ಕೇವಲ 24 ಗಂಟೆಗಳಲ್ಲಿ ಭರ್ಜರಿ ಬುಕಿಂಗ್ಸ್ ಪಡೆದು ದಾಖಲೆಗಳನ್ನು ಪುಡಿಗಟ್ಟಿದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್
ಕಿಯಾ ಇಂಡಿಯಾ ಇತ್ತೀಚೆಗೆ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಮಧ್ಯಮ ಗಾತ್ರದ SUV ಅನ್ನು ಅನಾವರಣಗೊಳಿಸಿದೆ. ಹೊಸ 2023 ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಗಾಗಿ ಮುಂಗಡ ಬುಕ್ಕಿಂಗ್‌ಗಳು ಈಗ ತೆರೆದಿವೆ. ಬುಕಿಂಗ್ ತೆರೆದ ಕೇವಲ 24 ಗಂಟೆಗಳಲ್ಲಿ ದಾಖಲೆಯ ಬುಕಿಂಗ್‌ಗಳನ್ನು ಸ್ವೀಕರಿಸಿ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಿದೆ.
ಹೊಸ ಕಿಯಾ ಸೆಲ್ಟೋಸ್‌ಗಾಗಿ ಬುಕಿಂಗ್‌ಗಳು ಜುಲೈ 14, 2023 ರಂದು ಪ್ರಾರಂಭವಾಯಿತು. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ತಮ್ಮ ಹತ್ತಿರದ ಕಿಯಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ರೂ. 25,000 ಟೋಕನ್ ಮೊತ್ತಕ್ಕೆ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ವಿಷಯಕ್ಕೆ ಬಂದರೆ ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ 24 ಗಂಟೆಗಳ ಒಳಗೆ 13,424 ಪ್ರೀ-ಆರ್ಡರ್‌ಗಳೊಂದಿಗೆ ವಿಭಾಗದ ಅತ್ಯಧಿಕ ಮೊದಲ ದಿನದ ಬುಕಿಂಗ್‌ಗಳನ್ನು ದಾಖಲಿಸಿದೆ. ಇವುಗಳಲ್ಲಿ, 1,973 ಬುಕಿಂಗ್‌ಗಳನ್ನು K-ಕೋಡ್ ಬಳಸಿ ನೀಡಲಾಗುತ್ತದೆ, ಇದು ಹೊಸ ಸಂಭಾವ್ಯ ಖರೀದಿದಾರರಿಗೆ ಹೆಚ್ಚಿನ ಆದ್ಯತೆಯ ಮೇರೆಗೆ ವಿತರಣೆ ಮಾಡಲು ಮೀಸಲಿಡಲಾಗಿದೆ.
ಕಿಯಾ ಈ ಬುಕಿಂಗ್‌ಗಳೊಂದಿಗೆ ವಿಭಾಗದ ಅತ್ಯುತ್ತಮ ದಾಖಲೆಯನ್ನು ನಿರ್ಮಿಸಿದೆ. ಅಂದರೆ ಮಿಡ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಇತ್ತೀಚಿಗೆ ಇತರ ಬ್ರಾಂಡ್‌ಗಳಿಂದ ಬಿಡುಗಡೆಯಾದ ಕಾರುಗಳ ಮೊದಲ ದಿನದ ಬುಕಿಂಗ್‌ಗಳನ್ನು ಮೀರಿಸಿದೆ. ಉಳಿದಂತೆ ಮುಂದಿನ ತಿಂಗಳಿನಲ್ಲಿ ಹೊಸ ಫೇಸ್‌ಲಿಫ್ಟ್ ಬೆಲೆ ಬಹಿರಂಗಗೊಳಿಸಲಿದ್ದು, ಇದು ಹಳೆಯ ಮಾದರಿಗಿಂತ ಹೆಚ್ಚಿರಲಿದೆ ಎಂದು ತಿಳಿದುಬಂದಿದೆ.

ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟೇ ಜಿನ್ ಪಾರ್ಕ್ ಮಾತನಾಡಿ, "ಹೊಸ ಕಿಯಾ ಸೆಲ್ಟೋಸ್ ಹಳೆಯ ಸೆಲ್ಟೋಸ್‌ನ ಗೆಲುವಿನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದನ್ನು ನೋಡಲು ನಮಗೆ ಅತ್ಯಂತ ಹೆಮ್ಮೆಯಾಗಿದೆ. ಹೊಸ ಸೆಲ್ಟೋಸ್ ಇನ್ನೂ ಬೆಳೆಯುವ ವಿಶ್ವಾಸವಿದೆ ಎಂದು ಹೇಳಿದರು.
ಸದ್ಯ ಮಾರಾಟದಲ್ಲಿರುವ ಹಳೆಯ ಸೆಲ್ಟೋಸ್ ಕಿಯಾ ಇಂಡಿಯಾದ ಪ್ರಮುಖ ಮಾದರಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 5 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟದೊಂದಿಗೆ ಅದರ ಒಟ್ಟಾರೆ ವ್ಯಾಪಾರಕ್ಕೆ ಶೇ 50 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಕಿಯಾ ಸೆಲ್ಟೋಸ್ ತ್ವರಿತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಮಹತ್ವಾಕಾಂಕ್ಷೆಯ ವಾಹನವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ ಎಂದರು.

ಇನ್ನು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ನ ವಿತರಣೆಗಳು ಆಗಸ್ಟ್ 2023 ರಲ್ಲಿ ಪ್ರಾರಂಭವಾಗುತ್ತವೆ. ಇದರ ಕಾಯುವ ಅವಧಿಯು ರೂಪಾಂತರ ಮತ್ತು ಗ್ರಾಹಕರ ಸ್ಥಳವನ್ನು ಅವಲಂಬಿಸಿ ಎರಡರಿಂದ ಆರು ತಿಂಗಳವರೆಗೆ ಇರುತ್ತದೆ. ಹೊಸ ಕಿಯಾ ಸೆಲ್ಟೋಸ್‌ನಲ್ಲಿ 113 bhp 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 113 bhp 1.5-ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಬರುತ್ತದೆ.
ಇದು ಹೊಸ 158 bhp 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ, ಇದು ಅದರ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ SUV ಆಗಲಿದೆ. ಕಂಪನಿಯು ಎಂಜಿನ್‌ನ ಆಧಾರದ ಮೇಲೆ MT, iMT, AT, IVT ಮತ್ತು DCT ಎಂಬ ಒಟ್ಟು ಐದು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತಿದೆ.


Click it and Unblock the Notifications








