ಕೊನೆಗೂ ರೋಡಿಗಿಳಿದ ಮಾರುತಿ ಸುಜುಕಿ ಜಿಮ್ನಿ: ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರ ಬಂದಾ
ದೇಶದ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಆಫ್‌ರೋಡ್ ಎಸ್‌ಯುವಿ ಮಾರುತಿ ಸುಜುಕಿ ಜಿಮ್ನಿಯ (Maruti Suzuki Jimny) ಮೊದಲ ಹಂತದ ಡೆಲಿವರಿ ಆರಂಭವಾಗಿದೆ. ಮಾರುತಿ ಸುಜುಕಿ ಕಂಪನಿಯು 2023 ರ ಆಟೋ ಎಕ್ಸ್‌ಪೋ ದಲ್ಲಿ ಮಾರುತಿ ಸುಜುಕಿ ಜಿಮ್ನಿ ಕಾರನ್ನು ಮೊದಲ ಬಾರಿಗೆ ರಿವೀಲ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಆಟೋ ಎಕ್ಸ್‌ಪೋ 2023 ರಲ್ಲಿ ರಿವೀಲ್ ಮಾಡಿದ ಕೂಡಲೇ ಇದರ ಬುಕಿಂಗನ್ನು ಆರಂಭಿಸಿದ್ದರು. ಇದರ ಬೆಲೆ ಎಷ್ಟೆಂದು ತಿಳಿಯುವುದಕ್ಕೂ ಮೊದಲೇ ಸುಮಾರು 30 ಸಾವಿರ ಬುಕಿಂಗನ್ನು ಗಳಿಸಿ ಎಲ್ಲರ ಗಮನ ಸೆಳೆದಿತ್ತು. ಇದರ ಮೂಲಕವೇ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನು ಉಂಟು ಮಾಡುವ ಸೂಚನೆಯನ್ನು ನೀಡಿತ್ತು.

ಮಾರುತಿ ಸುಜುಕಿ ಕಂಪನಿಯು ಔದ್ಯೋಗಿಕವಾಗಿ ಜಿಮ್ನಿ ಕಾರಿನ ವೈಟಿಂಗ್ ಪಿರಿಯಡನ್ನು ತಿಳಿಸಿಲ್ಲವಾದರೂ, ಇದರ ಬೆಲೆಯನ್ನು ಘೊಷಣೆ ಮಾಡಿದ ನಂತರ ದೇಶದಾದ್ಯಂತ ಹೊಸ ಕಾಂಪಾಕ್ಟ್ ಆಫ್‌ರೊಡ್ ಎಸ್‌ಯುವಿಯ ಡೆಲಿವರಿಯನ್ನು ನೀಡುತ್ತಿರುವುದು ಜಿಮ್ನಿ ಪ್ರೀಯರ ಮೊಗದಲ್ಲಿ ಸಂತಸ ಮೂಡಲು ಕಾರಣವಾಗಿದೆ. ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾರುಜಿ ಸುಜುಕಿ ಜಿಮ್ನಿಯ ಮೊದಲ ಡೆಲಿವರಿಯನ್ನು ಪಂಜಾಬ್‌ನಲ್ಲಿ ನೀಡಿದ್ದು ಗ್ರಾನೈಟ್ ಗ್ರೇ ಬಣ್ಣದ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವುದನ್ನು ನಾವು ವಿಡಿಯೊದಲ್ಲಿ ಕಾಣಬಹುದಾಗಿದೆ. ಕಾರಿನ ಡೆಲಿವರಿಯನ್ನು ಪಡೆದುಕೊಳ್ಳಲು ಕುಟುಂಬ ಸಮೇತರಾಗಿ ಬಂದಿದ್ದ ಜಿಮ್ನಿಯ ಮೊದಲ ಗ್ರಾಹಕರು ಗ್ರೇ ಬಣ್ಣದ ಜಿಮ್ನಿ ಕಾರನ್ನು ನಗು ಮುಖದೊಂದಿಗೆ ಮನೆಗೆ ಕೊಂಡೊಯ್ದರು.

ಭಾರತದ ಮಾರುಕಟ್ಟೆಯು 5 ಡೋರ್ ಇರುವ ಜಿಮ್ನಿಯನ್ನು ಸ್ವಾಗತಿಸಲು ಸಿದ್ದವಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ವಿದೇಶದಲ್ಲಿ ಜಿಮ್ನಿಯ 3 ಡೋರ್ ಉಳ್ಳ ಆವೃತ್ತಿ ಇದ್ದು, ಭಾರತದಲ್ಲಿ ಇದು ಮೊದಲ ಬಾರಿಗೆ 5 ಡೋರ್‌ಗಳೊಂದಿಗೆ ಬಿಡುಗಡೆಯಾಗಿದೆ ಎಂಬುವುದು ಇದರ ಮತ್ತೊಂದು ವಿಶೇಷ.
ಮಾರುತಿ ಸುಜುಕಿ ಜಿಮ್ನಿಯು 1.5 ಲೀಟರ್ ಫೋರ್ ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ವ್ಯವಸ್ಥೆಯಲ್ಲಿ ಈ ಕಾರು ಲಭ್ಯವಿದೆ.
1.5 ಲೀಟರ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ಮಾರುತಿ ಜಿಮ್ನಿಯು ಒಂದೊಳ್ಳೆ ಪವರ್ ಅನ್ನು ಸಹ ಉತ್ಪಾದಿಸುತ್ತದೆ. ಜಿಮ್ನಿಯು 104.8 ಪಿಎಸ್ ಹಾಗೂ 134..2 ಎನ್‌ಎಮ್ ಟಾರ್ಕನ್ನು ಹೊರಹಾಕುತ್ತದೆ. ಒಂದೊಳ್ಳೆ ಆಫ್‌ರೋಡ್ ಹೋಗಲು ಈ ಜಿಮ್ನಿಯು ಹೇಳಿ ಮಾಡಿಸಿದಂತಿದೆ ಎಂದು ಹೇಳಿದರೆ ತಪ್ಪಾಗಲಾರದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್


Click it and Unblock the Notifications