Kia: ಡೀಲರ್‌ಶಿಪ್ ತಲುಪಿದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್.. ಎದುರಾಳಿಗಳಿಗೆ ಡವ - ಡವ!
ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಿಯಾ (Kia), ಕಳೆದ ಕೆಲವು ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಜುಲೈ ತಿಂಗಳು ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಫೇಸ್‌ಲಿಫ್ಟ್ ಸೆಲ್ಟೋಸ್ (facelift Seltos) ಬಿಡುಗಡೆ ಮಾಡಿತ್ತು. ಸದ್ಯ, ಈ ಕಾರಿನ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬೇಸ್ ವೇರಿಯೆಂಟ್, ವಿವಿಧ ರಾಜ್ಯಗಳ ಸ್ಥಳೀಯ ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭವಾಗಿದೆ ಎಂಬ ವಿವರಗಳು ದೊರೆತಿದೆ. ಅದು ಕೂಡ ಈ ಕಾರಿನ ಬೆಲೆ ಘೋಷಣೆಯಾಗಿ ಸುಮಾರು ಎರಡು ತಿಂಗಳ ನಂತರ. ಫೇಸ್‌ಲಿಫ್ಟ್ ಸೆಲ್ಟೋಸ್, ಭಾರತದಲ್ಲಿ ರೂ10.90 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಹುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಎಚ್‌ಟಿಇ, ಎಚ್‌ಟಿಕೆ ಒಳಗೊಂಡಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಜೊತೆಗೆ ಮೂರು ವಿವಿಧ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು,133 bhp ಪವರ್, 144 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಎಂಟಿ, ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.
ಇನ್ನೊಂದು, 1.5-ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 158 bhp ಪವರ್, 253 Nm ಪೀಕ್ ಟಾರ್ಕ್, 1.5 ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿರುವ ಸೆಲ್ಟೋಸ್ ಎಸ್‌ಯುವಿ, 114 bhp ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6 ಸ್ವೀಡ್ ಅಥವಾ 7 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ.

ಮೈಲೇಜ್ ವಿಷಯವಾಗಿ ಹೇಳುವುದಾದರೆ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ 17.7 kmpl ರಿಂದ 20.7 kmpl ಇಂಧನ ದಕ್ಷತೆಯನ್ನು ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ 360 ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಈ ಕಾರು ಪಡೆದಿದೆ.
ಸುರಕ್ಷತೆಯ ವಿಚಾರದಲ್ಲಿ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಇದು, ಅತ್ಯಾಧುನಿಕ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್), 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಸೇರಿದಂತೆ ಅನೇಕ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಕಿಯಾ, ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರುವಂತೆ ಇದೇ ಸೆಲ್ಟೋಸ್ ಎಸ್‌ಯುವಿ ಹಾಗೂ ಕ್ಯಾರೆನ್ಸ್ ಎಂಪಿವಿ ಬೆಲೆಯನ್ನು ಏರಿಕೆ ಮಾಡುವುದಾಗಿ ತಿಳಿಸಿದೆ. ಆದರೆ, ಸೆಲ್ಟೋಸ್ ಯಾವ ರೂಪಾಂತರಗಳ ಬೆಲೆ ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಕಂಪನಿಯಿಂದ ಸ್ಪಷ್ಟನೆಯಿಲ್ಲ. ವಿಶ್ವಾಸಾರ್ಹ ಮೂಲಗಳ ಮಾಹಿತಿ ಪ್ರಕಾರ, ರೂ.20,000 ದಿಂದ ರೂ.40,000 ದರ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಇನ್ನುಳಿದಂತೆ, ಸೋನೆಟ್, ಕಾರ್ನಿವಲ್ ಹಾಗೂ ಇವಿ6 ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಕಿಯಾ ಕಂಪನಿಯು ಯಾವುದೇ ಹೆಚ್ಚಳ ಮಾಡಿಲ್ಲ. ಸೆಲ್ಟೋಸ್ ಎಸ್‌ಯುವಿ ಈಗಾಗಲೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಹೊಂದಿರುವುದರಿಂದ ನೂತನ ದರ ಏರಿಕೆಯೂ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿದೆ. ಹಬ್ಬದ ಋತುವಿನಲ್ಲಿ ಈ ಕಾರಿಗೆ ಮತ್ತಷ್ಟು ಡಿಮ್ಯಾಂಡ್ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: Link


Click it and Unblock the Notifications








