ಭಾರತದಲ್ಲಿ ಎಲ್ಲರೂ ಕಾಯುತ್ತಿದ್ದ ಹ್ಯುಂಡೈ ಔರಾ ಫೇಸ್‌ಲಿಫ್ಟ್ ಬಿಡುಗಡೆ: ಎಂತಹ ವೈಶಿಷ್ಟ್ಯಗಳಿವೆ..

ಭಾರತದಲ್ಲಿ ಹ್ಯುಂಡೈ, ಬಹುನಿರೀಕ್ಷಿತ 'ಔರಾ ಫೇಸ್‌ಲಿಫ್ಟ್' ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಪೆಟ್ರೋಲ್ ಇ ವೇರಿಯಂಟ್‌ ಬೆಲೆ 6.29 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದ್ದು, ಸಿಎನ್‌ಜಿ ಎಸ್‌ಎಕ್ಸ್ ವೇರಿಯಂಟ್‌ ಬೆಲೆ 8.87 ಲಕ್ಷ ಇರಲಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 ಟೋಕನ್ ಮೊತ್ತಕ್ಕೆ ಬುಕಿಂಗ್ ಶುರುವಾಗಿತ್ತು.

ಹೊರ, ಒಳಭಾಗದ ವಿನ್ಯಾಸ:
ಇದೀಗ ಔರಾ ಫೇಸ್‌ಲಿಫ್ಟ್ ನೂತನ ಫ್ರಂಟ್ ಡಿಸೈನ್ ಹೊಂದಿದ್ದು, ಆಕರ್ಷಕವಾಗಿ ಕಾಣಲಿದೆ. ಈ ಕಾಂಪ್ಯಾಕ್ಟ್ ಸೆಡಾನ್ ನಲ್ಲಿ ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಬಂಪರ್‌ನ ಅಂಚಿನಲ್ಲಿ ಇರುವಂತೆ ವಿನ್ಯಾಸ ಮಾಡಲಾಗಿದೆ. 15-ಇಂಚಿನ ಅಲಾಯ್ ವೀಲ್ಸ್ ಮತ್ತು LED ಟೈಲ್-ಲೈಟ್‌ಗಳನ್ನು ಹೊಂದಿದೆ. ಜೊತೆಗೆ ಸೈಡ್ ಅಥವಾ ರೇರ್ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಬಹುತೇಕ ಹಿಂದಿನ ಮಾದರಿಗೆ ಹೋಲುತ್ತದೆ. ಬೇಸ್ ರೂಪಾಂತರ ಹೊರತುಪಡಿಸಿ, ಬೇರೆಲ್ಲ ಮಾದರಿಗಳು ಬೂಟ್-ಲಿಡ್ ಸ್ಪಾಯ್ಲರ್ ಅನ್ನು ಹೊಂದಿವೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಬದಲಾಗಿಲ್ಲ. ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್ ಇದೆ.

ಹ್ಯುಂಡೈ ಔರಾ ಫೇಸ್‌ಲಿಫ್ಟ್ ಎಂಜಿನ್ ಕಾರ್ಯಕ್ಷಮತೆ:
ಭಾರತ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಔರಾ ಫೇಸ್‌ಲಿಫ್ಟ್, ತನ್ನ ಹಿಂದಿನ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 83 hp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು. ಇದು ಖರೀದಿದಾರರನ್ನು ಹ್ಯುಂಡೈ ಔರಾ ಫೇಸ್‌ಲಿಫ್ಟ್ ಕೊಳ್ಳುವಂತೆ ಪ್ರೇರೇಪಿಸಬಹುದು.

ಅಲ್ಲದೆ, ಔರಾದ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಫ್ಯಾಕ್ಟರಿಯಲ್ಲಿ ಫಿಟ್ ಮಾಡಿದ CNG ಕಿಟ್ ಹೊಂದಿರುವ ಆವೃತ್ತಿಯು 69 hp ಗರಿಷ್ಠ ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಆದರೆ, ಔರಾದ ಈ ಫೇಸ್‌ಲಿಫ್ಟ್ ಕಾಂಪ್ಯಾಕ್ಟ್ ಸೆಡಾನ್, 100 hp ಪವರ್ ಮತ್ತು 172Nm ಟಾರ್ಕ್ ಉತ್ಪಾದಿಸುವ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಇನ್ಮುಂದೆ ಪಡೆಯುವುದಿಲ್ಲ.

ರೂಪಾಂತರಗಳು ಹಾಗೂ ಸುರಕ್ಷತಾ ವೈಶಿಷ್ಟ್ಯಗಳು:
ಫೇಸ್‌ಲಿಫ್ಟ್ ಔರಾ ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, E, S, SX ಮತ್ತು SX(O). ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕಾರು, ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಈ ಔರಾ ಫೇಸ್‌ಲಿಫ್ಟ್ ನಾಲ್ಕು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ABS ಮತ್ತು EBD, ಜೊತೆಗೆ ISOFIX ಆಂಕಾರೇಜ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಆಟೋಮೆಟಿಕ್ ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ ಎಂದು ಹೇಳಬಹುದು.

ಹ್ಯುಂಡೈ ಔರಾ ಫೇಸ್‌ಲಿಫ್ಟ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 8.0 ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ರೇರ್ ಎಸಿ ವೆಂಟ್‌ಗಳು, ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಹೆಡ್‌ರೆಸ್ಟ್‌ಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿರಲಿದೆ. ಜೊತೆಗೆ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ 3.5-ಇಂಚಿನ ಡಿಜಿಟಲ್ ಡಿಸ್ಪ್ಲೇಯಂತಹ ಹೊಸ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

ಹ್ಯುಂಡೈ ಔರಾ ಫೇಸ್‌ಲಿಫ್ಟ್ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರೂ.6.10 ಲಕ್ಷ - 8.84 ಲಕ್ಷ ಬೆಲೆಯ ಟಾಟಾ ಟಿಗೋರ್, ರೂ.6.89 ಲಕ್ಷ - 9.48 ಲಕ್ಷ ದರದಲ್ಲಿ ದೊರೆಯುವ ಹೋಂಡಾ ಅಮೇಜ್ ಮತ್ತು ರೂ. 6.24 ಲಕ್ಷ - 9.18 ಲಕ್ಷ ಬೆಲೆಯಲ್ಲಿ ಸಿಗುವ ಮಾರುತಿ ಸುಜುಕಿ ಡಿಜೈರ್ ನಂತಹ ಇತರೆ ಕಾಂಪ್ಯಾಕ್ಟ್ ಸೆಡಾನ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ. ಇದರ ಬೆಲೆಯು ಕೈಗೆಟುಕುವ ರೀತಿಯಲ್ಲಿ ಇದ್ದು, ಹೆಚ್ಚಿನ ಗ್ರಾಹಕರು ಖರೀದಿಸಬಹುದು.

ಇನ್ನು ಕೆಲದಿನಗಳ ಹಿಂದೆಯಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಬಿಡುಗಡೆಯಾಗಿದ್ದು, ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ಟಾ. ಈ ಕಾರು, ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

Most Read Articles

Kannada
English summary
Hyundai aura facelift launched in India details kannada
Story first published: Monday, January 23, 2023, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X