ಕಾರು ಮಾರಾಟದಲ್ಲಿ ಟಾಟಾವನ್ನು ಹಿಂದಿಕ್ಕಿ ಮತ್ತೆ ಎರಡನೇ ಸ್ಥಾನಕ್ಕೇರಿದ ಹ್ಯುಂಡೈ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ತನ್ನ 2023ರ ಜನವರಿ ತಿಂಗಳಿನ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಕಾರು ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಕೊರಿಯನ್ ವಾಹನ ತಯಾರಕರಾದ ಹ್ಯುಂಡೈ ಕಳೆದ ತಿಂಗಳು ಉತ್ತಮ ಬೆಳವಣಿಗೆಯನ್ನು ಪಡೆದುಕೊಂಡಿದೆ.

2023ರ ಜನವರಿ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 50,106 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ತಿಂಗಳು ಹ್ಯುಂಡೈ ಕಂಪನಿಯು 12,170 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ತಿಂಗಳು ಹ್ಯುಂಡೈ ಕಂಪನಿಯು 62,276 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಹ್ಯುಂಡೈ ಕಂಪನಿಯು 2022ರ ಡಿಸೆಂಬರ್ ತಿಂಗಳಿನಲ್ಲಿ 44,022 ಯುನಿಟ್‌ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13.8 ರಷ್ಟು ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ.

ಕಾರು ಮಾರಾಟದಲ್ಲಿ ಟಾಟಾವನ್ನು ಹಿಂದಿಕ್ಕಿ ಮತ್ತೆ ಎರಡನೇ ಸ್ಥಾನಕ್ಕೇರಿದ ಹ್ಯುಂಡೈ

ನ್ನು ರಫ್ತಿಗೆ ಸಂಬಂಧಿಸಿದಂತೆ, ಹ್ಯುಂಡೈ ಕಂಪನಿಯು ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ 9,405 ಯುನಿಟ್‌ಗಳನ್ನು ರಫ್ಟು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತು ಆದ 12,170 ಯುನಿಟ್‌ಗಳಿಗೆ ಹೋಲಿಸಿದರೆ ಶೇ.29.40 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು 2022ರ ಜನವರಿ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯ ಒಟ್ಟು (ದೇಶೀಯ ಮತ್ತು ರಫ್ತು ಸೇರಿದಂತೆ) 53,427 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಕಳೆದ ತಿಂಗಳು ಹ್ಯುಂಡೈ ಕಂಪನಿಯು ಒಟ್ಟು 62,276 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಶೇಕಡಾ 16.56 ರಷ್ಟು ಬೆಳವಣಿಗೆನ್ನು ಸಾಧಿಸಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತರುಣ್ ಗಾರ್ಗ್ ಅವರು ಮಾತನಾಡಿ, ನಾವು 2023ರ ಜನವರಿ ತಿಂಗಳಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುವ ಮೂಲಕ ಉತ್ತಮ ಪ್ರಾರಂಭ ಸಿಕ್ಕಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಹ್ಯುಂಡೈ IONIQ 5 ಎಲೆಕ್ಟ್ರಿಕ್ ಕಾರು ಹೊಸ ಬಿಡುಗಡೆಯು ಹೆಚ್ಚಿನ ಗ್ರಾಹಕರಿಗೆ ಉತ್ಸಾಹವನ್ನು ಉಂಟುಮಾಡಿದ್ದು, ಭಾರತೀಯ ಮಾರುಕಟ್ಟೆಗೆ ಬೆಂಚ್‌ಮಾರ್ಕ್ ಎಲೆಕ್ಟ್ರಿಕ್ ವಾಹನಗಳನ್ನು ತರುವ ನಮ್ಮ ಬದ್ಧತೆಯನ್ನು ಬಲಪಡಿಸುವಂತೆ ಹೆಚ್ಚು ಬುಕಿಂಗ್ ಗಳು ದಾಖಲಾಗಿದೆ ಎಂದು ಹೇಳಿದರು.

ಸೂಪರ್ ಪರ್ಫಾರ್ಮರ್ ಎಸ್‌ಯುವಿಗಳಾಗಿ, ಟ್ಯೂಸಾನ್, ಕ್ರೆಟಾ, ವೆನ್ಯೂ, ಅಲ್ಕಾಜರ್ ಮತ್ತು ಕೋನಾ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಉತ್ತಮವಾಗಿ ಮಾರಾಟವಾಗುತ್ತಿದೆ. ಕೆಲವೇ ದಿನಗಳ ಹಿಂದೆ, ಹ್ಯುಂಡೈ ಭಾರತದಲ್ಲಿ ಫೇಸ್‌ಲಿಫ್ಟ್ ಮಾಡಿದ ಗ್ರಾಂಡ್ i10 ನಿಯೋಸ್ ಮತ್ತು ಔರಾ ಕಾರುಗಳನ್ನು ಬಿಡುಗಡೆಗೊಳಿಸಿತು. ಭಾರತದಲ್ಲಿ ಹ್ಯುಂಡೈ, ಬಹುನಿರೀಕ್ಷಿತ ಔರಾ ಫೇಸ್‌ಲಿಫ್ಟ್ ಕಾರನ್ನು ಪಾರಂಭಿಕ ಬೆಲೆ 6.29 ಲಕ್ಷ ರೂ.ಗಳಲ್ಲಿ ಬಿಡುಗಡೆಗೊಳಿಸಿತು. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 ಟೋಕನ್ ಮೊತ್ತಕ್ಕೆ ಬುಕಿಂಗ್ ಪ್ರಾರಂಭವಾಗಿದೆ.

ಇನ್ನು ಹ್ಯುಂಡೈ ಇಂಡಿಯಾ ತನ್ನ ಐ20 ಎನ್ ಲೈನ್ ಕಾರಿನ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಸ್ಪೋರ್ಟಿಯರ್ ಆವೃತ್ತಿಯಾದ ಐ20 ಎನ್ ಲೈನ್ ಬೆಲೆಯು ರೂ.16,500 ವರೆಗೂ ಹೆಚ್ಚಿಸಿದೆ. ಈ ಹ್ಯುಂಡೈ ಐ20 ಎನ್ ಲೈನ್ ಕಾರಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ಒಂದೇ ರೀತಿ ಹೆಚ್ಚಿಸಿದೆ. ಬೆಲೆ ಏರಿಕೆ ಬಳಿಕ ಹ್ಯುಂಡೈ ಐ20 ಎನ್ ಲೈನ್ (Hyundai i20 N Line) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.16 ಲಕ್ಷವಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹ್ಯುಂಡೈ ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹುಂಡೈ ಕಂಪನಿಯು ನವೀಕರಿಸಿದ ಕ್ರೆಟಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಮೋಟಾರ್ ಇಂಡಿಯಾ 2023ರ ಆಟೋ ಎಕ್ಸ್‌ಪೋದಲ್ಲಿ ಹೆಚ್ಚು ನಿರೀಕ್ಷಿತ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಅನಾವರಣಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿತ್ತು.

ಆದರೆ ದಕ್ಷಿಣ ಕೊರಿಯಾದ ಆಟೋ ದೈತ್ಯನ ಬೂತ್‌ಗೆ ಭೇಟಿ ನೀಡಿದ ನಂತರ ಮತ್ತು ಕ್ರೆಟಾ ಫೇಸ್‌ಲಿಫ್ಟ್ ಕಾರ್ ಇರಲಿಲ್ಲ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಈ ವರ್ಷ ಪಾದಾರ್ಪಣೆ ಮಾಡುವುದಿಲ್ಲ, ಬದಲಿಗೆ ಅದು ಮುಂದಿನ ವರ್ಷ 2024 ರಲ್ಲಿ ಬರಲಿದೆ ಎಂದು ಇದೀಗ ಹೇಳಲಾಗುತ್ತಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಪ್ರಕಾರ, ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಮತ್ತು ಈ ವಿಳಂಬಕ್ಕೆ ಕಾರಣವೆಂದರೆ ಕಂಪನಿಯು ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಹನಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ವಾಹನವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

Most Read Articles

Kannada
English summary
Hyundai reclaim indias no 2 automaker position car sales january 2023 details in kannada
Story first published: Thursday, February 2, 2023, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X