ಉತ್ತಮ ಮೈಲೇಜ್ ನೀಡುವ 'ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್' ಬಿಡುಗಡೆ

ಭಾರತದ ಮಾರುಕಟ್ಟೆಯಲ್ಲಿ ಬಹುನೀರಿಕ್ಷಿತ 'ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್' ಕಾರನ್ನು ಬಿಡುಗಡೆ ಮಾಡಲಾಗಿದೆ. ಬೆಲೆಯು ಸಹ ಕೈಗೆಟುಕಲಿದ್ದು, ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿಸಬಹುದು. ಹೊಸ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ನೋಡಲು ಅತ್ಯಂತ ಆಕರ್ಷಕವಾಗಿದೆ.

ಹ್ಯುಂಡೈ ಕಂಪನಿ, ನೂತನ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಕಾರನ್ನು ರೂ.5.69 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ನೀಡುತ್ತಿದೆ. ಈ ತಿಂಗಳ ಪ್ರಾರಂಭದಲ್ಲಿಯೇ 11,000 ರೂ. ಟೋಕನ್ ಮೊತ್ತಕ್ಕೆ ಈ ಕಾರಿನ ಬುಕ್ಕಿಂಗ್‌ ಅನ್ನು ಓಪನ್ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಟಾಟಾ ಟಿಯಾದಂತಹ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಹೊಸ ಕಾರನ್ನು 80ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಹ್ಯುಂಡೈ ತಿಳಿಸಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಬಿಡುಗಡೆ

ಹೊರ & ಒಳಭಾಗದ ವಿನ್ಯಾಸ:
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್, ಇದೀಗ ಹೊಸ ಫ್ರಂಟ್ ಬಂಪರ್ ಅನ್ನು ಪಡೆದಿದೆ. ಗ್ರಿಲ್ ದೊಡ್ಡದಾಗಿದ್ದು, ಹೊಸ ಟ್ರೈ - ಆರೋ ಆಕಾರದ LED DRLಗಳನ್ನು ಹೊಂದಿದೆ. ನೂತನ 15 - ಇಂಚಿನ ಅಲಾಯ್ ವೀಲ್ಸ್ ಗಳು, ಜೊತೆಗೆ ಈ ಹ್ಯಾಚ್‌ಬ್ಯಾಕ್ ಹೊಸ LED ಟೈಲ್-ಲೈಟ್‌ಗಳನ್ನು ಸಹ ಪಡೆದಿದೆ. ಇವುಗಳನ್ನು ಲೈಟ್ ಬಾರ್‌ನಿಂದ ಕನೆಕ್ಟ್ ಮಾಡಲಾಗಿದೆ. ಶಾರ್ಕ್-ಫಿನ್ ಆಂಟೆನಾವನ್ನು ಹೊಂದಿದೆ.

ಹ್ಯುಂಡೈ, ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಕಾರನ್ನು ಪೋಲಾರ್ ವೈಟ್, ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ಟೀಲ್ ಬ್ಲೂ ಮತ್ತು ಫಿಯರಿ ರೆಡ್ ಬಣ್ಣಗಳ ಆಯ್ಕೆಗಳ ಜೊತೆಗೆ ಹೊಸ ಸ್ಪಾರ್ಕ್ ಗ್ರೀನ್ ಬಣ್ಣದಲ್ಲೂ ಖರೀದಿಗೆ ನೀಡಲಿದೆ. ಒಳಭಾಗದಲ್ಲಿ ಹ್ಯಾಚ್‌ಬ್ಯಾಕ್‌ನ ಕ್ಯಾಬಿನ್ ವಿನ್ಯಾಸವು ಹಿಂದಿನ ಆವೃತ್ತಿಗೆ ಹೋಲುತ್ತದೆ. ಆದರೆ, ಆಸನಗಳು ಹೊಸದಾಗಿವೆ. ಪರಿಷ್ಕೃತ ಇನ್ಸ್ರುಮೆಂಟ್ ಕ್ಲಸ್ಟರ್ ಮತ್ತು ಫುಟ್‌ವೆಲ್ ಲೈಟಿಂಗ್ ಅನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಬಿಡುಗಡೆ

ಎಂಜಿನ್ ಕಾರ್ಯಕ್ಷಮತೆ:
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಮ್ಯಾನುವಲ್ ಆಯ್ಕೆಯಲ್ಲಿ 20.7 kmpl ಮತ್ತು AMTಯಲ್ಲಿ 20.1 kmpl ಇಂಧನ ದಕ್ಷತೆಯನ್ನು ಹೊಂದಿದೆ.

ರೂಪಾಂತರ & ವೈಶಿಷ್ಟ್ಯಗಳು:
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್, ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ಟಾ. ಹಿಂದಿನ ಮಾದರಿಗೆ ಹೋಲಿಸಿದರೆ, ಈ ಕಾರು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಎಬಿಎಸ್ ಮತ್ತುಇಬಿಡಿ. ಜೊತೆಗೆ ನಾಲ್ಕು ಏರ್‌ಬ್ಯಾಗ್‌ಗಳನ್ನು ಪಡೆದಿರಲಿದೆ. ಟಾಪ್ - ಎಂಡ್ ಆವೃತ್ತಿಯು ಆರು ಏರ್‌ಬ್ಯಾಗ್‌ಗಳು, ISOFIX ಆಂಕಾರೇಜ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಆಟೋಮೆಟಿಕ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಬಿಡುಗಡೆ

ಇಷ್ಟೇಅಲ್ಲದೆ, ಈ ಹ್ಯಾಚ್‌ಬ್ಯಾಕ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8.0-ಇಂಚಿನ ಟಚ್‌ಸ್ಕ್ರೀನ್, ರೇರ್ ಎಸಿ ವೆಂಟ್‌ಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ. ಟಾಪ್ - ಎಂಡ್ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಆವೃತ್ತಿ, ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್)ನಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

ಅಂತಿಮವಾಗಿ ಹ್ಯುಂಡೈ, ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದು ಕೈಗೆಟುಕುವ ಬೆಲೆಯನ್ನು ಹೊಂದಿದೆ. ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿಸಬಹುದು. ಈ ಕಾರು, ಅದರ ಬೆಲೆಗೆ ತಕ್ಕಂತೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಸಣ್ಣ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದು, ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಮನಸ್ಸು ಮಾಡಬಹುದು.

Most Read Articles

Kannada
English summary
Hyundai grand i10 nios facelift launched details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X