ಬಿಡುಗಡೆಗೂ ಮುನ್ನವೆ ಆನ್‌ಲೈನ್‌ನಲ್ಲಿ Hyundai Exter ಇಂಟೀರಿಯರ್ ಲೀಕ್
ಹ್ಯುಂಡೈನಿಂದ ಬಿಡುಗಡೆಗೆ ಸಜ್ಜಾಗಿರುವ ಬಹುನಿರೀಕ್ಷಿತ ಹೊಸ ಎಕ್ಸ್ಟರ್‌ನ ಇಂಟೀರಿಯರ್ ಚಿತ್ರಗಳು ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಬಾಹ್ಯವಾಗಿ ಕಾರು ಹೇಗಿದೆ ಎಂಬುದರ ಕುರಿತು ಈಗಾಗಲೇ ನಾವು ಹಲವು ಸುದ್ದಿಗಳನ್ನು ಪ್ರಕಟಿಸಿದ್ದೇವೆ. ಈಗ ಸೊರಿಕೆಯಾದ ಇಂಟೀರಿಯರ್ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಹೇಗಿದೆ ಇಂಟೀರಿಯರ್: ಒಳಭಾಗದಲ್ಲಿ, ಹ್ಯುಂಡೈನ ಅತ್ಯಂತ ಕೈಗೆಟುಕುವ ಕಾರದ Grand i10 NIOS ನಿಂದ Exter ಕಾರು ಸಾಕಷ್ಟು ಅಂಶಗಳನ್ನು ಎರವಲು ಪಡೆದಿದೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿನ ಡ್ಯಾಶ್‌ಬೋರ್ಡ್, ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಎಸಿ ವೆಂಟ್‌ಗಳು, ಇನ್‌ಸ್ಟ್ರುಮೆಂಟ್ ಬೈನಾಕಲ್ ಜೊತೆಗೆ ಡೋರ್ ಟ್ರಿಮ್ ಲೇಔಟ್ ಬಹುತೇಕ ಒಂದೇ ರಿತಿ ಕಾಣುತ್ತಿವೆ.

ಮೌಂಟೆಡ್ ಕಂಟ್ರೋಲರ್‌ಗಳೊಂದಿಗೆ ಮೂರು ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಾಬ್‌ಗಳು ಸಹ ಒಂದೇ ರೀತಿ ಕಾಣುತ್ತವೆ. ಉಳಿದಂತೆ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಸಹ ಪಡೆದಿದೆ. ಲೀಕ್ ಆಗಿರುವ ಫೋಟೋಗಳಲ್ಲಿ ಡ್ಯಾಷ್‌ಬೋರ್ಡ್ ಸಂಪೂರ್ಣವಾಗಿ ಕಾಣುವುದಿಲ್ಲ. ಇವುಗಳ ಜೊತೆಗೆ ಈ ಹೊಸ ಮಾದರಿಗೆ ಆಧುನಿಕ ಡಿಸೈನ್ ಹಾಗೂ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರ್ಪಡೆ ಮಾಡಬಹುದು.
ಕ್ರೂಸ್ ಕಂಟ್ರೋಲ್, TPMS: Hyundai Exter ಈಗ ಕ್ರೂಸ್ ಕಂಟ್ರೋಲ್ ಕೂಡ ಪಡೆಯಲಿದೆ. ಹಾಗೆಯೇ ಲೀಕ್ ಆದ ಚಿತ್ರಗಳಲ್ಲಿ TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಸಹ ಕಾಣಬಹುದು. ಇವುಗಳ ಜೊತೆಗೆ ನಮಗೆ ತಿಳಿದಿರುವಂತೆ ಹ್ಯುಂಡೈ ಹಿಂಭಾಗದ ಎಸಿ ವೆಂಟ್‌ಗಳು, ಪುಶ್ ಬಟನ್ ಸ್ಟಾರ್ಟ್, ರಿಕ್ವೆಸ್ಟ್ ಸೆನ್ಸರ್‌ಗಳೊಂದಿಗೆ ಕೀಲೆಸ್ ಎಂಟ್ರಿ, ಡ್ಯಾಶ್‌ಕ್ಯಾಮ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.

ಈ ಹಿಂದೆ, ಹ್ಯುಂಡೈ ಎಕ್ಸ್‌ಟರ್‌ನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್, ಬರ್ಗ್ಲರ್ ಅಲಾರ್ಮ್, ಆರು ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ESC ಮತ್ತು EBD ಜೊತೆಗೆ ABS ಅನ್ನು ಪಡೆಯಲಿದೆ ಎಂದು ಕಂಪನಿ ದೃಢಪಡಿಸಿತ್ತು. ಈ ಹೊಸ ಮಾದರಿಗೆ ಹೆಚ್ಚಿನ ಪಬ್ಲಿಸಿಟಿಗಾಗಿ ಕಂಪನಿ ಇತ್ತೀಚೆಗೆ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರನ್ನು ವಿಶೇಷ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ.
ಪವರ್‌ಟ್ರೇನ್ ವಿಷಯಕ್ಕೆ ಬಂದರೆ ಹುಂಡೈ ಎಕ್ಸ್‌ಟರ್ 1.2L NA ಪೆಟ್ರೋಲ್ ಎಂಜಿನ್‌ನ ಎರಡು ರೂಪಾಂತರಗಳಲ್ಲಿ ನೀಡಲಿದೆ. ಪೆಟ್ರೋಲ್ + CNG ದ್ವಿ-ಇಂಧನ ರೂಪಾಂತರಗಳು ಇದರಲ್ಲಿ ಲಭ್ಯವಿರಲಿವೆ. ಪೆಟ್ರೋಲ್‌ನಲ್ಲಿ ಚಲಿಸಿದಾಗ, ಈ ಎಂಜಿನ್ 82 bhp ಮತ್ತು 114 Nm ಟಾರ್ಕ್ ಉತ್ಪಾದಿಸುತ್ತದೆ. CNG ನಲ್ಲಿ ಚಲಿಸಿದಾಗ ಇದು 68 bhp ಮತ್ತು 95 Nm ಅನ್ನು ಉತ್ಪಾದಿಸುತ್ತದೆ.

5-ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಆಯ್ಕೆಗಳಿವೆ. ಎಕ್ಸ್‌ಟರ್ ಏಳು ರೂಪಾಂತರಗಳು ಮತ್ತು ಒಂಬತ್ತು ಬಣ್ಣದ ಆಯ್ಕೆಗಳಲ್ಲಿ ಸಿಗಲಿದೆ. ನಮಗಿರುವ ಮಾಹಿತಿಯಂತೆ ಹ್ಯುಂಡೈ ಇಂಡಿಯಾ ಇದನ್ನು ಜುಲೈ 10 ರಂದು ಬಿಡುಗಡೆ ಮಾಡಲಿದೆ. ಬೆಲೆ 6.5 ಲಕ್ಷ ರೂ.(ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.
ಹ್ಯುಂಡೈ ಎಕ್ಸ್‌ಟರ್ ಮಾದರಿಯು ಮಾರುತಿ ಸುಜುಕಿ ಫ್ರಾಂಕ್ಸ್, ಟಾಟಾ ಪಂಚ್ ಮತ್ತು ಸಿಟ್ರನ್ ಸಿ 3 ನಂತಹ ಪ್ರತಿಸ್ಪರ್ಧಿಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ. ಕಂಪನಿಯು ಈ SUV ಗಾಗಿ ರೂ. 11,000 ಟೋಕನ್ ಮೊತ್ತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ವಿತರಣೆಗಳು ಬಿಡುಗಡೆಯ ನಂತರ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
Source: Carwale
Link: https://www.carwale.com/news/this-is-the-hyundai-exters-interior-before-you-were-supposed-to-see-it/


Click it and Unblock the Notifications