ಕೇವಲ ಎರಡೇ ತಿಂಗಳಲ್ಲಿ ಭೀಕರ ಬುಕಿಂಗ್ಸ್: ಹೊಸ ಅಲೆ ಎಬ್ಬಿಸಿದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್

ಕಿಯಾ ಇಂಡಿಯಾ ಕೇವಲ ಎರಡೇ ತಿಂಗಳಲ್ಲಿ ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ಗಾಗಿ ಗ್ರಾಹಕರಿಂದ ಬರೋಬ್ಬರಿ 50,000 ಬುಕ್ಕಿಂಗ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದೆ. ಹಾಗೆಯೇ ಕಂಪನಿಯು ಈ ತಿಂಗಳು 4,00,000 ದೇಶೀಯ ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ್ದು, ರಫ್ತು ಸೇರಿದಂತೆ 5,47,000 ಸೆಲ್ಟೋಸ್ ಕಾರುಗಳ ಮಾರಾಟಗಳನ್ನು ಪೂರ್ಣಗೊಳಿಸಿದೆ.

ಹೊಸ ಸೆಲ್ಟೋಸ್ ಒಟ್ಟು ಬುಕಿಂಗ್‌ಗಳಲ್ಲಿ ಶೇ77 ರಷ್ಟು ಅದರ ಉನ್ನತ ರೂಪಾಂತರಗಳಿಗೆ (HTX) ಬುಕಿಂಗ್‌ಗಳು ದಾಖಲಾಗಿವೆ. ಗಮನಾರ್ಹವಾಗಿ, ಎಲ್ಲಾ ಬುಕಿಂಗ್‌ಗಳಲ್ಲಿ ಶೇ47 ರಷ್ಟು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಹೊಂದಿರುವ ರೂಪಾಂತರಗಳಿಗಾಗಿ ಬುಕಿಂಗ್‌ಗಳು ಬಂದಿವೆ. ಇದು ಖರೀದಿದಾರರಲ್ಲಿ ಅತ್ಯಾಧುನಿಕ ಸುರಕ್ಷತೆ ಮತ್ತು ತಂತ್ರಜ್ಞಾನದ ವೈಶಿಷ್ಟ್ಯಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಸೂಚಿಸುತ್ತಿದೆ.

kia-seltos-50k-bookings-in-2-months

ಸೆಲ್ಟೋಸ್ ದೇಶೀಯವಾಗಿ ಮತ್ತು ಸುಮಾರು 100 ರಫ್ತು ಮಾರುಕಟ್ಟೆಗಳಲ್ಲಿ 5.47 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಕಿಯಾ ಇಂಡಿಯಾ ಜುಲೈ 21, 2023 ರಂದು ನವೀಕರಿಸಿದ ವಿನ್ಯಾಸ, ಸ್ಪೋರ್ಟಿಯರ್ ಪರ್ಫಾಮೆನ್ಸ್, ಮಸ್ಕುಲರ್ ಹೊರಭಾಗ, ಫ್ಯೂಚರಿಸ್ಟಿಕ್ ಕ್ಯಾಬಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಸೆಲ್ಟೋಸ್ ಅನ್ನು ಬಿಡುಗಡೆ ಮಾಡಿದೆ.

ವಾಹನವು 15 ದೃಢವಾದ ಸುರಕ್ಷತಾ ವೈಶಿಷ್ಟ್ಯಗಳು (ಶ್ರೇಣಿಯಾದ್ಯಂತ ಸ್ಟ್ಯಾಂಡರ್ಡ್) ಮತ್ತು 17 ADAS ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯಗಳನ್ನು ಒಳಗೊಂಡಂತೆ 32 ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸೆಲ್ಟೋಸ್ ಡ್ಯುಯಲ್ ಸ್ಕ್ರೀನ್ ಪನೋರಮಿಕ್ ಡಿಸ್ಪ್ಲೇ, ಡ್ಯುಯಲ್ ಝೋನ್ ಫುಲ್ಲಿ ಆಟೋಮ್ಯಾಟಿಕ್ ಏರ್ ಕಂಡೀಷನರ್, ಡ್ಯುಯಲ್ ಪೇನ್ ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ.

kia-seltos-50k-bookings-in-2-months

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಎಚ್‌ಟಿಇ, ಎಚ್‌ಟಿಕೆ ಹಾಗೂ ಎಚ್‌ಟಿಕೆ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು,133 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಟ್ರಾನ್ಸ್ಮಿಷನ್ (MT) ಹಾಗೂ CVT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ.

ಮತ್ತೊಂದು, 1.5 - ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 158 bhp ಗರಿಷ್ಠ ಪವರ್ ಮತ್ತು 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 ಸ್ವೀಡ್ ಕ್ಲಚ್‌ಲೆಸ್ ಮ್ಯಾನುವಲ್ (iMT), 7 ಸ್ವೀಡ್ DCT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

kia-seltos-50k-bookings-in-2-months

1.5 ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ, 114 bhp ಪವರ್, 250 Nm ಪೀಕ್ ಟಾರ್ಕ್ ಹೊರ ಹಾಕುತ್ತದೆ. 6 ಸ್ವೀಡ್ iMT ಅಥವಾ 6 ಸ್ವೀಡ್ AT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 17 kmpl ನಿಂದ 20.7 kmpl (ARAI) ಮೈಲೇಜ್ ನೀಡುತ್ತವೆ.

ಸೆಲ್ಟೋಸ್ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್-ಸಿಕ್ ಸೊಹ್ನ್, "ಸೆಲ್ಟೋಸ್ ಯುವ ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಆರಾಮದಾಯಕ ಚಾಲನಾ ಅನುಭವ ನೀಡಲಿದೆ. ವಿನ್ಯಾಸ ಮತ್ತು ತಂತ್ರಜ್ಞಾನದ ಅಂಶವು ಸಂಯೋಜಿಸಲ್ಪಟ್ಟಿದೆ. ಇದರ ಮೆಗಾ ಯಶಸ್ಸಿನ ಹಿಂದೆ ಇದು ಒಂದು ದೊಡ್ಡ ಕಾರಣವಾಗಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯ ವೇಗ ಹೆಚ್ಚಿಸಿದ್ದು, ಗ್ರಾಹಕರು ಹೆಚ್ಚು ಕಾಯಬೇಕಾಗಿಲ್ಲ ಎಂದರು."

kia-seltos-50k-bookings-in-2-months

ಈ ಕಾರಿಗೆ ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಪೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರಸ್ ಸಿ3 ಏರ್‌ಕ್ರಾಸ್ ಒಳಗೊಂಡಂತೆ ಹಲವು ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇದೀಗ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕೇವಲ ಒಂದು ತಿಂಗಳು ಕಳೆಯುವುದರಲ್ಲಿ ಈ ಪರಿಪ್ರಮಾಣದಲ್ಲಿ ಬುಕ್ಕಿಂಗ್ ಪಡೆಯುತ್ತದೆ ಎಂಬುದನ್ನು ಯಾರು ಅಂದಾಜಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

More from DriveSpark

Article Published On: Tuesday, September 19, 2023, 15:41 [IST]
English summary
Kia seltos 50k bookings in 2 months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+