ಹಿಂಬದಿ ಸೀಟುಗಳನ್ನು ಹೊಂದಿವೆ. ಇದರೊಂದಿಗೆ ಆಟೋ AC ವಿಟ್ hPM 2.5 ಕ್ಯಾಬಿನ್ ಏರ್ ಪ್ಯೂರಿಫೈಯಿಂಗ್ ಫಿಲ್ಟರ್, ಎಂಜಿನ್ ಪುಶ್ ಬಟನ್ ಜೊತೆಗೆ ಹೋಂಡಾ ಸ್ಮಾರ್ಟ್ ಎಂಟ್ರಿ ಸಿಸ್ಟಮ್, ಡ್ಯುಯಲ್ ಫ್ರಂಟ್ SRS ಏರ್‌ಬ್ಯಾಗ್‌ಗಳು, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್‌ಲ್ಯಾಂಪ್‌ಗಳಿವೆ.

ಈ ಹೊಸ ಎಸ್‍ಯುವಿಯ V ರೂಪಾಂತರದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಹೋಂಡಾ ಕನೆಕ್ಟ್ ಹೊಂದಿದೆ. ಇದರೊಂದಿಗೆ 8-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು, ಮಲ್ಟಿ-ಆಂಗಲ್ ರಿಯರ್ ವ್ಯೂ ಕ್ಯಾಮೆರಾ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿದೆ.

honda-launch-4-new-suvs-elevate-in-ev-avatar

ಹೋಂಡಾ ಎಲಿವೇಟ್ ಎಸ್‍ಯುವಿಯ VX ರೂಪಾಂತರದಲ್ಲಿ 7 ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ ಫೋನ್ ಚಾರ್ಜರ್, 6 ಸ್ಪೀಕರ್ ಆಡಿಯೊ ಸಿಸ್ಟಮ್, ಲೇನ್ ವಾಚ್ ಕ್ಯಾಮೆರಾ ಮತ್ತು ಒನ್ ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋವನ್ನು ಹೊಂದಿದೆ.

More from DriveSpark

Article Published On: Wednesday, September 13, 2023, 15:54 [IST]
English summary
Honda launch 4 new suvs elevate in ev avatar
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+