ಮೊದಲಬಾರಿಗೆ ಕಿಯಾ ಕಾನ್ಸೆಪ್ಟ್ EV3 ಮಾದರಿ ಬಹಿರಂಗ: ವಿಶೇಷತೆಗಳೇನು? ಬಿಡುಗಡೆ ಯಾವಾಗ!
ಕಿಯಾ ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಹಿರಂಗಪಡಿಸಿದೆ. ಇದು ಕಾನ್ಸೆಪ್ಟ್ ಮಾದರಿಯಾಗಿದ್ದು, EV3 ಎಂದು ಹೆಸರಿಸಲಾಗಿದೆ. ಇದರ ಪರಿಚಯದೊಂದಿಗೆ Kia ತನ್ನ ಎಲೆಕ್ಟ್ರಿಕ್ ಶ್ರೇಣಿಯನ್ನು ವಿಸ್ತರಿಸಿದೆ. ಈ EV3 ಕಾನ್ಸೆಪ್ಟ್ ಅನ್ನು ಹೊಂದಿರುವ ಉತ್ಪಾದನಾ ಎಲೆಕ್ಟ್ರಿಕ್ SUV ಅನ್ನು 2024 ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಈಗಾಗಲೇ ಬಹಿರಂಗಪಡಿಸಿದ್ದ ಕಿಯಾದ EV9 ಮತ್ತು EV5 ವಿನ್ಯಾಸದ ಥೀಮ್‌ಗಳನ್ನು ಅನುಸರಿಸಿ, EV3 ಕಾನ್ಸೆಪ್ಟ್ ವಿನ್ಯಾಸವು ತುಸು ಆಧುನಿಕ ಡಿಸೈನ್ ಅನ್ನು ಒಳಗೊಂಡಿದೆ. ಕಿಯಾದ ಪ್ರಸ್ತುತ "ಆಪೋಸಿಟ್ಸ್ ಅಟ್ರಾಕ್ಟ್" ವಿನ್ಯಾಸವನ್ನು ಇದು ಪ್ರತಿಬಿಂಬಿಸುತ್ತದೆ. ಇಲ್ಲಿನ ಫೋಟೊಗಳನ್ನು ನೋಡಿದ್ರೆ ನಿಮಗೆ ಇನ್ನೂ ಪರಿಪೂರ್ಣವಾಗಿ ತಿಳಿಯುತ್ತದೆ. EV3 ಕಾನ್ಸೆಪ್ಟ್ ಕಿಯಾದ ಹಳೆ ಮಾದರಿಗಳಂತಿದ್ದರೂ ಹೊಸ ವಿನ್ಯಾಸವನ್ನು ಕೂಡ ಒಳಗೊಂಡಿದೆ.

EV3 ಕಾನ್ಸೆಪ್ಟ್ ಮಾದರಿಯು ಹುಂಡೈ-ಕಿಯಾ ಗ್ರೂಪ್‌ನ E-GMP ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಹೊಸ SUV EV6 ನಿಂದ ಬ್ಯಾಟರಿ ಬಿಟ್‌ಗಳನ್ನು ಎರವಲು ಪಡೆಯುವ ನಿರೀಕ್ಷೆಯೂ ಇದೆ. ಸಿಂಗಲ್ - ಮೋಟಾರ್ ಮತ್ತು ಡ್ಯುಯಲ್ - ಮೋಟರ್ ಫೋರ್ - ವೀಲ್ ಡ್ರೈವ್ ಪವರ್‌ಟ್ರೇನ್‌ಗಳನ್ನು ಸಹ ನಿರೀಕ್ಷಿಸಲಾಗಿದೆ.
ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ಕಾನ್ಸೆಪ್ಟ್ EV3 ಓವೆಲ್ ಆಕಾರದ ಸ್ಟೀರಿಂಗ್ ವೀಲ್, ತೇಲುವ ಸೆಂಟರ್ ಕನ್ಸೋಲ್ (ಫ್ಲೋಟಿಂಗ್ ಕನ್ಸೋಲ್), Kia ದ EV ಶ್ರೇಣಿಯಲ್ಲಿರುವ ಇತರ ವಾಹನಗಳಂತೆಯೇ ಡ್ಯಾಶ್ ಬೋರ್ಡ್‌ನಲ್ಲಿ ಬೃಹತ್ ಡ್ಯುಯಲ್-ಸ್ಕ್ರೀನ್ ಅನ್ನು ಹೊಂದಿದೆ. ಇನ್ನು ಬೆಂಚ್ ಮಾದರಿಯ ಹಿಂಭಾಗದ ಸೀಟಿನಿಂದ ಪ್ರಾಯೋಗಿಕತೆಯನ್ನು ವರ್ಧಿಸುತ್ತದೆ, ಈ ಬೆಂಚ್‌ಗಳನ್ನು ಮೇಲಕ್ಕೆ ಮಡಚಿದರೆ ಬೃಹತ್ ವಸ್ತುಗಳನ್ನು ಸಂಗ್ರಹಿಸುವಷ್ಟು ಜಾಗವನ್ನು ನೀಡುತ್ತದೆ.

ಹೊರಭಾಗದ ಡಿಸೈನ್ ಬಗ್ಗೆ ಹೇಳುವುದಾದರೆ, ಎಲ್‌ಇಡಿ ಹೆಡ್‌ಲೈಟ್‌ಗಳು EV5 ಅನ್ನು ಹೋಲುತ್ತವೆ, ಬಾನೆಟ್‌ನ ಪ್ರಮುಖ ಅಂಚಿನಲ್ಲಿ ಯಾವುದೇ ಪಟ್ಟಿಯಿಲ್ಲ ಜೊತೆಗೆ ಗ್ರಿಲ್ ಕೂಡ ಇಲ್ಲ. ಇಳಿಜಾರಿನ ರೂಫ್ ಸ್ಪಾಯ್ಲರ್‌ನಲ್ಲಿ ಕೊನೆಗೊಳ್ಳುತ್ತದೆ. ಇದು ರೇಕ್ ಮಾಡಿದ ಹಿಂಬದಿಯ ವಿಂಡ್‌ಸ್ಕ್ರೀನ್ ಮತ್ತು LED ಟೈಲ್‌ಲೈಟ್‌ಗಳ ಮೇಲೆ ಹಾದುಹೋಗುತ್ತದೆ.
ಕಾನ್ಸೆಪ್ಟ್ EV3 ಕ್ಯಾಬಿನ್ ಬಗ್ಗೆ ಹೇಳುವುದಾದ್ರೆ ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವ ವಾತಾವರಣವನ್ನು ಒದಗಿಸುತ್ತದೆ. ಮೃದುವಾದ ಮೂಡ್ ಲೈಟಿಂಗ್‌ನಿಂದ ಸಜ್ಜುಗೊಂಡಿದ್ದು, ಡ್ಯಾಶ್‌ಬೋರ್ಡ್‌ನ ಕ್ಲೀನ್ ಆಕಾರ ಮತ್ತು ಮೇಲ್ಮೈ ವಿಸ್ತಾರವಾದ ದೃಶ್ಯವನ್ನು ಹೊಂದಿದೆ. ಇದರ ಆಂಬಿಯೆಂಟ್ ಕೂಡ ಪ್ರಶಾಂತವಾದ ಒಳಾಗಂಣವನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

EV3 ಮೊದಲ ಬಾರಿಗೆ Kia ಕ್ಯಾಬಿನ್ ಒಳಗಿರುವವರಿಗೆ ಸಹಾಯ ಮಾಡಲು ತನ್ನ ವಾಹನಗಳಲ್ಲಿ AI ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ವೇಳಾಪಟ್ಟಿ ನಿರ್ವಹಣೆ, ರೂಟ್ ಆಪ್ಟಿಮೈಸೇಶನ್, ಪ್ರಯಾಣ ಯೋಜನೆ, ಮನರಂಜನೆ ಮತ್ತು ತುರ್ತು ಬೆಂಬಲದಂತಹ ದೈನಂದಿನ ಕಾರ್ಯಾಚರಣೆಗಳಿಗೆ AI ಸಹಾಯ ಮಾಡುತ್ತದೆ. ಇದು ಕೂಡ ಇತ್ತೀಚಿನ ಅದ್ಬುತ ಫೀಚರ್ ಎಂದು ಹೇಳಬಹುದು.
ಕಾನ್ಸೆಪ್ಟ್ EV3 ಎಲೆಕ್ಟ್ರಿಕ್ ಡ್ರೈವ್‌ಟ್ರೇನ್‌ನೊಂದಿಗೆ ಪ್ರಾಯೋಗಿಕತೆಯನ್ನು ಸಂಯೋಜಿಸುವ ಎಲೆಕ್ಟ್ರಿಕ್ C-ಸೆಗ್ಮೆಂಟ್ SUV ಗಾಗಿ ಕಿಯಾ ಗುರಿಯನ್ನು ಇದು ಪ್ರತಿನಿಧಿಸುತ್ತಿದೆ. Kia ಕಾನ್ಸೆಪ್ಟ್ EV3 ಬಿಡುಗಡೆಯ ಬಳಿಕ ಕಿಯಾದ ಪ್ರಮುಖ SUV ಆಗಲಿದ್ದು, EV9 ನ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಕಾಂಪ್ಯಾಕ್ಟ್ ರೂಪದಲ್ಲಿ ನೀಡುತ್ತದೆ. ಒಳಗಿರುವವರ ಜೀವನವನ್ನು ಸುಲಭಗೊಳಿಸಲು AI ಅನ್ನು ಸೇರಿಸಿರುವುದು ಮತ್ತೊಂದು ಅದ್ಬುತ ಸಂಗತಿಯೆಂದೇ ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications