ಅತ್ಯಾಕರ್ಷಕ ಪ್ಲುಟೋನ್ ಬ್ಲೂ ಬಣ್ಣದಲ್ಲಿ ಲಭ್ಯವಾಗಲಿದೆ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್: ಜುಲೈ 4 ರಂದು ಮಾರುಕಟ್ಟೆಗೆ
ಪ್ರಸಿದ್ದ ಕಾರು ತಯಾರಿಕಾ ಕಂಪನಿ ಕಿಯಾ ತನ್ನ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರನ್ನು ಇದೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ತರಲಿದೆ. ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರಿನ ಕುರಿತಾಗಿನ ಬಹುತೇಕ ಫಿಚರ್‌ಗಳು ಬದಲಾವಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಎಲ್ಲಾ ಪೋಸ್ಟ್‌ಗಳಿಗೂ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದೀಗ ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos) ಕಾರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ಈ ಕಾರು ಸದ್ದು ಮಾಡುತ್ತಿರುವುದು ಇದರ ಬಣ್ಣದಿಂದ. ಹೌದು, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರು ಈಗ ಗ್ರಾಹಕರಿಗೆ ನೀಲಿ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

ಇನ್ನು ಕಿಯಾ ಈ ಕಾರಿನ ಬಣ್ಣವನ್ನು ಪ್ಲುಟೋನ್ ಬ್ಲೂ ಎಂದು ಹೆಸರಿಸಿದ್ದು, ಗ್ರಾಹಕರು ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರನ್ನು ಬುಕಿಂಗ್ ಮಾಡುವ ಸಂಧರ್ಭದಲ್ಲಿ ಪ್ಲುಟೋನ್ ಬ್ಲೂ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಳೆದ ಜನರೇಷನ್ ಕಿಯಾ ಸೆಲ್ಟೋಸ್‌ನಲ್ಲಿ ಈ ಬಣ್ಣದ ಆಯ್ಕೆ ಇರಲಿಲ್ಲ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರು ಇತರ ಯಾವ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ನಮಗಿನ್ನೂ ಲಭ್ಯವಾಗಿಲ್ಲ. ವರದಿಗಳ ಪ್ರಕಾರ ಇದರ ಆಕರ್ಷಕ ಬಣ್ಣವಾದ ಕಪ್ಪು ಈ ಬಾರಿಯೂ ಸಹ ಮುಂದುವರೆಯಲಿದೆ ಎಂಬುದು ತಿಳಿದು ಬಂದಿದೆ. ಇನ್ನು ಇದಕ್ಕೂ ಮುಂಚೆ ಕಿಯಾ ತನ್ನ ಕಾರಿನಲ್ಲಿ ಏನೇನು ಫೀಚರ್‌ಗಳು ಇರಲಿದೆ ಎಂಬುದನ್ನು ಸಣ್ಣ ವಿಡಿಯೋ ಮೂಲಕ ತಿಳಿಸಿತ್ತು.

ಮೊನ್ನೆಯಷ್ಟೇ ಬಿಟ್ಟ ಟೀಸರ್‌ನಲ್ಲಿ ಹಲವಾರು ಫೀಚರ್‌ಗಳನ್ನು ಈ ಹೊಸ ಕಾರ್‌ನಲ್ಲಿ ಬಿಡಲಿದೆ ಎಂದು ಕಿಯಾ ಸಣ್ಣ ಸುಳಿವೊಂದು ನೀಡಿತ್ತು. ಅದರಲ್ಲಿ ಪಾನೋರಾಮಿಕ್ ಸನ್‌ರೂಫ್, ಟ್ವಿನ್ ಸ್ಕ್ರೀನ್ ಕರ್ವ್ ಡಿಸ್ಪ್ಲೇ, ಅಡಾಸ್(ADAS), ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ / ಆ್ಯಂಡ್ರಾಯ್ಡ್ ಆಟೋ ಪ್ರಮುವಾದವು.
ಇದರಲ್ಲಿ ಗಮನಿಸಬೇಕಾದ ಫೀಚರ್ ಎಂದರೆ ಅದು ಅಡಾಸ್. ಈ ಸೆಗ್ಮೆಂಟ್‌ನಲ್ಲಿ ಅಡಾಸ್(ADAS) ಫೀಚರ್ ಬಂದಿರುವುದು ಇದೇ ಮೊದಲೇನಲ್ಲ. ಈ ಫೆಸ್‌ಲಿಫ್ಟ್ ಕಿಯಾ ಸೆಲ್ಟೋಸ್‌ನಲ್ಲಿ ಅಡಾಸ್(ADAS) ಫೀಚರ್ ಬರಲಿದ್ದು, ಇದರಿಂದ ಪ್ರಯಾಣ ಇನ್ನೂ ಆರಾಮದಾಯಕವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಈ ಫೀಚರ್ ಅಷ್ಟೊಂದು ಉಪಯೋಗಕ್ಕೆ ಬರದೇ ಇದ್ದರು, ಹೆದ್ದಾರಿಗಳಲ್ಲಿ ಉಪಯೋಗವಾಗಲಿದೆ.
ಮೇಲೆ ತಿಳಿಸಿದ ಫೀಚರ್‌ಗಳ ಆಗಮನದಿಂದ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮತ್ತಷ್ಟು ಐಷಾರಾಮಿಯಾಗಲಿದೆ ಎಂಬುದು ಗ್ರಾಹಕರ ಅಭಿಪ್ರಾಯ. ಇನ್ನು ಈ ಹೊಸ ಕಾರಿನ ಬೆಲೆ ಎಷ್ಟೆಂದು ಕೆಲವೇ ದಿನಗಳಲ್ಲಿ ಹೊರಬರಲಿದ್ದು, ಇದು ಈ ಕಾರಿನ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಹಲವರ ಲೆಕ್ಕಾಚಾರ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








