Kia Seltos 2.0: ಭರ್ಜರಿ ವೈಶಿಷ್ಟ್ಯಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾದ ಕಿಯಾ ಸೆಲ್ಟೋಸ್ 2.0
ಜನಪ್ರಿಯ ಕಾರು ತಯಾರಕಾ ಕಂಪನಿಯಾದ ಕಿಯಾ ಇಂಡಿಯಾ, ಇಂದು ಹೊಸ Kia Seltos 2.0 ಅನ್ನು ಬಿಡುಗಡೆ ಮಾಡಿದೆ. ಸದ್ಯ ಹೊಸ ಮಾದರಿಯು ಭಾರತದಲ್ಲಿ ರೂ. 10,89,900 (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಈ ಮಾದರಿಗೆ ಮೊದಲಿನಿಂದಲೂ ನಿರೀಕ್ಷೆಗಳಿದ್ದವು, ಇದೀಗ ಫೇಸ್‌ಲಿಫ್ಟ್ ಭಾಗವಾಗಿ ಯಾವೆಲ್ಲಾ ನವೀಕರಣಗಳನ್ನು ಪಡೆದಿದೆ ಇಲ್ಲಿ ನೋಡೋಣ.
ಹೊಸ ಸೆಲ್ಟೋಸ್ ಭಾರೀ ನಿರೀಕ್ಷಿತ SUV ಆಗಿದ್ದು, ಇದನ್ನು 18 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಟಾಪ್ ವೇರಿಯೆಂಟ್‌ಗಳಾದ ADAS- GT-ಲೈನ್ ಮತ್ತು X ಲೈನ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಎರಡರಲ್ಲೂ ಬರುತ್ತವೆ. ಇವುಗಳ ಬೆಲೆಗಳನ್ನು ನೋಡುವುದಾದರೆ ಕ್ರಮವಾಗಿ ರೂ. 19,79,900 ಹಾಗೂ ರೂ. 19,99,900 ಎಕ್ಸ್ ಶೋರೂಂ ಬೆಲೆಯಿದೆ.
| Ex-Showroom Prices (in Rs Lakh) | ||||||
| Trims | Gasoline 1.5 | Gasoline 1.5 T-GDI | Diesel | |||
| 6MT | IVT | 6iMT | 7DCT | 6iMT | 6AT | |
| HTE | 10.89 | - | - | - | 11.99 | - |
| HTK | 12.09 | - | - | - | 13.59 | - |
| HTK+ | 13.49 | - | 14.99 | - | 14.99 | - |
| HTX | 15.19 | 16.59 | - | - | 16.69 | 18.19 |
| HTX+ | - | - | 18.29 | 19.19 | 18.29 | - |
| GTX+ | - | - | - | 19.79 | - | 19.79 |
| X-Line | - | - | - | 19.99 | - | 19.99 |
ಹೊಸ ಸೆಲ್ಟೋಸ್ ಸ್ಪೋರ್ಟಿ ಪರ್ಫಾಮೆನ್ಸ್, ಮಸ್ಕುಲರ್ ಹೊರಭಾಗ, ಫ್ಯೂಚರಿಸ್ಟಿಕ್ ಕ್ಯಾಬಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬರುತ್ತದೆ. 15 ದೃಢವಾದ ಸುರಕ್ಷತಾ ವೈಶಿಷ್ಟ್ಯಗಳು (ಶ್ರೇಣಿಯಾದ್ಯಂತ ಸ್ಟ್ಯಾಂಡರ್ಡ್) ಮತ್ತು 17 ADAS ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯಗಳನ್ನು ಒಳಗೊಂಡಂತೆ 32 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, 26.04 cm (10.3 ಇಂಚಿನ) ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಮತ್ತು 26.03 cm (10.2 ಇಂಚಿನ) HD ಟಚ್‌ಸ್ಕ್ರೀನ್ ನ್ಯಾವಿಗೇಶನ್, ಡ್ಯುಯಲ್ ಝೋನ್ ಫುಲ್ಲೀ ಆಟೋಮ್ಯಾಟಿಕ್ ಏರ್ ಕಂಡೀಷನರ್, 18 ಇಂಚಿನ ಅಲಾಯ್ ವೀಲ್‌ಗಳು, ಪನಾರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಬಹು ನಿರೀಕ್ಷಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಎಂಜಿನ್ ಬಗ್ಗೆ ಹೇಳುವುದಾದರೆ, ಸ್ಮಾರ್ಟ್‌ಸ್ಟ್ರೀಮ್ G1.5 T-GDi ಪೆಟ್ರೋಲ್ ಎಂಜಿನ್‌ನೊಂದಿಗೆ ಇದುವರೆಗಿನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಎನ್ನಲಾಗಿದೆ. ಇದು 160PS ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೆಕ್ ಲೈನ್, ಜಿಟಿ ಲೈನ್ ಮತ್ತು ಎಕ್ಸ್-ಲೈನ್ ಎಂಬ ಮೂರು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮೂರು ಎಂಜಿನ್‌ಗಳು ಮತ್ತು ಐದು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಖರೀದಿದಾರರಿಗೆ ವ್ಯಾಪಕ ಆಯ್ಕೆಗಳನ್ನು ನೀಡುತ್ತದೆ.
ಸುರಕ್ಷತೆಯ ಕುರಿತು ಹೇಳುವುದಾದರೆ, ಹೊಸ ಕಿಯಾ ಸೆಲ್ಟೋಸ್ 17 ಸ್ವಾಯತ್ತ ವೈಶಿಷ್ಟ್ಯಗಳೊಂದಿಗೆ ಲೆವಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ಹೊಂದಿದೆ. ವಿವಿಧ ಬುದ್ಧಿವಂತ ವೈಶಿಷ್ಟ್ಯಗಳಿಗಾಗಿ 1 ಕ್ಯಾಮೆರಾ ಮತ್ತು 3 ರಾಡಾರ್‌ಗಳನ್ನು ಒಳಗೊಂಡಿದೆ, ಸುಧಾರಿತ ಫಾರ್ವರ್ಡ್ ಕೊಲಿಷನ್ ಅವಾಯ್ಡ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಸ್ಟಾಪ್ & ಗೋ ಜೊತೆಗೆ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಹೊಂದಿದೆ.

ಇವಿಷ್ಟೇ ಅಲ್ಲದೇ ಚಾಲಕ ಮತ್ತು ಪ್ರಯಾಣಿಕರಿಗೆ ಅತ್ಯಂತ ಸುರಕ್ಷತೆಯನ್ನು ಖಾತ್ರಿಪಡಿಸಲು 6 ಏರ್‌ಬ್ಯಾಗ್‌ಗಳು, ಈ ಅವಂತ್-ಗಾರ್ಡ್ ಸೂಟ್, HAC (ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಮತ್ತು VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್) ನಂತಹ ಸ್ಟ್ಯಾಂಡರ್ಡ್ 15 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಹೊಸ ಸೆಲ್ಟೋಸ್ ಅನ್ನು ಸುರಕ್ಷಿತ SUV ಗಳಲ್ಲಿ ಒಂದನ್ನಾಗಿ ತರಲಾಗಿದೆ.
ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಕಿಯಾ ಇಂಡಿಯಾ ಸಿಇಒ ಟೇ-ಜಿನ್ ಪಾರ್ಕ್, ಸುಧಾರಿತ ADAS ಲೆವಲ್ 2, ಉನ್ನತ ದರ್ಜೆಯ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನವೀನ ತಂತ್ರಜ್ಞಾನದೊಂದಿಗೆ ನಾವು ಇಂದಿನ ವಿವೇಚನಾಶೀಲ ಹೊಸ-ಯುಗದ ಗ್ರಾಹಕರೊಂದಿಗೆ ಅನುರಣಿಸುವ ಸ್ಪೂರ್ತಿದಾಯಕ ವಾಹನವನ್ನು ರಚಿಸಿದ್ದೇವೆ. ವ್ಯಾಪಕ ಶ್ರೇಣಿಯ ವಿಭಿನ್ನ ಆಯ್ಕೆಗಳು, ಆಕ್ರಮಣಕಾರಿ ಬೆಲೆಗಳು, ತಡೆರಹಿತ ಮಾಲೀಕತ್ವದ ಅನುಭವ, ಹೊಸ ಸೆಲ್ಟೋಸ್ ಸ್ಮಾರ್ಟೆಸ್ಟ್ ಡ್ರೈವಿಂಗ್ ಅನುಭವ ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಉತ್ತಮ ಖರೀದಿಯಾಗಿದೆ ಎಂದು ಹೇಳಿದರು.


Click it and Unblock the Notifications








