Kia Sales: 2022-23 FY ನಲ್ಲಿ ಶೇ44 ರಷ್ಟು ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ
ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕರಲ್ಲಿ ಒಂದಾಗಿರುವ Kia ಇಂಡಿಯಾ, FY 2022-23 ರಲ್ಲಿ ಶೇ44 ರಷ್ಟು ಬೆಳವಣಿಗೆಯನ್ನು ದಾಖಲಿಸುವ ಮೂಲಕ ಮತ್ತೊಮ್ಮೆ ಕಾರು ಮಾರಾಟದಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಭಾರತದಲ್ಲಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಕಂಪನಿಯು ಇತ್ತೀಚಿನ ತ್ರೈಮಾಸಿಕದಲ್ಲಿ 74,735 ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ 7.4 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರ್ಚ್ 2023 ರಲ್ಲಿ, Kia ದೇಶೀಯ ಮಾರುಕಟ್ಟೆಯಲ್ಲಿ 21,501 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ತನ್ನ ಎಲ್ಲಾ ಮಾದರಿಗಳ ಹೊರತಾಗಿ ಅತ್ಯಧಿಕವಾಗಿ ಸೋನೆಟ್ 8,677 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನಂತರ ಸೆಲ್ಟೋಸ್ 6,554 ಮತ್ತು ಕಾರೆನ್ಸ್ 6,102 ಯುನಿಟ್‌ಗಳೊಂದಿಗೆ ಎರಡು ಮತ್ತು ಮೂರನೆ ಸ್ಥಾನಗಳಲ್ಲಿವೆ.

ಅಂತರಾಷ್ಟ್ರೀಯ ರವಾನೆಗೆ ಬಂದರೆ, ಕಿಯಾ ಇಂಡಿಯಾ FY2023 ರಲ್ಲಿ 85,754 ಯುನಿಟ್‌ಗಳನ್ನು ರಫ್ತು ಮಾಡಿದೆ. ಆದರೆ ಮಾರ್ಚ್ 2023 ರಲ್ಲಿ ಮಾಸಿಕ ರಫ್ತು ಸಂಖ್ಯೆಗಳು ಕೇವಲ 6,200 ಯುನಿಟ್‌ಗಳಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ VP ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್, ಕಿಯಾ ಇಂಡಿಯಾದ ಯಶಸ್ಸು ದೇಶಾದ್ಯಂತ ಬ್ರ್ಯಾಂಡ್‌ನ ಬೆಳೆಯುತ್ತಿರುವ ಡೀಲರ್‌ಶಿಪ್‌ಗಳ ಜಾಲದಲ್ಲಿ ಪ್ರತಿಫಲಿಸುತ್ತಿರುವುದನ್ನು ಸ್ಟಷ್ಟವಾಗಿ ಕಾಣಬಹುದು ಎಂದರು.
ಸುಮಾರು 4 ವರ್ಷಗಳಲ್ಲಿ, Kia India ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಭಾರತದ 213 ನಗರಗಳಲ್ಲಿ 425 ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸಿದೆ. ಕಿಯಾ ಕಂಪನಿಯು ವಿಶ್ವ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ. ಕಿಯಾ ಇಂಡಿಯಾ ಇತ್ತೀಚೆಗೆ ನವೀಕರಿಸಿದ ಪವರ್‌ಟ್ರೇನ್ ಮತ್ತು ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್‌ಗಳಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ತನ್ನ ರಿಫ್ರೆಶ್ ಮಾಡಿದ RDE ಕಂಪ್ಲೈಂಟ್ ವಾಹನ ಶ್ರೇಣಿಯನ್ನು ಪರಿಚಯಿಸಿದೆ ಎಂದರು.

ಹಾಗೆಯೇ ಈಗ ಪರಿಚಯಿಸಿರುವ ಹೊಸ ವಾಹನಗಳು BS6 ಮಾನದಂಡಗಳ II ನೇ ಹಂತಕ್ಕೆ ಪರಿವರ್ತನೆಯೊಂದಿಗೆ ಸ್ವಚ್ಛವಾದ ಹೊರಸೂಸುವಿಕೆಗಾಗಿ ಭಾರತ ಸರ್ಕಾರದ ದೃಷ್ಟಿಗೆ ಹೊಂದಿಕೆಯಾಗಿದೆ ಎಂದು ತಿಳಿಸಿದರು. ನಮ್ಮ ಎಲ್ಲಾ ಮಾದರಿಗಳು ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸ, ತಂತ್ರಜ್ಞಾನದ ಅಳವಡಿಕೆಯೊಂದಿಗೆ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ಎದುರಿಸಲು ಸದಾ ಸಜ್ಜಾಗಿರುತ್ತದೆ. ಗ್ರಾಹಕರಲ್ಲಿ ನಮ್ಮ ಉತ್ಪನ್ನಗಳ ಮೇಲಿನ ನಂಬಿಕೆಯಿಂದಲೇ ಕಂಪನಿಯು ಯಶಸ್ವಿಯಾಗಿ ಮುನ್ನಡಿಯುತ್ತಿದೆ ಎಂದು ಹರ್ದೀಪ್ ಸಿಂಗ್ ಬ್ರಾರ್ ಹೇಳಿದರು.
ಕಿಯಾ ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಸುಮಾರು 3,00,000 ಯುನಿಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಯವರೆಗೆ, ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಎಂಬ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರ ಸ್ಥಾವರದಿಂದ 6.93 ಲಕ್ಷ ದೇಶೀಯ ಮಾರಾಟ ಮತ್ತು 1.96 ಲಕ್ಷ ರಫ್ತುಗಳನ್ನು ಒಳಗೊಂಡಂತೆ 8.89 ಲಕ್ಷ ರವಾನೆಗಳನ್ನು ಪೂರ್ಣಗೊಳಿಸಿದೆ.

ಕಿಯಾ ಪ್ರಪಂಚದಾದ್ಯಂತ 52,000 ಉದ್ಯೋಗಿಗಳು, 190 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಉಪಸ್ಥಿತಿ ಮತ್ತು ಆರು ದೇಶಗಳಲ್ಲಿ ಉತ್ಪಾದನಾ ಸೌಲಭ್ಯಗಳೊಂದಿಗೆ, ಕಂಪನಿಯು ಇಂದು ವರ್ಷಕ್ಕೆ ಸುಮಾರು ಮೂರು ಮಿಲಿಯನ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಿಯಾ ಎಲೆಕ್ಟ್ರಿಫೈಡ್ ಮತ್ತು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಯನ್ನು ಮುನ್ನಡೆಸುತ್ತಿದೆ. ಬೆಳೆಯುತ್ತಿರುವ ಚಲನಶೀಲತೆಯ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿರುವುದರ ಜೊತೆಗೆ ಗ್ರಾಹಕರ ಬೇಡಿಕೆಯಂತೆ ಮುನ್ನಡೆಯುತ್ತಿದೆ ಎಂದು ಕಿಯಾ ಇಂಡಿಯಾ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








