Kia Seltos: ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮೈಲೇಜ್ ಬಹಿರಂಗ, ಯಾರು ಇದನ್ನು ಲೆಕ್ಕಹಾಕಿರಲಿಲ್ಲ!

ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಕಿಯಾ (Kia) ಕಾರುಗಳು, ಭಾರತಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಇತ್ತೀಚೆಗೆ ಕಂಪನಿಯು ಸೆಲ್ಟೋಸ್ (Seltos) ಫೇಸ್‌ಲಿಫ್ಟ್ ಅನ್ನು ರೂ.10.89 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಸದ್ಯ, ಈ ಕಾರಿನ ರೂಪಾಂತರಗಳ ಮೈಲೇಜ್ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರಿನ HTE, HTK, HTK+ ಹಾಗೂ HTX ರೂಪಾಂತರಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, 133 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತವೆ. ಮ್ಯಾನುವಲ್ ಟ್ರಾನ್ಸ್ಮಿಷನ್ (MT) ಹೊಂದಿರುವ ಕಾರುಗಳು 17 kmpl, CVT ಗೇರ್ ಬಾಕ್ಸ್ ಪಡೆದಿರುವ ಕಾರುಗಳು 17.7 kmpl (ARAI) ಮೈಲೇಜ್ ನೀಡುತ್ತವೆ.

Kia Seltos: ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮೈಲೇಜ್ ಬಹಿರಂಗ, ಯಾರು ಇದನ್ನು ಲೆಕ್ಕಹಾಕಿರಲಿಲ್ಲ!

ಈ ಎಸ್‌ಯುವಿಯ HTK, HTK+, HTX+, GTX+ ಮತ್ತು X-ಲೈನ್ ರೂಪಾಂತರಗಳು 1.5-ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 158 bhp ಗರಿಷ್ಠ ಪವರ್, 253 Nm ಪೀಕ್ ಟಾರ್ಕ್ ಹೊರಹಾಕುತ್ತವೆ. 6 ಸ್ವೀಡ್ ಕ್ಲಚ್‌ಲೆಸ್ ಮ್ಯಾನುವಲ್ (iMT), 7 ಸ್ವೀಡ್ DCT ಗೇರ್ ಬಾಕ್ಸ್ ಹೊಂದಿವೆ. ರೂಪಾಂತರಗಳಿಗೆ ಅನುಗುಣವಾಗಿ 17.7 kmpl ರಿಂದ 17.9 kmpl ಮೈಲೇಜ್ ನೀಡುತ್ತವೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿಯ ಎಲ್ಲ ರೂಪಾಂತರಗಳು, 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. 114 bhp ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿವೆ. 6 ಸ್ವೀಡ್ iMT ಅಥವಾ 6 ಸ್ವೀಡ್ AT ಗೇರ್ ಬಾಕ್ಸ್ ಹೊಂದಿವೆ. iMT ಗೇರ್ ಬಾಕ್ಸ್ ಇರುವ ಕಾರುಗಳು 20.7 kmpl, AT ಆಯ್ಕೆಯೊಂದಿರುವ ಕಾರುಗಳು 19.1 kmpl ಮೈಲೇಜ್ ನೀಡುತ್ತವೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್‌, ಡ್ಯುಯಲ್-ಝೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಲೆಥೆರೆಟ್ ಅಪ್ಹೋಲ್‌ಸ್ಟರಿ, 360 ಡಿಗ್ರಿ ಕ್ಯಾಮೆರಾ ಮತ್ತು 8 ಇಂಚಿನ ಹೆಡ್ಸ್-ಅಪ್ ಡಿಸ್ಪ್ಲೇ ಸೇರಿದಂತೆ ಹತ್ತಾರು ಅತ್ಯಾಧುನಿಕ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ವಿನ್ಯಾಸ ದೃಷ್ಟಿಯಿಂದಲ್ಲೂ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯಾಧುನಿಕವಾಗಿದೆ. 5 ಆಸನ ಆಯ್ಕೆ ವ್ಯವಸ್ಥೆಯೊಂದಿರುವ ಈ ಕಾರು, ಆಕರ್ಷಕ ಎಲ್ಇಡಿ DRLs, ಎಲ್ಇಡಿ ಹೆಡ್‌ಲೈಟ್ಸ್ ಹೊಂದಿದೆ. ಜೊತೆಗೆ ನವೀಕರಣಗೊಂಡ ಬಂಪರ್ ಹಾಗೂ ರೇಡಿಯೇಟರ್ ಗ್ರಿಲ್ ಅನ್ನು ಪಡೆದಿದೆ. ಹಿಂಭಾಗದ ಲ್ಯಾಂಪ್ ಗಳನ್ನು ಬದಲಾಯಿಸಲಾಗಿದೆ. ಇವೆಲ್ಲ ಕಾರಣಗಳಿಗೆ ಈ ಕಾರು, ನೋಡುಗರನ್ನು ತನ್ನತ್ತ ಸೆಳೆಯುತ್ತದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಸುಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್) ಪಡೆದಿದೆ. ಈ ತಂತ್ರಜ್ಞಾನವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, 6 ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿದೆ.

ಜೊತೆಗೆ EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ISOFIX ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ ಹಾಗೂ ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಸೇಫ್ಟಿ ಸಲುವಾಗಿ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿಗೆ ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಪೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರಸ್ ಸಿ3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಸದ್ಯ, ಸೆಲ್ಟೋಸ್ ಮೈಲೇಜ್ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಗ್ರಾಹಕರಿಂದ ಮತ್ತಷ್ಟು ಹೆಚ್ಚಿನ ಬುಕ್ಕಿಂಗ್ ಪಡೆದುಕೊಳ್ಳುವ ಸಾಧ್ಯತೆಯಿದೆ.

More from DriveSpark

Article Published On: Wednesday, July 26, 2023, 12:39 [IST]
English summary
Kia seltos facelift mileage figures revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+