Kia Cars: ಮೇಡ್ ಇನ್ ಇಂಡಿಯಾ ಕಾರುಗಳು.. ಕಿಯಾದಿಂದ ಐತಿಹಾಸಿಕ ಸಾಧನೆ

ಭಾರತದ ಮಾರುಕಟ್ಟೆಗೆ ಕೆಲವೇ ವರ್ಷಗಳ ಹಿಂದೆ, ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ 'ಕಿಯಾ' ಎಂಟ್ರಿ ಕೊಟ್ಟು, ತನ್ನ ವಿವಿಧ ಕಾರು ಮಾದರಿಗಳ ಮಾರಾಟದಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇದೀಗ, ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಿಯಾ (Kia) ಆಗಸ್ಟ್ 2019ರಲ್ಲಿ ಮಿಡ್ ಸೈಜ್ ಎಸ್‌ಯುವಿ ಸೆಲ್ಟೋಸ್ ಬಿಡುಗಡೆಯೊಂದಿಗೆ ದೇಶವನ್ನು ಪ್ರವೇಶಿಸಿತು. ಕೇವಲ ನಾಲ್ಕು ವರ್ಷ ಕಳೆಯುವುದರಲ್ಲಿ ಕೊರಿಯಾ ಮೂಲದ ಈ ಕಂಪನಿ, ಎರಡು ಲಕ್ಷ ಮೇಡ್ ಇನ್ ಇಂಡಿಯಾ ಕಾರುಗಳನ್ನು ರಫ್ತು ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಅಮೆರಿಕ, ಮೆಕ್ಸಿಕೋ ಹಾಗೂ ಏಷ್ಯಾ ಪೆಸಿಫಿಕ್ ದೇಶಗಳು ಸೇರಿದಂತೆ 95 ರಾಷ್ಟ್ರಗಳಿಗೆ ಕಾರುಗಳನ್ನು ರವಾನಿಸಿದೆ.

Kia Cars: ಮೇಡ್ ಇನ್ ಇಂಡಿಯಾ ಕಾರ್.. ಕಿಯಾದಿಂದ ಐತಿಹಾಸಿಕ ಸಾಧನೆ

ಕಿಯಾದ ರಫ್ತು ಮಾಡಿರುವ ಒಟ್ಟು ಕಾರುಗಳಲ್ಲಿ ಗರಿಷ್ಠ ಸಂಖ್ಯೆಯನ್ನು 'ಸೆಲ್ಟೋಸ್' ಮಾದರಿಯೇ ಆವರಿಸಿಕೊಂಡಿದೆ. ವಿವಿಧ ದೇಶಗಳಿಗೆ ಒಟ್ಟು 1,35,885 ಯುನಿಟ್ ರಫ್ತು ಮಾಡಲಾಗಿದ್ದು, 68% ಪಾಲನ್ನು ಹೊಂದಿದೆ. ಉಳಿದಂತೆ ಸೋನೆಟ್ ಮತ್ತು ಕ್ಯಾರೆನ್ಸ್ ಕಾರುಗಳು ನಂತರದ ಸ್ಥಾನದಲಿದ್ದು, ಕ್ರಮವಾಗಿ 54,406 ಹಾಗೂ 8,230 ಯುನಿಟ್ ರವಾನಿಸಲಾಗಿದೆ. ಕಿಯಾ, ಆಂಧ್ರ ಪ್ರದೇಶದಲ್ಲಿ ಅತಿದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಕಿಯಾ ಪೋರ್ಟ್‌ಫೋಲಿಯೊ ಕ್ಯಾರೆನ್ಸ್, ಸೋನೆಟ್, ಸೆಲ್ಟೋಸ್ ಜೊತೆಗೆ ಇವಿ6 ಮತ್ತು ಕಾರ್ನಿವಲ್ ಎಂಪಿವಿಯನ್ನು ಒಳಗೊಂಡಿದೆ. ಸೋನೆಟ್ ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದ್ದು, ರೂ.7.79 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಿಯಾ ಎಲೆಕ್ಟ್ರಿಕ್ ಕಾರು ವಿಭಾಗವನ್ನು ಬಲಪಡಿಸುತ್ತಿದ್ದು, ಇವಿ6 ಕೂಡ ಗ್ರಾಹಕರಿಗೆ ಲಭ್ಯವಿದೆ. ರೂ.65.95 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ಕಿಯಾ ಇಂಡಿಯಾದ ಚೀಫ್ ಸೇಲ್ ಹಾಗೂ ಬ್ಯುಸಿನೆಸ್ ಆಫೀಸರ್ ಮ್ಯುಂಗ್-ಸಿಕ್ ಸೊಹ್ನ್, 'ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಅತ್ಯಾಧುನಿಕ ಉತ್ಪಾದನಾ ಘಟಕದಿಂದ ಇಷ್ಟೊಂದು ಕಾರುಗಳನ್ನು ತಯಾರಿಸಲು ಸಾಧ್ಯವಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಬಂದಿದೆ. ಸೆಲ್ಟೋಸ್ ಈ ವಿಭಾಗದಲ್ಲಿ ಉತ್ತಮವಾಗಿ ಸೇಲ್ ಆಗುತ್ತಿದ್ದು, ರಫ್ತಿನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.

ಕಿಯಾ ಸೋನೆಟ್ ರೂ.7.79 ಲಕ್ಷದಿಂದ 14.89 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಒಟ್ಟು ಆರು ರೂಪಾಂತರಗಳಲ್ಲಿ ದೊರೆಯಲಿದೆ. 1-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 18.4 kmpl ಮೈಲೇಜ್ ನೀಡಲಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಏರ್ ಪ್ಯೂರಿಫೈಯರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಕಿಯಾ ಸೆಲ್ಟೋಸ್ ರೂ.10.89 ಲಕ್ಷದಿಂದ ರೂ.19.65 ಲಕ್ಷ ಬೆಲೆಯಲ್ಲಿ ಸಿಗಲಿದ್ದು, ಇದು 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಎಂಜಿನ್ ಹೊಂದಿದ್ದು, 20.8 kmpl ಮೈಲೇಜ್ ನೀಡಲಿದೆ. FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, 6 ಏರ್‌ಬ್ಯಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS, EBD ಹಿಲ್ ಅಸಿಸ್ಟ್, ಬ್ರೇಕ್ ಅಸಿಸ್ಟ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

ಕಿಯಾ ಕ್ಯಾರೆನ್ಸ್ ರೂ.10.45 ಲಕ್ಷದಿಂದ ರೂ.18.95 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಕಾರ್ನಿವಲ್ ಎಂಪಿವಿ ರೂ.30.99 ಲಕ್ಷದಿಂದ ರೂ.35.49 ಲಕ್ಷ ದರದಲ್ಲಿ ಸಿಗಲಿದೆ. ಇನ್ನು, ಕಿಯಾ ಎರಡು ಲಕ್ಷ ಮೇಡ್ ಇನ್ ಇಂಡಿಯಾ ಕಾರುಗಳನ್ನು ರಫ್ತು ಮಾಡಿರುವುದನ್ನು ಗಮನಿಸಿದಾಗ ಕಂಪನಿಯ ಜನಪ್ರಿಯತೆ ಎಷ್ಟಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಜೊತೆಗೆ ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮತ್ತಷ್ಟು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡಬಹುದು.

More from DriveSpark

Article Published On: Thursday, April 27, 2023, 15:59 [IST]
English summary
Kia india cross 2 lakh export milestone details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+