Kia Seltos ಹೊಸ ದಾಖಲೆ... ಈ ಮಟ್ಟದ ಕ್ರೇಜ್ ಇರೋದು ಕಂಪನಿಗೂ ತಿಳಿದಿಲ್ಲ!

ಭಾರತದಲ್ಲಿ ಬಿಡುಗಡೆಯಾದ ಅತಿ ಕಡಿಮೆ ಅವಧಿಯಲ್ಲೇ ದಾಖಲೆಯ ಮಾರಾಟ ಕಂಡ SUV ಎಂಬ ಖ್ಯಾತಿಗೆ ಕಿಯಾ ಸೆಲ್ಟೋಸ್ ಪಾತ್ರವಾಗಿದೆ. ಬಿಡುಗಡೆಯಾದ ಕೇವಲ 46 ತಿಂಗಳುಗಳಲ್ಲಿ 5 ಲಕ್ಷದ ಗಡಿಯನ್ನು ತಲುಪಿರುವುದಾಗಿ ಕಂಪನಿ ತಿಳಿಸಿದೆ. ಈ ವಾಹನ ಕುರಿತ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೋಡೋಣ.

ಏಪ್ರಿಲ್ 2017 ರಲ್ಲಿ Kia ಭಾರತಕ್ಕೆ ಎಂಟ್ರಿ ಕೊಟ್ಟಿದ್ದು, ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯೊಂದಿಗೆ SUV ವಿಭಾಗಕ್ಕೂ ಲಗ್ಗಯಿಟ್ಟಿತು. ನಾಲ್ಕು ವರ್ಷಗಳ ಹಿಂದೆ, ಸೆಲ್ಟೋಸ್ ಅನಾವರಣದೊಂದಿಗೆ ಜಾಗತಿಕವಾಗಿ ಪಾದಾರ್ಪಣೆ ಮಾಡಿತು. ಎಸ್‌ಯುವಿ ವಿಭಾಗದಲ್ಲಿ ತ್ವರಿತವಾಗಿ ಗುರುತಿಸಿಕೊಂಡು, ಪ್ರತಿಸ್ಪರ್ಧಿಗಳಿಗೆ ತೀರ್ವ ಪೈಪೋಟಿ ನೀಡುತ್ತಾ ಬಂದಿದೆ. ವಿನ್ಯಾಸ, ಪರ್ಫಾಮೆನ್ಸ್, ತಂತ್ರಜ್ಞಾನದೊಂದಿಗೆ ಸೆಲ್ಟೋಸ್ ಗ್ರಾಹಕರನ್ನು ಸೆಳೆದಿದೆ.

Kia Seltos

ರಫ್ತು ಮತ್ತು ದೇಶೀಯ ಮಾರಾಟ ಸೇರಿದಂತೆ ಕಂಪನಿಗೆ ಶೇ 55 ರಷ್ಟು ಕೊಡುಗೆ ನೀಡುವ ಮೂಲಕ ಕಂಪನಿಯ ಯಶಸ್ಸಿನಲ್ಲಿ Kia Seltos ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ತಯಾರಾದ 1,35,885 ಯೂನಿಟ್‌ಗಳನ್ನು ಈಗಾಗಲೇ ಮಧ್ಯಪ್ರಾಚ್ಯ, ಆಫ್ರಿಕಾ, ದಕ್ಷಿಣ ಅಮೇರಿಕಾ, ಮೆಕ್ಸಿಕೋ ಮತ್ತು ಏಷ್ಯಾ ಪೆಸಿಫಿಕ್ ಸೇರಿದಂತೆ ಸುಮಾರು 100 ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಕಿಯಾ ಇಂಡಿಯಾದ ಎಂಡಿ ಮತ್ತು ಸಿಇಒ ಟೇ ಜಿನ್ ಪಾರ್ಕ್ ಮಾತನಾಡಿ, "ಸೆಲ್ಟೋಸ್‌ನ ಯಶಸ್ಸು ಅಸಾಧಾರಣವಾದ ಆಚರಣೆಯಾಗಿದೆ, ಸೆಲ್ಟೋಸ್‌ನೊಂದಿಗೆ ನಾವು ಕ್ರಾಂತಿಕಾರಿ ಡ್ರೈವಿಂಗ್ ಕಂಪ್ಯಾನಿಯನ್ ಅನ್ನು ರಚಿಸಿದ್ದೇವೆ. 5,00,000 ಕ್ಕೂ ಹೆಚ್ಚು ಮೌಲ್ಯಯುತ ಗ್ರಾಹಕರ ಗೌರವವನ್ನು ಗಳಿಸಿದೆ. ಸೆಲ್ಟೋಸ್‌ನ ಈ ಪ್ರಯಾಣವು ನಮಗೆ ನಂಬಲಾಗದಷ್ಟು ಭಾವನಾತ್ಮಕ ಕ್ಷಣವಾಗಿದೆ ಎಂದರು.

Kia Seltos

"2023 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 27,159 ಯುನಿಟ್‌ಗಳ ಒಟ್ಟು ಮಾರಾಟದೊಂದಿಗೆ, ಎಸ್‌ಯುವಿ ವಿಭಾಗದಲ್ಲಿ ಅನೇಕ ಹೊಸ ಆವಿಷ್ಕಾರಗಳಿದ್ದರೂ ಸಹ ಸೆಲ್ಟೋಸ್ ಮಾಸಿಕ ಸರಾಸರಿ 9,000 ಯುನಿಟ್‌ಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದೆ" ಈ ಮೂಲಕ ಸೆಲ್ಟೋಸ್ ಹೊಸ Gen-MZ ದೇಶದ ಗ್ರಾಹಕರ ಹೃದಯವನ್ನು ಗೆದ್ದಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಟಾಪ್ 2 ಮಧ್ಯಮ ಘಾತ್ರದ SUV ಆಗಿ ಹೊರಹೊಮ್ಮಿದೆ. 2019 ರಿಂದ, ಇದನ್ನು 'BadassbyDesign' ಎಂಬ ಸಾಂಪ್ರದಾಯಿಕ ಅಡಿಬರಹದ ಅಡಿಯಲ್ಲಿ ಮಾರಾಟ ಮಾಡಲಾಗಿದೆ. ಸೆಲ್ಟೋಸ್ ಕಿಯಾದ ನಾವೀನ್ಯತೆ, ಉತ್ಕೃಷ್ಟತೆ ಮತ್ತು ಅಸಾಧಾರಣ ಚಾಲನಾ ಅನುಭವವನ್ನು ನೀಡುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಿಯಾ ಇಂಡಿಯಾದ ಎಂಡಿ ಮತ್ತು ಸಿಇಒ ಟೇ-ಜಿನ್ ಪಾರ್ಕ್ ಹೇಳಿದರು.

Kia Seltos

ಕಿಯಾ ಇಂಡಿಯಾ ಇಲ್ಲಿಯವರೆಗೆ ಭಾರತೀಯ ಮಾರುಕಟ್ಟೆಗೆ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ ಸೆಲ್ಟೋಸ್, ಕಾರ್ನಿವಲ್, ಸಾನೆಟ್, ಕ್ಯಾರೆನ್ಸ್ ಮತ್ತು EV6. ಕಿಯಾ ಇಂಡಿಯಾ ತನ್ನ ಅನಂತಪುರದ ಸ್ಥಾವರದಿಂದ 7 ಲಕ್ಷ ದೇಶೀಯ ಮಾರಾಟ ಮತ್ತು 2 ಲಕ್ಷಕ್ಕೂ ಹೆಚ್ಚು ರಫ್ತು ಸೇರಿದಂತೆ 8.89 ಲಕ್ಷ ರವಾನೆಗಳನ್ನು ಪೂರ್ಣಗೊಳಿಸಿರುವುದಾಗಿ ಕಂಪನಿ ತಿಳಿಸಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Monday, June 5, 2023, 17:09 [IST]
English summary
Road rage scooter rider smashed car mirror
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+