Kia Car: ಇಷ್ಟು ಬೇಗ ಈ ಕಿಯಾ ಕಾರು ಬರುತ್ತೆ ಅಂತ ನಿರೀಕ್ಷಿಸಿರಲಿಲ್ಲ.. ಪ್ರತಿಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!

ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಿಯಾ (Kia) ಭಾರತದಲ್ಲಿ ನಿಧಾನವಾಗಿ ಜನಪ್ರಿಯತೆಗಳಿಸುತ್ತಿದೆ. ಇದೀಗ, ಕಂಪನಿಯ ನವೀಕರಿಸಿದ ಸೆಲ್ಟೋಸ್ ಎಸ್‌ಯುವಿ (2023) ಜುಲೈ 4ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಈ ಮೊದಲು, 2022ರ ಜೂನ್ ತಿಂಗಳಲ್ಲಿಯೇ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಕಾರು, ಚೊಚ್ಚಲ ಬಾರಿಗೆ ಜಾಗತಿಕ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು.

ಈಗಾಗಲೇ, ಭಾರತದ ರಸ್ತೆಗಳಲ್ಲಿ ನವೀಕರಿಸಿದ ಸೆಲ್ಟೋಸ್ ಎಸ್‌ಯುವಿ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಕಾರು ಖರೀದಿದಾರರು ಇದರ ಮೇಲೆ ದೊಡ್ಡ ಮಟ್ಟದ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಈ ನೂತನ ಸೆಲ್ಟೋಸ್ ಎಸ್‌ಯುವಿ, ಹೊರ ಹಾಗೂ ಒಳಭಾಗದಲ್ಲಿ ಸಾಕಷ್ಟು ಆತ್ಯಾಧುನಿಕ ಬದಲಾವಣೆಗಳನ್ನು ಪಡೆದು ಕೊಂಡಿರಲಿದ್ದು, ನೋಡಲು ಅತ್ಯಾಕರ್ಷಕವಾಗಿ ಕಾಣಿಸಲಿದೆ.

Kia Car: ಇಷ್ಟು ಬೇಗ ಈ ಕಿಯಾ ಕಾರು ಬರುತ್ತದೆ ಅಂತ ನಿರೀಕ್ಷಿಸಿರಲಿಲ್ಲ.. ಪ್ರತಿಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!

ಫೇಸ್‌ಲಿಫ್ಟೆಡ್ ಕಿಯಾ ಸೆಲ್ಟೋಸ್ ಎಸ್‌ಯುವಿ, ದೊಡ್ಡದಾದ ಗ್ರಿಲ್ (ವಿಶೇಷವಾಗಿ ಏರ್ ಡ್ಯಾಮ್ ಕಡಿಮೆಯಾಗಿದೆ) ನವೀಕರಿಸಿದ ಹೆಡ್ ಲೈಟ್ಸ್, ಹೊಸದಾದ ಎಲ್ಇಡಿ DRL ಹೊಂದಿರಲಿದೆ. ನೂತನವಾಗಿ ವಿನ್ಯಾಸಗೊಳಿಸಲಾದ 17 ಇಂಚಿನ ಅಲಾಯ್ ವೀಲ್ಸ್, ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಹಾಗೂ ಸ್ಲೀಕರ್ ಟೈಲ್‌ಲೈಟ್‌ಗಳನ್ನು ಪಡೆದಿರಲಿದೆ. ಜೊತೆಗೆ ನವೀಕೃತ ಬಂಪರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಈ ನವೀಕರಿಸಿದ ಕಿಯಾ ಸೆಲ್ಟೋಸ್ ಎಸ್‌ಯುವಿ, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಪ್ರಮುಖವಾಗಿ ಇನ್ಫೋಟೈಮೆಂಟ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯಲ್ ಸ್ಕ್ರೀನ್ ಪಡೆದಿರಬಹುದು. ಇದಿಷ್ಟೇ ಅಲ್ಲದೆ, ಪನೋರಮಿಕ್ ಸನ್‌ರೂಫ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಹೆಡ್ಸ್ ಅಪ್ ಡಿಸ್ಪ್ಲೇ , ವೈರ್‌ಲೆಸ್ ಫೋನ್ ಚಾರ್ಜರ್‌ ಸೇರಿದಂತೆ ಹಲವು ಫೀಚರ್ಸ್ ಹೊಂದಿರಬಹುದು.

Kia Car: ಇಷ್ಟು ಬೇಗ ಈ ಕಿಯಾ ಕಾರು ಬರುತ್ತದೆ ಅಂತ ನಿರೀಕ್ಷಿಸಿರಲಿಲ್ಲ.. ಪ್ರತಿಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!

ನವೀಕರಿಸಿರುವ ಸೆಲ್ಟೋಸ್ ಎಸ್‌ಯುವಿ, ಕಿಯಾ ಕ್ಯಾರೆನ್ಸ್, ಹ್ಯುಂಡೈನ ವೆರ್ನಾ ಸೆಡಾನ್ ಮತ್ತು ಅಲ್ಕಾಜರ್ ಎಸ್‌ಯುವಿಯಲ್ಲಿ ಕಂಡುಬರುವ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನೇ ಪಡೆದಿರಬಹುದು. ಈ ಎಂಜಿನ್, 158 bhp ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಈಗಿರುವ ಸೆಲ್ಟೋಸ್ ಮಾದರಿಯಲ್ಲಿರುವಂತೆಯೇ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಗ್ರಾಹಕರಿಗೆ ದೊರೆಯುವ ನೀರಿಕ್ಷೆಯಿದೆ. ಈ ನವೀಕರಿಸಿರುವ ಕಿಯಾ ಸೆಲ್ಟೋಸ್ ಎಸ್‌ಯುವಿ, ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯಾಧುನಿಕವಾಗಿದ್ದು, 6 ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಅನ್ನು ಪಡೆದಿರುವ ಸಾಧ್ಯತೆಯಿದೆ.

Kia Car: ಇಷ್ಟು ಬೇಗ ಈ ಕಿಯಾ ಕಾರು ಬರುತ್ತದೆ ಅಂತ ನಿರೀಕ್ಷಿಸಿರಲಿಲ್ಲ.. ಪ್ರತಿಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ!

ಕಿಯಾ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಎಸ್‌ಯುವಿ, ಐದು ಆಸನ ಆಯ್ಕೆಯಲ್ಲಿ ರೂ.10 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಕಾರಿಗೆ ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರಸ್ ಸಿ3 ಏರ್‌ಕ್ರಾಸ್ ಪ್ರತಿಸ್ಪರ್ಧಿಯಾಗಿವೆ.

ಕಿಯಾ, ಇತರೆ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದರೂ ಭಾರತದ ಮಾರುಕಟ್ಟೆಯಲ್ಲಿ ನವೀಕರಿಸಿದ ಸೆಲ್ಟೋಸ್ ಎಸ್‌ಯುವಿಯನ್ನು ಅನಾವರಣ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದೆ. 2019ರಲ್ಲಿ ದೇಶಕ್ಕೆ ಬಂದ ಕಿಯಾ ಈಗಾಗಲೇ ನೀರಿಕ್ಷೆಗಿಂತ ಹೆಚ್ಚಿನ ಪ್ರಗತಿ ಸಾಧಿಸಿದ್ದು, ನವೀಕರಿಸಿದ ಸೆಲ್ಟೋಸ್ ಗೆ ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

More from DriveSpark

Article Published On: Tuesday, June 20, 2023, 10:17 [IST]
English summary
Kia seltos facelift unveil on july 4th india details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+