ಭಾರೀ ಡಿಮ್ಯಾಂಡ್ ನಡುವೆ ಸೆಲ್ಟೋಸ್ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು 2023ರ ಕಿಯಾ ಸೆಲ್ಟೋಸ್ (Kia Seltos ) ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿ ಸುನಾಮಿ ಎಬ್ಬಿಸಿದೆ.
ಈ ರಿಫ್ರೆಶ್ ಮಾಡೆಲ್ ಕಿಯಾ ಸೆಲ್ಟೋಸ್ ಎಸ್‍ಯುವಿ ಆರಂಭದಲ್ಲಿ ರೂ.10.90 ಲಕ್ಷದಿಂದ ರೂ.20 ಲಕ್ಷದವರೆಗೆ ಬೆಲೆಯಲ್ಲಿ ಪರಿಚಯಿಸಲಾಯಿತು. ಇದೀಗ ಕಿಯಾ ಇಂಡಿಯಾ ಕಂಪನಿಯು ಆಯ್ದ ರೂಪಾಂತರಗಳ ಮೇಲೆ ರೂ.30,000 ವರೆಗೆ ಏರಿಕೆ ಮಾಡಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯ HTE ಮ್ಯಾನುವಲ್ ರೂಪಾಂತರವು ಅದರ ಮೂಲ ಬೆಲೆಯನ್ನು ಉಳಿಸಿಕೊಂಡಿದೆ ಎಂದು ಗಮನಿಸಬೇಕಾದ ಅಂಶವಾಗಿದೆ.

ಆದರೆ ಸಂಪೂರ್ಣವಾಗಿ ಲೋಡ್ ಮಾಡಲಾದ X-ಲೈನ್ ಆಟೋಮ್ಯಾಟಿಕ್ ರೂಪಾಂತರದ ಬೆಲೆಯು ರೂ.20.30 ಲಕ್ಷಕ್ಕೆ ಲಭ್ಯವಿದೆ. ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿ ಸೊಗಸಾದ ವಿನ್ಯಾಸ, ವೈಶಿಷ್ಟ್ಯ-ಪ್ಯಾಕ್ಡ್ ಇಂಟಿರಿಯರ್ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಹೊಸ 2023ರ ಸೆಲ್ಟೋಸ್ ಜುಲೈ 21ರಿಂದ ಬಿಡುಗಡೆಯಾದಗಿನಿಂದ, ಗ್ರಾಹಕರು ಈ ಹೊಸ ಮತ್ತು ನವೀಕರಿಸಿದ ಆವೃತ್ತಿಯನ್ನು ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.
ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿ ಬೇಡಿಕೆ ಹೆಚ್ಚಾದಂತೆ, ವಿಭಿನ್ನ ರೂಪಾಂತರಗಳಿಗಾಗಿ ಕಾಯುವ ಅವಧಿಯನ್ನು ವಾಹನ ತಯಾರಕರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಐಎಂಟಿ ಯುನಿಟ್, ಸಿವಿಟಿ ಯುನಿಟ್, ಸಿವಿಟಿ ಯುನಿಟ್, 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ. ಇನ್ನು 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ.
ಈ ಎಂಜಿನ್ 113bhp ಮತ್ತು 144Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ಅನ್ನು 6-ಸ್ಪೀಡ್ iMT ಯುನಿಟ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ನೀಡಬಹುದು. ಇನ್ನು ಕಿಯಾ ಸೆಲ್ಟೋಸ್ ಅದರ ಫೀಚರ್ಸ್-ಲೋಡ್ ಮಾಡಲಾದ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್ ವಿಭಿನ್ನವಾಗಿಲ್ಲ. 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ವಿಕಸನೀಯ ವಿನ್ಯಾಸದ ಥೀಮ್ ಅನ್ನು ಅನುಸರಿಸುತ್ತದೆ. ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟೆಡ್ ಮಾಡೆಲ್ ಅದರ ಸ್ಪೋರ್ಟಿ ವಿನ್ಯಾಸದ ಅಂಶಗಳೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿದೆ.
ನವೀಕರಿಸಿದ ಮಾದರಿಯ ಒಳಭಾಗವು ಅದರ ಹೊಸ ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಹೆಚ್ಚು ಹೈಟೆಕ್ ಆಗಿ ಕಾಣುತ್ತದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಗ್ಗೆ ಹೇಳುವುದಾದರೆ, ಪ್ರಮುಖ ಅಂಶವೆಂದರೆ ಈಗ ಲೆವೆಲ್-2 ADAS ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್-ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.


Click it and Unblock the Notifications








