ಭಾರತದಲ್ಲಿ 'Jeep ಕಂಪಾಸ್' ಪೆಟ್ರೋಲ್ ರೂಪಾಂತರ ಯುಗಾಂತ್ಯ: ಅಧಿಕೃತ ಹೇಳಿಕೆ

ಭಾರತದ ಮಾರುಕಟ್ಟೆಯಲ್ಲಿ ಜೀಪ್ (Jeep) ಕಂಪನಿ ಕಾರುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಆದರೀಗ ಬೇಸರದ ಸಂಗತಿಯೊಂದು ಹೊರ ಬಿದ್ದಿದೆ. ಪ್ರಮಖವಾಗಿ ಮಾರಾಟ ಮಾಡಿವ 'ಕಂಪಾಸ್' ಎಸ್‌ಯುವಿಯ ಪೆಟ್ರೋಲ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಕಂಪನಿ ಬಿಡುಗಡೆ ಮಾಡಿದೆ.

ಈ ವಾರದಲ್ಲಿ ಆರಂಭದಲ್ಲಿ 'ಜೀಪ್' ಕಂಪನಿ, ದೇಶದಲ್ಲಿ ಕಂಪಾಸ್ ಪೆಟ್ರೋಲ್ ರೂಪಾಂತರವನ್ನು ನಿಲ್ಲಿಸುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ, ಅದು ಖಚಿತವಾಗಿದೆ. ಇನ್ಮುಂದೆ ಕಂಪಾಸ್ ಡಿಸೇಲ್ ರೂಪಾಂತರಗಳು ಮಾತ್ರ ಖರೀದಿಗೆ ಸಿಗುತ್ತದೆ. ಬಹುತೇಕ ಕಂಪನಿಗಳು, ಈಗಾಗಲೇ ಹೊಸದಾದ ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಆದರೆ, ಕಂಪನಿಯು ಕಂಪಾಸ್ ಕಾರನ್ನು ಸ್ಥಗಿತಗೊಳಿಸಿರುವುದು ವಿಪರ್ಯಾಸವೇ ಸರಿ.

ಭಾರತದಲ್ಲಿ Jeep ಕಂಪಾಸ್ ಪೆಟ್ರೋಲ್ ರೂಪಾಂತರ ಯುಗಾಂತ್ಯ: ಅಧಿಕೃತ ಹೇಳಿಕೆ

ಭಾರತದಲ್ಲಿ ಏಪ್ರಿಲ್ 1ರಿಂದ ಎಮಿಷನ್ ಮಾನದಂಡಗಳು ಜಾರಿಯಾದ ಹಿನ್ನೆಲೆ, ಜೀಪ್ ಅದನ್ನು ಪೂರೈಸಲು ವಿಫಲವಾಗಿದೆ ಎಂದು ಈಗಾಗಲೇ ಸುದ್ದಿಯಾಗಿತ್ತು. ಇದರಿಂದ ಕಂಪಾಸ್ ಪೆಟ್ರೋಲ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಸದ್ಯ, ಕಂಪನಿ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಈ ಮೂಲಕ ಕಂಪಾಸ್ ಪೆಟ್ರೋಲ್ ವೇರಿಯೆಂಟ್ ಯುಗಾಂತ್ಯವಾಗಿದೆ.

ಕಂಪನಿಯು ಅಧಿಕೃತ ಹೇಳಿಕೆಯಲ್ಲಿ 'ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಡೀಸೆಲ್ ಪವರ್‌ಟ್ರೇನ್‌ ಭಾರೀ ಬೇಡಿಕೆ ಹೊಂದಿರುವುದರಿಂದ ಅದನ್ನು ಮುಂದಿವರಿಸಲಾಗುತ್ತದೆ. ಗ್ರಾಹಕರು ಹಾಗೂ ಮಾರುಕಟ್ಟೆಯ ಆದ್ಯತೆಗೆ ಅನುಗುಣವಾಗಿ ಎಂಜಿನ್, ಇಂಧನ ಆಯ್ಕೆ ಬಗ್ಗೆ ಅಧ್ಯಯನ ನಡೆಸುತ್ತೇವೆ' ಎಂದು ಹೇಳಿದೆ. ಮಾರುಕಟ್ಟೆಯಲ್ಲಿ ಸ್ಥಗಿತಗೊಂಡ ಕಂಪಾಸ್ ಪೆಟ್ರೋಲ್ ರೂಪಾಂತರ 163 bhp ಪವರ್ ಉತ್ಪಾದಿಸುವ 1.4 ಲೀಟರ್ ಫೋರ್ ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿತ್ತು.

ಜೀಪ್ ಕಂಪಾಸ್ ಎಸ್‌ಯುವಿ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ, ಅವುಗಳೆಂದರೆ, ಸ್ಪೋರ್ಟ್, ಲಿಮಿಟೆಡ್ ಹಾಗೂ ಮಾಡೆಲ್ ಎಸ್. ಸದ್ಯ, ಮಾರುಕಟ್ಟೆಯಲ್ಲಿರುವ ಡಿಸೇಲ್ ರೂಪಾಂತರ 2.0 ಲೀಟರ್ ಮಲ್ಟಿಜೆಟ್ ಡಿಸೇಲ್ ಎಂಜಿನ್ ಹೊಂದಿದ್ದು, 173 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.

ಬೆಲೆ ವಿಚಾರವಾಗಿ ಮಾತನಾಡುವುದಾದರೆ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಜೀಪ್ ಕಂಪಾಸ್ ಎಸ್‌ಯುವಿ ಡಿಸೇಲ್ ರೂಪಾಂತರ ಬೇರೆ ಕಂಪನಿ ಕಾರುಗಳಿಗೆ ಹೋಲಿಸಿದರೆ, ಕೊಂಚ ದುಬಾರಿ ಎಂದು ಹೇಳಬಹುದು. ಈ ಕಾರು, ರೂ.21.44 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಆರಂಭಿಕ ದರವನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿ ರೂ.31.64 ಲಕ್ಷ ಬೆಲೆಯನ್ನು ಪಡೆದಿದೆ.

ಜೀಪ್ ಕಂಪಾಸ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸುರಕ್ಷತೆಯ ದೃಷ್ಟಿಯಿಂದಲೂ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ರೋಲ್‌ಓವರ್ ಮಿಟಿಗೇಶನ್, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 360 ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಒಟ್ಟಾರೆ, ಜೀಪ್ ಕಂಪನಿ ಕಂಪಾಸ್ ಪೆಟ್ರೋಲ್ ರೂಪಾಂತರವನ್ನು ಸ್ಥಗಿತಗೊಳಿಸಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

More from DriveSpark

Article Published On: Saturday, May 20, 2023, 19:22 [IST]
English summary
Jeep compass petrol variants discontinue india official statement
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+