Hyundai: ಕ್ರಾಂತಿ ಸೃಷ್ಟಿಸಲು ಕಡಿಮೆ ಬೆಲೆಗೆ ಬರಲಿದೆ 'ಹ್ಯುಂಡೈ ಎಕ್ಸ್‌ಟರ್‌' ಎಲೆಕ್ಟ್ರಿಕ್ ಕಾರು, ರೇಂಜ್ ಎಷ್ಟು?

ಭಾರತದಲ್ಲಿ ಕಳೆದ ತಿಂಗಳು ಬಿಡುಗಡೆಗೊಂಡ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ (Hyundai Exter Suv)ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಈ ಮೂಲಕ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಕಮಲ್ ಮಾಡುತ್ತಿದ್ದು, ಇದೇ ಎಕ್ಸ್‌ಟರ್ ಎಲೆಕ್ಟ್ರಿಕ್ ರೂಪದಲ್ಲಿ ಲಾಂಚ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಟಾಟಾ ಪಂಚ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಹ್ಯುಂಡೈ ಎಕ್ಸ್‌ಟರ್ ರೂ.5,99 ಲಕ್ಷದಿಂದ ರೂ.9.32 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ದೊಡ್ಡ ಮಟ್ಟದಲ್ಲಿ ಬುಕ್ಕಿಂಗ್ ಪಡೆದುಕೊಂಡಿದೆ. 10 ರಿಂದ 12 ವಾರ ಕಾಯುವಿಕೆ ಅವಧಿಯನ್ನು ಹೊಂದಿದೆ. ಅದೇ ರೀತಿಯಲ್ಲಿ ಟಾಟಾ ಪಂಚ್‌ ರೂ.6 ಲಕ್ಷದಿಂದ ರೂ.10.10 ಲಕ್ಷ ದರದಲ್ಲಿ ದೊರೆಯಲಿದ್ದು, ಇದೀಗ, ಎಲ್ಲ ರೂಪಾಂತರಗಳಲ್ಲಿ ಎಲೆಕ್ಟ್ರಿಕ್ ಸನ್‌ರೂಫ್‌ ಹೊಂದಿದೆ.

Hyundai: ಕ್ರಾಂತಿ ಸೃಷ್ಟಿಸಲು ಕಡಿಮೆ ಬೆಲೆಗೆ ಬರಲಿದೆ ಹ್ಯುಂಡೈ ಎಕ್ಸ್‌ಟರ್‌ ಎಲೆಕ್ಟ್ರಿಕ್ ಕಾರು, ರೇಂಜ್ ಎಷ್ಟು?

ಟಾಟಾ ಮೋಟಾರ್ಸ್ ಕೂಡ ಮುಂಬರುವ ದಿನಗಳಲ್ಲಿ ಪಂಚ್‌ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದೀಗ, ಹುಂಡೈ ಕೂಡ ಎಕ್ಸ್‌ಟರ್‌ನ್ನು ಎಲೆಕ್ಟ್ರಿಕ್ ರೂಪದಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದ್ದು, ಎಕ್ಸ್‌ಟರ್‌ ಇವಿ ಎನ್ನಲಾದ ಕಾರು, ರಸ್ತೆಯಲ್ಲಿ ಪರೀಕ್ಷಾರ್ಥ ನಡೆಸುವಾಗ ಕಂಡುಬಂದಿತು. ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿವೆ.

ಭಾರತದ ಮಾರುಕಟ್ಟೆಯಲ್ಲಿ 2023ರ ಅಂತ್ಯದ ವೇಳೆಗೆ ಅಥವಾ 2024ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿರುವ ಹುಂಡೈ ಎಕ್ಸ್‌ಟರ್‌ ಎಲೆಕ್ಟ್ರಿಕ್ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಅವುಗಳೆಂದರೆ, 25 - 30 kWh ಬ್ಯಾಟರಿ ಪ್ಯಾಕ್. ಇದಕ್ಕೆ ಅನುಗುಣವಾಗಿ ಸಂಪೂರ್ಣ ಚಾರ್ಜಿನಲ್ಲಿ 300 - 350 km ರೇಂಜ್ ನೀಡಬಹುದು. ರೂ.10 ಲಕ್ಷ ಅಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎನ್ನಲಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮುಂಬರಲಿರುವ ಹುಂಡೈ ಎಕ್ಸ್‌ಟರ್‌, ಈಗಿರುವ ಕಾರಿನಂತೆಯೇ 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದರೊಟ್ಟಿಗೆ ಸುರಕ್ಷತೆಯ ದೃಷ್ಟಿಯಿಂದ ಏರ್‌ಬ್ಯಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿರುವ ನೀರಿಕ್ಷೆಯಿದೆ.

ಟಾಟಾದ ಬಹುನಿರೀಕ್ಷಿತ ಪಂಚ್ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ, ರೂ.12 ಲಕ್ಷ ಬೆಲೆಯಲ್ಲಿ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಸಂಪೂರ್ಣ ಚಾರ್ಜಿನಲ್ಲಿ 350 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಟಚ್‌ಸ್ಕ್ರೀನ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಏರ್ ಬಾಗ್ಸ್, ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಬಹುದು.

ಸದ್ಯ, ದೇಶದಲ್ಲಿ ಖರೀದಿಗೆ ದೊರೆಯುವ ಹುಂಡೈ ಎಕ್ಸ್‌ಟರ್‌ 1.2-ಲೀಟರ್, 4 ಸಿಲಿಂಡರ್ ಎಂಜಿನ್‌ ಹೊಂದಿದ್ದು, ಪೆಟ್ರೋಲ್ ಮೋಡ್‌ನಲ್ಲಿ 81.8 bhp ಪವರ್, 113.8 Nm ಪೀಕ್ ಟಾರ್ಕ್, ಸಿಎನ್‌ಜಿ ಮೋಡ್‌ನಲ್ಲಿ 67.7 bhp ಗರಿಷ್ಠ ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್/ AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 9.2 ರಿಂದ 27.1 kmpl ಮೈಲೇಜ್ ನೀಡುತ್ತದೆ.

ಟಾಟಾ ಪಂಚ್ ಕೂಡ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕನೆಕ್ಟೆಡ್ ಕಾರ್ ಟೆಕ್ ಮತ್ತು ಕ್ರೂಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.

ಇನ್ನು, 'ಹುಂಡೈ ಎಕ್ಸ್‌ಟರ್‌' ಎಲೆಕ್ಟ್ರಿಕ್ ರೂಪದಲ್ಲಿ ಕಡಿಮೆ ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಮುಂಬರುವ ದಿನಗಳಲ್ಲಿ ಲಾಂಚ್ ಆಗುವ ನೀರಿಕ್ಷೆಯಿರುವ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿಗೆ ಯಾವ ರೀತಿಯಲ್ಲಿ ಫೈಟ್ ನೀಡಲಿದೆ ಎಂಬುದುನ್ನು ಕಾದುನೋಡಬೇಕಾಗಿದೆ. ಇವೆರಡು ಕಾರುಗಳು ಬಂದ ಮೇಲೆ ದೊಡ್ಡ ಮಟ್ಟದಲ್ಲಿ ಜಿದ್ದಾಜಿದ್ದಿ ಏರ್ಪಡುವುದು ಖಚಿತ.

Article Published On: Tuesday, August 8, 2023, 18:02 [IST]
English summary
Hyundai exter electric car launch india 2024 expected details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+