Kia Seltos: ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಎದುರಾಳಿಗಳಿಗೆ ಶುರುವಾಯ್ತು ಭೀತಿ!
ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿ ಕಿಯಾ (Kia) ಭಾರತದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಗಳಿಸಿದೆ. ಇತ್ತೀಚೆಗೆ ದೇಶೀಯ ಗ್ರಾಹಕರಿಗಾಗಿ ನವೀನ ವೈಶಿಷ್ಟ್ಯಗಳೊಂದಿಗೆ ಸೆಲ್ಟೋಸ್ (Seltos) ಫೇಸ್‌ಲಿಫ್ಟ್ ಅನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಖರೀದಿದಾರರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಇದರ ಬುಕ್ಕಿಂಗ್‌ನಲ್ಲಿ ದಾಖಲೆ ನಿರ್ಮಿಸಿದೆ.
ಕಿಯಾ ಇಂಡಿಯಾ (Kia India) ಕೇವಲ ಒಂದು ತಿಂಗಳಲ್ಲಿಯೇ ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ ಗಾಗಿ 31,716 ಬುಕ್ಕಿಂಗ್ ಸ್ವೀಕರಿಲಾಗಿದೆ ಎಂದು ಘೋಷಣೆ ಮಾಡಿದೆ. ನವೀಕರಿಸಿದ ಸೆಲ್ಟೋಸ್ ಕಾರಿನ ಮುಂಗಡ ಬುಕ್ಕಿಂಗ್‌ನ್ನು ಜುಲೈ 14ರಿಂದ ಪ್ರಾರಂಭಿಸಲಾಗಿತ್ತು. ಕಿಯಾ ಕಂಪನಿ 2019 ರಿಂದ, ಈವರೆಗೆ 5 ಲಕ್ಷ ಯುನಿಟ್ ಸೆಲ್ಟೋಸ್ ಮಾದರಿಗಳನ್ನು ಮಾರಾಟ ಮಾಡಿದೆ.

ನೂತನ ಕಿಯಾ ಸೆಲ್ಟೋಸ್ (2023) ರೂ.10.89 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸೆಲ್ಟೋಸ್ ಫೇಸ್‌ಲಿಫ್ಟ್ ಭರ್ಜರಿ ಬುಕ್ಕಿಂಗ್ ಸ್ವೀಕರಿಸಿರುವ ಬಗ್ಗೆ ಮಾತನಾಡಿರುವ ಕಿಯಾ ಇಂಡಿಯಾದ ಎಂಡಿ ಟೇ-ಜಿನ್ ಪಾರ್ಕ್, 'ಈ ಕಾರು ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್) ಒಳಗೊಂಡಂತೆ ಶಕ್ತಿಶಾಲಿ ಎಂಜಿನ್ ಪಡೆದಿದೆ. ಇದೇ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಳ್ಳುವುದಕ್ಕೆ ಕಾರಣವಾಗಿದೆ' ಎಂದು ಹೇಳಿದ್ದಾರೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಎಚ್‌ಟಿಇ, ಎಚ್‌ಟಿಕೆ ಹಾಗೂ ಎಚ್‌ಟಿಕೆ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು,133 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಟ್ರಾನ್ಸ್ಮಿಷನ್ (MT) ಹಾಗೂ CVT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ.
ಮತ್ತೊಂದು, 1.5 - ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 158 bhp ಗರಿಷ್ಠ ಪವರ್ ಮತ್ತು 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 ಸ್ವೀಡ್ ಕ್ಲಚ್‌ಲೆಸ್ ಮ್ಯಾನುವಲ್ (iMT), 7 ಸ್ವೀಡ್ DCT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
1.5 ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ, 114 bhp ಪವರ್, 250 Nm ಪೀಕ್ ಟಾರ್ಕ್ ಹೊರ ಹಾಕುತ್ತದೆ. 6 ಸ್ವೀಡ್ iMT ಅಥವಾ 6 ಸ್ವೀಡ್ AT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 17 kmpl ನಿಂದ 20.7 kmpl (ARAI) ಮೈಲೇಜ್ ನೀಡುತ್ತವೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ವೈಶಿಷ್ಟ್ಯ ಹಾಗೂ ವಿನ್ಯಾಸದ ಬಗ್ಗೆ ಮಾತನಾಡೋಣ. ಈ ಕಾರು, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್, ಡ್ಯುಯಲ್-ಝೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ. ಡಿಸೈನ್ ವಿಷಯದಲ್ಲೂ ಅತ್ಯುತ್ತಮವಾಗಿದ್ದು, ಎಲ್ಇಡಿ ಹೆಡ್‌ಲೈಟ್ಸ್, ನವೀಕರಣಗೊಂಡ ಬಂಪರ್ ಅನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರಿಗೆ ಸಾಟಿಯೇ ಇಲ್ಲ ಎಂದು ಹೇಳಬಹುದು. ಸುಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್) ಪಡೆದಿದೆ. ಇದರೊಟ್ಟಿಗೆ 6 ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್) ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಪಡೆದಿದೆ.
ಈ ಕಾರಿಗೆ ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಪೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರಸ್ ಸಿ3 ಏರ್‌ಕ್ರಾಸ್ ಒಳಗೊಂಡಂತೆ ಹಲವು ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇದೀಗ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕೇವಲ ಒಂದು ತಿಂಗಳು ಕಳೆಯುವುದರಲ್ಲಿ ಈ ಪರಿಪ್ರಮಾಣದಲ್ಲಿ ಬುಕ್ಕಿಂಗ್ ಪಡೆಯುತ್ತದೆ ಎಂಬುದನ್ನು ಯಾರು ಅಂದಾಜಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.


Click it and Unblock the Notifications








