Kia Seltos: ಬಹುನಿರೀಕ್ಷಿತ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬುಕ್ಕಿಂಗ್ ಶುರು, ಪ್ರತಿಸ್ಪರ್ಧಿಗಳಿಗೆ ಆತಂಕ

ಭಾರತದಲ್ಲಿ ಕಿಯಾ (Kia) ಕಂಪನಿ ಕಾರುಗಳಿಗೆ ಭಾರೀ ಬೇಡಿಕೆಯಿದೆ. ಸೆಲ್ಟೋಸ್ ಫೇಸ್‌ಲಿಫ್ಟ್ (Seltos facelift) ಕಂಪನಿಯ ಬಹುನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ. ಕೆಲವೇ ದಿನಗಳ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಇಂದಿನಿಂದ ಫ್ರೀ ಬುಕ್ಕಿಂಗ್ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಪಡೆಯುವ ವಿಶ್ವಾಸದಲ್ಲಿ ಕಿಯಾ ಇದೆ.

ಸದ್ಯ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ ಫ್ರೀ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.25,000 ಪಾವತಿಸುವ ಮೂಲಕ ಆನ್‌ಲೈನ್ ಅಥವಾ ಕಂಪನಿಯ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಕಾಯ್ದಿರಿಸಬಹುದು. ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು, ಈ ಕಾರನ್ನು ಆರ್ಡರ್ ಮಾಡುವ ಸಾಧ್ಯತೆಯಿರುವುದರಿಂದ ವಿತರಣೆಗೆ ಕೊಂಚ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Kia Seltos: ಬಹುನಿರೀಕ್ಷಿತ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬುಕ್ಕಿಂಗ್ ಶುರು, ಪ್ರತಿಸ್ಪರ್ಧಿಗಳಿಗೆ ಆತಂಕ

ಕಿಯಾ ಕಂಪನಿ 'ಕೆ-ಕೋಡ್' ಪ್ರೋಗ್ರಾಮ್ ಅನ್ನು ಪರಿಚಯಿಸಿದೆ. ಇದರಿಂದ ಕಾರನ್ನು ಬುಕ್ಕಿಂಗ್ ಮಾಡಿದರೆ, ಅಂತಹ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಿ, ಬೇಗನೇ ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ಘೋಷಿಸಿದೆ. ಆದರೆ, ಕೆ-ಕೋಡ್ ಜೆನರೇಟ್ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ, ಹಿಂದಿನ ಸೆಲ್ಟೋಸ್ ಕಾರಿನ ಮಾಲೀಕರನ್ನು ಸಂಪರ್ಕಿಸಬೇಕು. ಮೈಕಿಯಾ (MyKia) ಅಪ್ಲಿಕೇಶನ್ ಮೂಲಕ 'ಕೆ-ಕೋಡ್' ಜನರೇಟ್ ಮಾಡುವಂತೆ ಅವರನ್ನು ಕೇಳಬೇಕು.

ಇಲ್ಲವೇ, ಆಸಕ್ತ ಗ್ರಾಹಕರು, ಕಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಸೆಲ್ಟೋಸ್‌ನ VIN (ವಾಹನ ಗುರುತಿನ ಸಂಖ್ಯೆ) ಸಂಖ್ಯೆಯನ್ನು ಎಂಟ್ರಿ ಮೂಲಕ ಕೆ-ಕೋಡ್ ಜನರೇಟ್ ಮಾಡಬಹುದು. ಈ ಸೆಲ್ಟೋಸ್ ಫೇಸ್‌ಲಿಫ್ಟ್, ಸುಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್) ಹೊಂದಿದೆ. ಈ ತಂತ್ರಜ್ಞಾನ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಪವರ್‌ಟ್ರೇನ್‌ ಬಗ್ಗೆ ಮಾತನಾಡುವುದಾದರೆ, ಈ ಕಾರು ಮೂರು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಟರ್ಬೊಚಾರ್ಜ್ಡ್ ಡಿಸೇಲ್ ಎಂಜಿನ್ ಹಾಗೂ 1.5 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಪವರ್ ಫುಲ್ ಎಂಜಿನ್ ಪಡೆದಿರುವುದರಿಂದ ಈ ಕಾರು, 20.8 kmpl ಹೆಚ್ಚಿನ ಮೈಲೇಜ್ ನೀಡಬಹುದು.

ವೈಶಿಷ್ಟ್ಯದ ವಿಷಯಕ್ಕೆ ಬರುವುದಾದರೆ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಹಿಂದಿನ ಮಾದರಿಗೆ ಹೋಲಿಸಿದರೆ ಭರಪೂರ ಫೀಚರ್ಸ್ ಹೊಂದಿದ್ದು, ಡ್ಯುಯಲ್ ಸ್ಕ್ರೀನ್ ಸೆಟಪ್ ಪಡೆದಿದೆ. 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. 360 ಡಿಗ್ರಿ ಸರೌಂಡ್ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್, 8 ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಒಳಗೊಂಡಿದೆ.

ಬೆಲೆ ವಿಷಯವಾಗಿ ಹೇಳುವುದಾದರೆ, ಐದು ಆಸನ ಆಯ್ಕೆಯನ್ನು ಹೊಂದಿರುವ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಭಾರತದ ಮಾರುಕಟ್ಟೆಯಲ್ಲಿ ರೂ.10.89 ಲಕ್ಷದ ಆರಂಭಿಕ ದರದಲ್ಲಿ (ಎಕ್ಸ್ ಶೋರೂಂ) ಲಭ್ಯವಾಗಲಿದೆ. ಆದರೆ, ರೂಪಾಂತರಗಳ ಅನ್ವಯ ಬೆಲೆಯನ್ನು ಮುಂಬರುವ ತಿಂಗಳು ಘೋಷಿಸಲಾಗುತ್ತದೆ. ಈ ಕಾರಿಗೆ ದೇಶದಲ್ಲಿ ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಪೋಕ್ಸ್‌ವ್ಯಾಗನ್ ಟೈಗನ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇನ್ನು, ಕಿಯಾ ದೇಶಕ್ಕೆ ಬಂದು ನಾಲ್ಕು ವರ್ಷ ಕಳೆಯುವುದರಲ್ಲಿ 1 ಮಿಲಿಯನ್ (10 ಲಕ್ಷ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಅತ್ಯಾಧುನಿಕ ತಯಾರಿಕ ಘಟಕದಲ್ಲಿ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಹೊರತರುವ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಯಿತು. ಅದರಲ್ಲೂ 'ಸೆಲ್ಟೋಸ್' ಕಂಪನಿಯ ಜನಪ್ರಿಯ ಕಾರು ಮಾದರಿಯಾಗಿ ಹೊರಹೊಮ್ಮಿದೆ.

More from DriveSpark

Article Published On: Friday, July 14, 2023, 12:37 [IST]
English summary
Kia seltos facelift suv booking open details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+