ಭಾರತದಲ್ಲಿ ಜ.20ಕ್ಕೆ ಅಗ್ಗದ ಬೆಲೆಯ 'ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್' ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಪ್ರಮುಖವಾಗಿದೆ. ಇದು ಮಧ್ಯಮ ವರ್ಗದ ಜನರ ಕೈಗೆಟುಕುವ ಕಾರಾಗಿರುವುದರಿಂದ ಇದನ್ನು ಖರೀದಿಸಲು ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಾರೆ. ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಹ್ಯುಂಡೈ, 'ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್' ಆವೃತ್ತಿಯನ್ನು ಲಾಂಚ್ ಮಾಡಲು ಸಿದ್ಧವಾಗಿದೆ.

ಹುಂಡೈ ಇಂಡಿಯಾ, ಈ ತಿಂಗಳ ಆರಂಭದಲ್ಲಿ ನವೀಕರಿಸಿದ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ಕಾರನ್ನು ಅನಾವರಣಗೊಳಿಸಿತ್ತು. ಈಗಾಗಲೇ ಬುಕಿಂಗ್ 11,000 ರೂ.ಗೆ ಪ್ರಾರಂಭವಾಗಿದೆ. ಇದೀಗ, ಕಂಪನಿಯು ಫೇಸ್‌ಲಿಫ್ಟ್ ಗ್ರಾಂಡ್ ಐ10 ನಿಯೋಸ್ ಅನ್ನು ದೇಶದಲ್ಲಿ ಜನವರಿ 20 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದ ಈ ಕಾರಿಗಾಗಿ ಕಾಯುತ್ತಿದ್ದ ಖರೀದಿದಾರರಿಗೆ ಖುಷಿ ತಂದಿದ್ದು, ಬೆಲೆಯು ತುಂಬಾ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಜ.20ಕ್ಕೆ ಅಗ್ಗದ ಬೆಲೆಯ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಬಿಡುಗಡೆ

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ವಿನ್ಯಾಸ:
ಹೊಸ ಹ್ಯುಂಡೈ ಗ್ರಾಂಡ್ i10 ನಿಯೋಸ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫ್ರಂಟ್ ಮತ್ತು ರೇರ್ ಬಂಪರ್‌ಗಳು ಹೊಸದಾಗಿವೆ. ಅಲ್ಲದೆ, ನ್ಯೂ ತ್ರೈ-ಅಂಗುಲರ್ ಆಕಾರದ LED DRLsಗಳು, ದೊಡ್ಡದಾದ ಗ್ರಿಲ್, 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್, ಹೊಸ LED ಟೈಲ್ ಲೈಟ್‌ಗಳು. ಜೊತೆಗೆ ಶಾರ್ಕ್-ಫಿನ್ ಆಂಟೆನಾವನ್ನು ಈ ಕಾರು ಪಡೆದಿದೆ. ಇವು ಗ್ರಾಹಕರಿಗೆ ಇಷ್ಟವಾಗಲಿದ್ದು, ಖರೀದಿಸಲು ಮನಸ್ಸು ಮಾಡಬಹುದು ಎಂದು ಹೇಳಬಹುದು.

ಕಲರ್ & ವೈಶಿಷ್ಟ್ಯಗಳು:
ಪೋಲಾರ್ ವೈಟ್, ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ಟೀಲ್ ಬ್ಲೂ, ಫಿಯರಿ ರೆಡ್ ಮತ್ತು ಸ್ಪಾರ್ಕ್ ಗ್ರೀನ್ ಎಂಬ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರ್ಯಾಂಡ್ i10 ನಿಯೋಸ್ ಫೇಸ್‌ಲಿಫ್ಟ್‌ ಖರೀದಿಗೆ ಲಭ್ಯವಿದೆ. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಎಂಜಿನ್ ಕಾರ್ಯಕ್ಷಮತೆ:
ಹ್ಯುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 82 bhp ಗರಿಷ್ಠ ಪವರ್ ಮತ್ತು 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಜೊತೆಗೆ, 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ನೀಡಲಾಗುತ್ತದೆ. ಇದಲ್ಲದೆ, ಹ್ಯುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಆವೃತ್ತಿಯು CNG ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಸಿಎನ್‌ಜಿ ರೂಪಾಂತರವು ಗರಿಷ್ಠ 69 hp ಗರಿಷ್ಠ ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಒಳ್ಳೆಯ ವಿಚಾರವೆಂದರೆ ಸಿಎನ್‌ಜಿ ಇಂಧನದಲ್ಲಿ ಚಲಿಸುವಾಗ ಪವರ್ ಉತ್ಪಾದನೆಯು ತುಂಬಾ ಕಡಿಮೆಯಿದ್ದರೂ, ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನಿರ್ವಹಣಾ ವೆಚ್ಚವು ತುಂಬಾ ಅಗ್ಗ ಎಂದು ಹೇಳಬಹುದು. ಹುಂಡೈ ಗ್ರಾಂಡ್ i10 ನಿಯೋಸ್‌ ಫೇಸ್‌ಲಿಫ್ಟ್ ಆವೃತ್ತಿ ಮಾರುಕಟ್ಟೆಗೆ ಬಂದ ಮೇಲೆ ಅದರ ಪ್ರತಿಸ್ಪರ್ಧಿ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ.

ಹ್ಯುಂಡೈ ಇಂಡಿಯಾ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಆದರೆ, ಬೆಲೆ ವಿವರದ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಕಾರು ಗ್ರಾಹಕರ ಕೈಗೆಟುಕುವ ಬೆಲೆಗೆ ಖರೀದಿಗೆ ಸಿಗಬಹುದು. ಈ ಕಾರಿನ ಆರಂಭಿಕ ಬೆಲೆ ಸುಮಾರು 5.50 ಲಕ್ಷ ರೂ. ಇರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಮತ್ತು ಮಾರುತಿ ಸುಜುಕಿ ಸ್ವಿಫ್ಟ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Hyundai grand i10 nios facelift launched india january 20
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X