Kia: ರೇಂಜ್ ಆತಂಕ ಮರೆತುಬಿಡಿ: ಭಾರತದಲ್ಲಿ ಹೊಸ K-Charge ಉಪಕ್ರಮ ಪರಿಚಯಿಸಿದ 'ಕಿಯಾ'

ದೇಶದ ಪ್ರಮುಖ ಕಾರು ತಯಾರಕರಲ್ಲಿ ಒಬ್ಬರಾದ Kia ಇಂಡಿಯಾ, ಕೆ-ಚಾರ್ಜ್ (K-Charge) ಅನ್ನು ಅನಾವರಣಗೊಳಿಸಿದೆ. ಇದು 'MyKia' ಅಪ್ಲಿಕೇಶನ್‌ನಲ್ಲಿನ ಹೊಸ ಉಪಕ್ರಮವಾಗಿದ್ದು, ಬಳಕೆದಾರರಿಗೆ ರಾಷ್ಟ್ರವ್ಯಾಪಿ 1000 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ ಎಂದು ಕಿಯಾ ಇಂಡಿಯಾ ತಿಳಿಸಿದೆ.

Kia ಗ್ರಾಹಕರಿಗೆ ಮಾತ್ರವಲ್ಲದೆ ಇತರರಿಗೂ ಈ ಚಾರ್ಜಿಂಗ್ ನೆಟ್‌ವರ್ಕ್‌ಗೆ ಪ್ರವೇಶವನ್ನು ನೀಡುತ್ತಿದೆ. ಇವಿಗಳ ರೇಂಜ್ ಆತಂಕವನ್ನು ನಿವಾರಿಸುವಲ್ಲಿ ಭಾರತೀಯ EV ಬಳಕೆದಾರರಿಗೆ ಅಮೂಲ್ಯವಾದ ಸಹಾಯವನ್ನು ಒದಗಿಸುತ್ತದೆ. ಈ ಕಾರ್ಯತಂತ್ರದ ಕ್ರಮವು ಒಂದು ಬಳಕೆದಾರ ಸ್ನೇಹಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಲ್ಲಿ ವಿವಿಧ ಕಾರ್ಯಗಳನ್ನು ಕ್ರೋಢೀಕರಿಸುವ ಮೂಲಕ ಗ್ರಾಹಕ ಸೇವೆಗಳನ್ನು ಹೆಚ್ಚಿಸುತ್ತದೆ ಎಂದು ಕಿಯಾ ಹೇಳಿಕೊಂಡಿದೆ.

kia-introduces-new-k-charge-initiative-in-india

ಈ ಉಪಕ್ರಮವನ್ನು ಸಕ್ರಿಯಗೊಳಿಸಲು Kia ಇಂಡಿಯಾ ಸ್ಟಾಟಿಕ್, ಚಾರ್ಜ್‌ಝೋನ್, ರಿಲಕ್ಸ್ ಎಲೆಕ್ಟ್ರಿಕ್, ಲಯನ್ ಚಾರ್ಜ್ ಮತ್ತು ಇ-ಫಿಲ್ ಚಾರ್ಜಿಂಗ್ ಎಂಬ 5 ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳೊಂದಿಗೆ (CPO ಗಳು) ಸಹಕರಿಸಿದೆ. ಕಿಯಾ ತನ್ನ ಗ್ರಾಹಕರಿಗೆ ತಮ್ಮ ಚಾರ್ಜಿಂಗ್ ಸ್ಟೇಷನ್‌ಗಳ ಮೂಲಕ 3 ತಿಂಗಳ ಉಚಿತ ಚಾರ್ಜಿಂಗ್ ಅನ್ನು ನೀಡಲು ರಿಲಕ್ಸ್ ಎಲೆಕ್ಟ್ರಿಕ್‌ನೊಂದಿಗೆ ವಿಶೇಷ ಒಪ್ಪಂದವನ್ನು ಕೂಡ ಮಾಡಿಕೊಂಡಿದೆ.

ಆನ್‌ಬೋರ್ಡ್ ಮಾಡಿದ CPOಗಳು EV ಚಾರ್ಜಿಂಗ್ ಉದ್ಯಮದಲ್ಲಿ ಪ್ರವರ್ತಕರಾಗಿದ್ದಾರೆ. ಸಾಕಷ್ಟು ನೆಟ್‌ವರ್ಕ್‌ಗಳು, ಜಾಗತಿಕ ಉತ್ತಮ ಅಭ್ಯಾಸಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಒದಗಿಸುತ್ತವೆ. 'MyKia' ಅಪ್ಲಿಕೇಶನ್‌ನಲ್ಲಿ ಈ CPO ಗಳನ್ನು ಸಂಯೋಜಿಸುವುದು NumoCity ಟೆಕ್ನಾಲಜೀಸ್‌ನಿಂದ ಮಾಡಲ್ಪಟ್ಟಿದೆ. ಇವರು CMS ಸೇವೆಗಳ ಪ್ರಮುಖರಲ್ಲಿ ಒಬ್ಬರು.

kia-introduces-new-k-charge-initiative-in-india

ಹೊಸ ವೈಶಿಷ್ಟ್ಯಗಳು ಆಳವಾದ ತಂತ್ರಜ್ಞಾನ ಏಕೀಕರಣದ ಮೂಲಕ EV ಬಳಕೆದಾರರಿಗೆ ಹೆಚ್ಚುವರಿ ಅನುಕೂಲವನ್ನು ನೀಡುತ್ತವೆ. ಅವರ ಬೆರಳ ತುದಿಯಲ್ಲಿಯೇ ವ್ಯಾಪಕ ಶ್ರೇಣಿಯ EV ಸೇವೆಗಳನ್ನು ಪಡೆಯಲು ಅನುವು ಮಾಡಿಕೊತ್ತದೆ. ಮೇಡ್-ಇನ್ ಇಂಡಿಯಾ ಮ್ಯಾಪ್ ಸೇವಾ ಪೂರೈಕೆದಾರರ ಸಂವಾದಾತ್ಮಕ ನಕ್ಷೆಯ ಮೂಲಕ ಬಳಕೆದಾರರು ಚಾರ್ಜಿಂಗ್ ಸ್ಟೇಷನ್ ಅನ್ನು ವೀಕ್ಷಿಸಬಹುದು ಮತ್ತು ಪತ್ತೆ ಮಾಡಬಹುದು - Map My India.

K-ಚಾರ್ಜ್ ಮೂಲಕ, ಗ್ರಾಹಕರು ಚಾರ್ಜಿಂಗ್ ಸ್ಲಾಟ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದು, ಅವರ ಆದ್ಯತೆಗಳ ಆಧಾರದ ಮೇಲೆ ಒಂದನ್ನು ಪತ್ತೆ ಮಾಡಬಹುದು ಮತ್ತು ಅಪ್ಲಿಕೇಶನ್‌ನಲ್ಲಿನ ವ್ಯಾಲೆಟ್ ಸೇವೆಯನ್ನು ಬಳಸಿಕೊಂಡು ಅದೇ ಪ್ಲಾಟ್‌ಫಾರ್ಮ್ ಮೂಲಕ ಪಾವತಿಸಬಹುದು. ಬಳಕೆದಾರ ಸ್ನೇಹಿ ಕಾರ್ಯಚಟುವಟಿಕೆಗಳ ಶ್ರೇಣಿಯು EV ಚಾರ್ಜಿಂಗ್ ಅನ್ನು ಸರಳಗೊಳಿಸುತ್ತದೆ. ಹಾಗೆಯೇ ಬಹು ಬಾಹ್ಯ ಅಪ್ಲಿಕೇಶನ್‌ಗಳನ್ನು ಅವಲಂಬಿಸುವ ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಕಿಯಾ ಹೇಳಿದೆ.

kia-introduces-new-k-charge-initiative-in-india

ಕಿಯಾ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, ಕೆ-ಚಾರ್ಜ್ ನಮ್ಮ ಗ್ರಾಹಕರಿಗೆ ಕೇವಲ ಅನುಕೂಲಕರ ಉಪಕ್ರಮವಲ್ಲ, ಸಮರ್ಥನೀಯ ಚಲನಶೀಲತೆಯನ್ನು ಎಲ್ಲರಿಗೂ ಅನುಕೂಲಕರವಾಗಿ ಮತ್ತು ಪ್ರವೇಶಿಸುವಂತೆ ಮಾಡುವತ್ತ ಒಂದು ಹೆಜ್ಜೆಯಾಗಿದೆ. ತಂತ್ರಜ್ಞಾನವನ್ನು ನಾವು ಬಲವಾಗಿ ನಂಬುತ್ತೇವೆ. ಸಂಪೂರ್ಣ EV ಭವಿಷ್ಯದತ್ತ ಪರಿವರ್ತನೆಯು ಸುಗಮವಾಗಿರಬೇಕು ಎಂದರು.

ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸುವ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಭವಿಷ್ಯದಲ್ಲಿ ಹೊಸ CPOಗಳ ಆನ್‌ಬೋರ್ಡಿಂಗ್ ಮೂಲಕ ನೆಟ್‌ವರ್ಕ್ ವಿಸ್ತರಿಸಲಿದ್ದೇವೆ. ಈ ರೀತಿಯ ತಡೆರಹಿತ, ಬಳಕೆದಾರ ಸ್ನೇಹಿ ಪರಿಹಾರಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ನಮಗೆ ವಿಶ್ವಾಸವಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Thursday, December 7, 2023, 8:30 [IST]
English summary
Kia introduces new k charge initiative in india details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+